ಪುಟ:ರಘುಕುಲ ಚರಿತಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ಶಾ ರ ದಾ , [೯

  • v •

ದೀವಿಗೆಗಳಾದುವು. ತ್ರಿಯಾಮೆಯನ್ನೂ ಕಳೆದನು. ಬೆಳಗಾಗುತ ಬಂ ದಿತು, ತಬಟೆಯ ಶಬ್ದ ದಂತಿರುವ ಆನೆಯ ಹಿಂದಿನ ಅಗಲವಾದ ಕಿವಿಗ ಳೆಂಬ ತಾಳಗಳೆ ಸದ್ದನ್ನು ಕೇಳಿ ಎಚ್ಛತನು. ಹಕ್ಕಿಗಳ ಕೂಗೆಂಬ ಕಿವಿಗಿಂಪಾದ ನಂದಿನಂಗಳಗೀತವನ್ನೂ ಆಲಿಸುತ್ತಾ ಆನಂದಿಸಿದನು. ಬಳಿಕ - ಮರಳ ಬೇಟೆಗಾಗಿ ಹೊರಟನು, ಅಲ್ಲಲ್ಲಿ ಸುತ್ತುತ, ಒಂದುವೇಳೆ-ರುರುಮೃಗವನ್ನು ಕಂಡು ಅದನ್ನು ಹಿಂಬಾಲಿಸಿ ನಡೆದನು. ಕಾಡಿನಲ್ಲಿ ಕುದುರೆಯ ವೇಗದಿಂದ ಹಿಂದುಳಿದ ಪರಿವಾರಕ್ಕೆ ಕಾ ಇದೆ ಹೋದನು. ಅಲೆದ ಶ್ರಮದಿಂದ ಅಶ್ರದ ಮೆಯಲ್ಲಿ ಬೆವರಿತು, ಬಾಯೊ ಳಗೆ ನೊರೆಯು ಹೊರಟಿದ್ದಿ ತು ಹಾಗೆಯೇ ನಡೆದು, ತಪಸಿಗಳಿಂದ ತುಂಬಿರುವ ತಮಸಾನದಿಯ ತಡಿಗೈತಂದನು. ಹಳ್ಳದಲ್ಲಿ ಹರಿಯುತಲಿದ್ದ ಆ ಹೊಳೆಯೊಳಗೆ, ಕೊರಳು ಸಣ್ಣಗಿರುವ ಕುಂಭದಿಂದ ನೀರನ್ನು ತುಂಬುತಲಿರುವಾಗ ಉಂಟಾದ ಬುಡಬುಡವೆಂಬ ಗಂಭೀರವಾದ ಶಬ್ದ ವೊಂದು ದೊರೆಗೆ ಕೇಳಬಂದಿತು. ಅದನ್ನು ಆನೆಯ ಬೃಂಹಿತ ಶಬ್ದ ವೆಂದು ನೆನೆದನು. ಆ ಧ್ವನಿಯನ್ನು ಅನುಸರಿಸಿ ಹೋಗಿ, ಲಕ್ಷವನ್ನು ಭೇದಿಸುವ ಬಾಣವನ್ನು ಹೊಡೆದನು. cc ವಿನಾಶಕಾಲಕ್ಕೆ ವಿಪರೀತ ಬುದ್ದಿ ” ಎಂಬ ನಾಣ್ಣುಡಿಯು ಸಟೆಯಲ್ಲ. « ಏಳಿಗೆಯನ್ನು ಬಯ ಸುವ' ಅರಸು ಕಾಳಗವನ್ನು ಬಿಟ್ಟು, ಉಳಿದ ಸಮಯದಲ್ಲಿ ಆನೆಯನ್ನು ಕೊಲ್ಲಬಾರದು ?” ಎಂಬ ಶಾಸ್ತ್ರವನ್ನು ಬಲ್ಲವನೇ ಹೌದು, ಆದರೇನು ? ಆ ಸಮಯದಲ್ಲಿ ಮೂರನೆಯುಂಟಾಯಿತು. ಪರಥನು - ಸುಪಥವನ್ನು ದಾಟಿದನು, ಅಪಥದಲ್ಲಿ ಅಡಿಯನ್ನಿಟ್ಟನು, ಮಾಡಬಾರದುದನ್ನು ಮಾಡಿ ದನು, ಆಗಬಾರದುದೇ ಆಗಬೇಕೆಂಬುದು ಭವಿತವ್ಯತೆಯಾಗಿದ್ದಿತು. ಶಾಸ್ತ್ರಜ್ಞರಾದರೂ ರಜೋಗುಣಕ್ಕೊಳಗಾದರೆ ಕಣ್ಣು ಕಾಣದೆ ದುರಾ ರ್ಗಗಾಮಿಗಳಾಗುತ್ತಾರಲ್ಲವೆ ? ಆ ಕೂಡಲೇ, ಹಾ ! ತಾತಾ !! ಎಂಬ ಗೋಳು ಕೇಳಬಂದಿತು, ಅರಸು ಅಡಗಿದನು, ಬಹು ಖಿನ್ನನಾದನು, ಗಂಡುಹುಲ್ಲಿನ ಪೊದೆಯಲ್ಲಿ, ಶಬ್ದವು ಹುಟ್ಟಿದ ಸ್ಥಲವನ್ನು ಹುಡುಕಿದನು. ಎದೆಯಲ್ಲಿ ಅಲಗುನಟ್ಟು, ಕೈಯ್ಯಲ್ಲಿ ಕುಂಭವನ್ನು ಹಿಡಿದು, ಬಿದ್ದಿರುವ ಮುನಿಕುಮಾರನನ್ನು ಕಂಡನು. ತತ್‌ಕ್ಷಣದಲ್ಲಿಯೇ ತನ್ನ ಹೃದಯದಲ್ಲಿ