ಪುಟ:ರಘುಕುಲ ಚರಿತಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶ್ರೀ ಕಾ ರ ದಾ , YYYYYJ v 7 - 44 / V* (7 JV MIrvvvvvvvvvvv ಮುಖವನ್ನು ಕಾಣದೆಯೇ ನನ್ನಂತೆ ಮರಣವನ್ನು ಪಡೆಯುವೆ ,, ಎಂದು ಶವಿಸಿದನು, ಮೊದಲು ಕಾಲಿನಿಂದ ತುಳಿಯಲು, ತರುವಾಯ ರೋಪ ಗೊಂಡು, ವಿಷವನ್ನು ಕಾರುವ ಸರ್ಪದಂತಿರುವ ಆ ವೃದ್ದ ಮುನಿಯನ್ನು ಕುರಿತು ಮೊದಲು ತಪ್ಪನ್ನು ಮಾಡಿರುವ ಕೋಸಲಪತಿಯು - ಎಲೈ ಭಗವಂತನೇ ! ಮಗನ ಮೊಗದಾವರೆಯನ್ನೇ ಕಾಣದಿರುವ ನನ್ನಲ್ಲಿ ನೀನು ಸಿಡಿಲಿನಂತೆ ಕೆಡಹಿದ : ಪುತ್ರಶೋಕದಿಂದ ಸಾಯುವೆ ,, ಎಂಬ ಈ ಬಿರುನುಡಿಯೂ, ಅನುಗ್ರಹವಾಗಿ ಪರಿಣಮಿಸಿ ಇದೆ. ಕಟ್ಟಿಗೆಗಳಿಂದ ಉರಿಯುತಲಿರುವ ಬೆಂಕಿಯ - ಬೇಸಾಯಕ್ಕೆ ತಕ್ಕು ದೆನಿಸಿಸಿರುವ ನೆಲವನ್ನು ಸುಡುತ್ತಾ, ಆ ಭೂಮಿಗೆ ಬೀಜವು ಸುಖವಾಗಿ ಮೊಳೆಯತಕ್ಕೆ ಶಕ್ತಿಯನ್ನು ಉಂಟುಮಾಡುತ್ತದೆಯಲ್ಲವೆ ? ಎಂದನು. ಇಂತ ಅನರ್ಥವು ಬಂದೊದಗಲು, ಮುನಿಯು- ಜನಾಧಿಪನ ವಿಷ ಯದಲ್ಲಿ ಕರುಣೆಯಿಲ್ಲದವನಾದನು, ಇಂತಸ್ಸ ಪಾಪಕಾರ್ಯವನ್ನು ಮಾಡಿ, ವಧಾರ್ಹನೆನಿಸಿದ ಈ ದುರಾತ್ಮನು ಮುಂದೇನಮಾಡಬೇಕೆಂಬ ದನ್ನು ಅಪ್ಪಣೆಕೊಡಿಸಬೇಕೆಂದು ವಸುಧಾಧಿಪನು ಆ ವೃದ್ದ ತಪಸಿ ಯನ್ನು ವಿನಯದಿಂದ ಪ್ರಾರ್ಥಿಸಿದನು, ಬಳಿಕಲಾ ಮುನಿಯು - ಸುತ ಶೋಕವನ್ನು ಸಹಿಸಲಾರದೆ, ಪತ್ನಿ ಸಹಿತನಾಗಿ, ಸರಾಸುವಾದ ಪುತ್ರ ನನ್ನು ಅನುಸರಿಸಬೇಕೆಂದು ನೆನೆದು, ಕಾವ್ಯ ಸಮೃದ್ಧಿಯಿಂದ ಪ್ರಜ್ವಲಿ ಸುವ ಅಗ್ನಿಯನ್ನು ಮಾತ್ರ ಬೇಡಿದನು, ಈಪ್ರಕಾರವಾಗಿ ಸಂಭಾವಿಸುತಲಿರುವ ಸಮಯಕ್ಕೆ ಪರಿಜನರೆ ಲ್ಲರೂ ಬಂದು ಸೇರಿದರು, ಅರಸು-ಮುನಿಯ ಅಪ್ಪಣೆಯಂತೆ ಅನುಚರ ರಿಂದ ಚಿತೆಯನ್ನು ಅಣಿಮಾಡಿಸಿ, ಅಲ್ಲಿಂದ ಮುಂದೆ ನಡೆಸಬೇಕಾದ ಕೆಲಸವನ್ನೆಲ್ಲ ನೆರವೇರಿಸಿ, ಮುನಿತನಯನನ್ನು ಕೊಂದುದರಿಂದ ಬಂದ ಪಾತಕವು ಧೆ –ವನ್ನು ತೊಲಗಿಸಲು, ಬಡಬಾಗ್ನಿಯನ್ನೊಳಗೊಂಡಿರುವ ಕಡಲಿನಂತೆ, ಆತ್ಮನಾಶಕ್ಕೆ ಕಾರಣವಾಗಿ, ಅಂತರಂಗದಲ್ಲಿ ಕುದಿಯುತಲಿ ರುವ ಮುನಿಶಾಪವನ್ನು ಧರಿಸಿ, ಅಲ್ಲಿಂದ ಹೊರಟು, ಪರಿಜನದಿಂದೊಡ ಗೂಡಿ ಪುರವನ್ನು ಸೇರಿದನು. - ಆಂತು ಮೃಗಯಾವರ್ಣನವೆಂಬ ಒಂಭತ್ತನೆಯ ಅಧ್ಯಾಯಂ -