ಪುಟ:ರಘುಕುಲ ಚರಿತಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಕಾ ರ ದ . ಬಂದು, ತನ್ನ ಗರಿಗೆ ರಕ್ತದ ಲೇಪವಿಲ್ಲದೆ, ಮೊದಲಾಸೈರಿಭವನ್ನು ಕೆಳ ಗುರುಳಸಿ, ಆಮೇಲೆ ತಾನೂ ಬಿದ್ದಿತು. - ಇನ್ನೊಂದುಕಡೆ – ನೃಪತಿಯು - ತೀಕವಾದ ಕುರಪ್ರಗಳೆಂಬ ಬಾಣಗಳನ್ನು ಬಿಟ್ಟು, ಖಡ್ಗಮೃಗಗಳ ಕೋಡುಗಳನ್ನು ಕೆಳಗಿಳುಹಿ, ಅವುಗಳ ಶಿರಗಳನ್ನು ಹಗುರಗಳಾಗುವಂತೆಸಗಿದನು, ಆದರೆ-ವಿನಯದಲ್ಲಿ ನೆಲೆಗೊಂಡಿರುವ ಅರಸು - ಹೆಮ್ಮೆಯಿಂದ ಕೊಬ್ಬಿ, ಹೆಚ್ಚಿ ಮೆರೆಯುವವ ರನ್ನು ತಗ್ಗಿಸಬೇಕೆಂಬ ಬಯಕೆಯನ್ನುಳವನಲ್ಲದೆ, ತಲೆಯನ್ನೇ ಒಡೆದು, ಉಳಿಸಲೇಬಾರದೆಂದೆಣಿಸುವವನೇ ಅಲ್ಲ. ಅಲ್ಲಿಂದ ಮುಂದೆ ಹೊರಡುತ್ತಿರುವಲ್ಲಿ - ಗವಿಗಳೊಳಗೆ ಪವಳಸಿದ್ಧ ಹುಲಿಗಳು - ರೋಷಗೊಂಡು, ಗಾಳಿಯಿಂದರಳಿ ಬಾಗಿದ ಸರ್ಜಕ ತರು ಗಳ ಕೊನೆಗಳಂತೆಸೆವ ಶಿರಗಳನ್ನುಳುವಾಗಿ, ಮೇಲೆಬೀಳಲು ಬಹು ವೇಗದಿಂದ ಇದಿರಿಗೆ ಹಾರಿಬಂದುವು, ದೊರೆಯು - ನಿರ್ಭಯನಾಗಿ, ಚೆನ್ನಾಗಿ ಪಳಗಿದ ಕೈಚಳಕವುಳ್ಳವನಾದುದರಿಂದ ನಿಮಿಷಮಾತ್ರದಲ್ಲಿ ಅವುಗಳ ಬಾಯ್ಸಳ ಬಿಲಗಳನ್ನು, ಅಂಬುಗಳಿಂದ ತುಂಬಿ, ಬತ್ತಳಿಕೆಗಳ ಸ್ನಾಗಿ ಮಾಡಿದನು. ಆ ಬಳಿಕ ಅವನಿಪಾಲನು - ಮರಗಿಡ ಬಳ್ಳಿಗಳ ಪೊದೆಗಳೊಳಗೆ ಹುಡುಕಿ, ಅಡಗಿರುವ ಸಿಂಹಗಳನ್ನು ಕೊಲ್ಲಲೆಳಸಿ, ಅಕಾಲದಲ್ಲಿ ಆಕಾ ಶದೊಳಗೆ ಹುಟ್ಟುವ ಉತ್ಸಾತ ಶಬ್ದ ದಂತಿರುವ ಮಾರ್ವಿಘೋಷಗಳಿಂದ ಹೈಭಪಡಿಸಿದನು. ಶೌರದಿಂದ ಮೇಲೆನಿಸಿ, ಮೃಗಗಳ ಸಂಬಂಧ ದಿಂದ ಅವುಗಳಿಗುಂಟಾಗಿರುವ ರಾಜಾ ಎಂಬ ಶಬ್ದವನ್ನು ಹೊಟ್ಟೆಕಿಚ್ಚಿ ನಿಂದ ತಾಳಲಾರದಿದ್ದು ದೇ ಅದಕ್ಕೆ ಮೂಲ. ಹುಟ್ಟಿದಂದಿನಿಂದಲೂ ಆನೆಗಳಲ್ಲಿ ತೀವ್ರವಾದ ವೈರವನ್ನು ಬೆಳಸುತ್ತಾ, ಉಗುರುಗಳ ಸಂದುಗ ಳೊಳಗೆ ಮುತ್ತುಗಳನ್ನೊಳಗೊಂಡಿರುವ ಆ ಕೇಸರಿಗಳನ್ನು ಕೊಂದು, ರಣಾಂಗಣಗಳಲ್ಲಿ ತನಗೆ ಸಹಾಯಮಾಡಿದ್ದ ಗಜಗಳ ಋಣದಿಂದ ಬಿಡುಗ ಡೆಯನ್ನು ಹೊಂದಿದವನನ್ನಾಗಿ ತನ್ನನ್ನು ತಿಳಿದುಕೊಂಡನು. ಒಂದು ಸ್ಥಲದಲ್ಲಿ - ಚಮರ ಮೃಗಗಳನ್ನು ಕಂಡ ಪಾರ್ಥಿವನುಅಶ್ವಾರೂಢನಾಗಿಯೆ ಅವು ಗಳನ್ನು ಬಳಸಿ, ಬಹು ಕೌರವಾದ ಕ ಬ