ಪುಟ:ರಘುಕುಲ ಚರಿತಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೧೧ ಬಾಣಗಳನ್ನು ಪ್ರಯೋಗಿಸಿ, ಪರರಾಜರನ್ನು ಹೇಗೋ ಹಾಗೆ, ಅವುಗ ಳನ್ನೂ ಶುಭಚಾಮರ ಶೂನ್ಯವಾದವುಗಳನ್ನಾಗಿ ಮಾಡಿ, ತತ್ಕಾಲದಲ್ಲಿ ಶಾಂತನಾದನು. ಶೂರರು - ಪರರಾಯರ ಹೆಮ್ಮೆಯನ್ನು ಅಡಗಿಸುವ ರಲ್ಲದೆ ಪ್ರಾಣಹರಣ ಮಾಡಲೆಳಸುವುದಿಲ್ಲ. ಆಮೇಲೆ - ನರನಾಥನು - ತನ್ನ ಹತ್ತಿರದಲ್ಲಿಯೇ ಹಾರಿಹೋಗುತ ಲಿದ್ದ ಚಿತ್ರ ಶಿಖೆಯುಳ್ಳ ನವಿಲನ್ನು ಕಂಡರೂ, ಅದನ್ನು ಗುರಿಕಟ್ಟಿ ಹೊಡೆ ಯಲಿಲ್ಲ. ಏಕೆಂದರೆ - ತನ್ನ ಪ್ರಿಯಪತ್ನಿಯರೊಡನೆ ವನವಿಹಾರದಲ್ಲಿರು ವಾಗ, ಬಳಲಿದ ಆ ತರುಣಿಯರ ಶಿರಗಳಲ್ಲಿ ಚಿತ್ರಮಾಲಾಲಂಕೃತಮಾ ಗಿದ್ದು ಸಡಲಿದ ತಲೆದುರುಬುಗಳು, ಹೋಲಿಕೆಯಿಂದ ಸ್ಮರಣೆಗೆ ಬಂದು, ಮನವಲ್ಲಿಗೆ ತೆರಳಿದುದೇ ಕಾರಣವಾಗಿದ್ದಿತು. ಅದುವರೆಗೆ ಬಹುದೂರದ ದಾರಿಯನ್ನು ಸುತ್ತಿದ್ದಾಯಿತು, ಬಳಲಿ ಕೆಯು ಹೇರಳವಾಯಿತು. ಬೆವರಿನ ಹನಿಗಳು ಮುಖದಲ್ಲಿ ತುಂಬಿದ್ದು ವು, ಹೊಳೆಗಳಮೇಲೆ ಹರಿದು, ತುಂತುರುಗಳನ್ನಾಂತು, ಮರಗಳ ಸಂದುಗ ಳೊಳಗೆ ನುಗ್ಗಿ, ತಳಿರುಗಳನ್ನಲುಗಿಸಿ, ಬರುತಲಿರುವ ವನಮಾರುತವು - ಆ ಅವನಿಚಲನ ಶ್ರಮವನ್ನೆಲ್ಲ ಪರಿಹರಿಸುತಲಿದ್ದಿತು. ಇಂತು ಬೇಟೆ ಯಾಟವನ್ನು ಎಡಬಿಡದೆ ಪೊಡವಿಯಾಇನು ಅನುಸರಿಸುತಲೇ ಬಂದನು, ತನ್ನ ಕರವವನ್ನೆಲ್ಲ ಮರೆತನು, ಆಳಿಕೆಯ ಹೊರೆಯನ್ನೆಲ್ಲ ಮಂತ್ರಿಗ ೪ಗೊಪ್ಪಿಸಿ, ಅತ್ಯಾಸಕ್ತಿಯಿಂದ ತಣಿಯದಿರುವ ದೊರೆಯನ್ನು ಮೃಗ ಯೆಯು ಕಾಮಿನಿಯಂತೆ ಸೆಳೆಯಿತು. ಕಂದ 11 ಕಾಮವು ದನುಭವದಿಂದಂ || ನೇಮದೆ ತಾಂ ಶಾಂತಿ ಹೈದ ದೆಂದುಂ ಬಗೆಯಲ್ || ಹೋಮದೆ ವೈಶಾನರನುಂ || ಕಾಮಂ ಪೆರ್ಹದಯೆ ಶಾಂತ ಮಪುದೆ ಜಗದೊಳ್ || ಆಖೇಟದಾಶೆಯಿಂದ ಹಾಗೆಯೇ ನರದೇವನು ಮುಂದರಿದನು. ಸಂಜೆಯಾಯಿತು, ಪರಿಜನರೆಲ್ಲ ಹಿಂದುಳಿದರು, ಸುಕುವಾರವಾದ ಕುಸುಮ ಕಿಸಲಯಗಳಿಂದ ಒಂದೆಡೆ ತಲ್ಪವನ್ನು ಕಲ್ಪಿಸಿದನು, ಅದರ ಮೇಲೆಯೇ ಸವಳಿಸಿದನು, ಜ್ಯೋತಿಲಕ ತೆಗಳೇ ಅಂದಿನ ಇರುಳು