ಪುಟ:ರಘುಕುಲ ಚರಿತಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ +ww* • • • • • . • • •+ ಅಹಹಾ !! ಮೃಗಗಳಲ್ಲಿಯೂ ಇಂತಪಾರವಾದ ದಾಂಪತ್ಯಾನುರಾಗವು ನೆಲೆಗೊಂಡಿರುವುದಲ್ಲಾ ಎಂದು ನೆನೆದು, ಅರಸಿನ ಎದೆಯು ಕರುಣೆಯಿಂದ ಮೃದುವಾಗಿ ಕರಗಿತು, ಹೊಡಿಯಲಿಕ್ಕೆಳಸದೆ, ಕೂಡಲೆ ಶರವೆಲ್ಲಿ ಮುಂ ದರಿದು ಹರಿಣವನ್ನು ಇರಿವುದೋ ಎಂದು ಅಂಜಿ, ಕರಲಾಘವದಿಂದ ತೊಟ್ಟ ಬಾಣವನ್ನು ಬಲುಬೇಗನೆ ಇಳಿಸಿದನು, ಉಳಿದ ಮಿಕಗಳೂ ಹೆದರಿ, ಬಲು ಚಪಲಗಳಾದ ತಮ್ಮ ದೃಷ್ಟಿಗಳನ್ನು ಅರಸಿನಲ್ಲಿ ನಟ್ಟುವು, ದೊರೆಗೆ ಹೋಲಿಕೆಯಿಂದ ತನ್ನ ಪ್ರಿಯಸತಿಯರ ನಯನಗಳ ಬೆಡಗು ನೆನಪಿಗೆ ಬಂದಿತು, ಅವುಗಳಲ್ಲಿಡಬೇಕೆಂದು ಬಲವಾಗಿ ತೊಟ್ಟಿದ್ದ ಅಂ ಬನ್ನು ಪಟ್ಟಾಗಿ ಹಿಡಿದಿದ್ದ ಹಿಡಿಯು- ಮುಂದರಿಯಲಾರದೆ ಕನಿಕರದಿಂದ ತಾನಾಗಿ ಸಡಲಿ ಕೆಳಗೆ ಸರಿಯಿತು ಅಲ್ಲಿಂದ ಮತ್ತೊಂದುಕಡೆಗೆ ತಿರುಗಿದನು, ಕೊಳಗಳ ನಡುವೆ ಇಳಿಯಬಿದ್ದಿದ್ದ ಕಾಡುಹಂದಿಗಳ ಹಿಂಡು ಪೊಡವಿಯೊಡೆಯನಂ ಕಂಡ ಕೂಡಲೆ ಮೇಲೆಬಂದು ದುಡದುಡನೆ ಓಡಿದುವು, ಬಳಲಿಕೆಯಿಂ ದರಳಿದ ಬಾಯ್ದ ಳಿಂದ ತುಂಗೆಗಡ್ಡೆಯ ಮೊಳಕೆಗಳು ದಾರಿಯುದ್ದಕ್ಕೂ ಉದುರಿದ್ದುವು, ಮತ್ತು , ಕೆಸರಿನಲ್ಲಿ ಹೂತಿದ್ದ ಹೆಜ್ಜೆಗಳ ಗುರುತು ಗಳ ನೀಳವಾಗಿ ಹಾದಿಯಲ್ಲಿ ಕಾಣಬರುತ್ತಿದ್ದುವು, ಆ ಜಾಡನ್ನು ಹಿಡಿದೇ ಅರಸು ಅವುಗಳನ್ನು ಹಿಂಬಾಲಿಸಿದನು, ಕೂಡಲೆ ಕುದರೆಯ ಬೆನ್ನಿನಮೇಲೆ ಕುಳಿತಿದ್ದ ವನು ಮೇಲೆ ಯನ್ನೂಂದುಕಡೆಗೆತುಸ ಬಾಗಿಸಿ, ಅಂಬನ್ನು ಎಸೆಯುತಲಿದ್ದನು, ವರಾಹಗಳು - ತಮ್ಮ ಮೈಮೇಲಿನ ಮುಳ್ಳುಗಳನ್ನು ನೆಟ್ಟಗೆ ನಿಲ್ಲಿಸಿ, ಅರಸನನ್ನು ಇದಿರಿಸಿ, ನುಗ್ಗಿ, ಇರಿಯಲೆಳ ಸಿದುವು, ಆದರೆ - ಅಹ್ಮರಲ್ಲಿಯೇ ತಮ್ಮ ಹಿಂಗಡೆಗೆ ಆಸರೆಯಾಗಿದ್ದ ಮರದ ಬುಡದಕಡೆಯಿಂದ ಬಾಣಗಳ ಪೆಟ್ಟನ್ನು ತಿಂದ ತಮ್ಮನ್ನು ಅರಿ ಯಲೇ ಇಲ್ಲ. ತರುವಾಯ ಬೇರೊಂದೆಡೆಯಲ್ಲಿ - ಭೂರಮಣನು - ಕಾಡುಕೋ ಣನ ಕಣ್ಣನ್ನು ಲಕ್ಷವಿಟ್ಟು ಕೋಲನ್ನೆ ಸೆದನು, ಆ ಪತ್ರಿಯು-ಬಹು ವೇಗದಿಂದೊಳದೂರಿ, ಮಹಿಪ್ಪದ ಮೆಯ್ಕೆನು ಭೇದಿಸಿಕೊಂಡು, ಹೊರಗೆ