ಪುಟ:ರಘುಕುಲ ಚರಿತಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲತರಿತಂ ೧೫. ಶ್ರೀ? ಶ್ರೀ ಶಾರದಾಮ್ಲಯ್ಯನಮಃ. • ಹತ್ತನೆಯ ಅಧ್ಯಾಯಂ, * ಸೂಚನ 11 ಸಂತತಿ ಗಾಗಿಯ ಚಿಂತಿರ | ನಂತೇಶಂ ಪುತ್ರಕಾಮ ನಿಷ್ಕ್ರಿಯ ಗೈದಂ || ಸಂತಸ ಗೊಳಿಸಲ್ ಸುರರಂ || ಕಂತುಪಿತಂ ಪಟ್ಟರಥನಿ ನುದಿಸಿದ ನಿಳಯy 11 ಅಮರೇಂದ್ರನ ತೇಜವುಂ ಪಡೆದು, ಎಣೆಯಿಲ್ಲದ ಏಳಿಗೆಯಿಂದಿ ರುತ್ತಾ, ಪೊಡವಿಯನ್ನು ಪಾಲಿಸುತಲಿದ್ದ ಅಜನನ್ನನಿಗೆ, ಮುನಿಶಾಪವು ಬಂದಮೇಲೆ, ಸ್ವಲ್ಪ ಕಡಮೆ ಹತ್ತು ಸಾವಿರ ವರ್ಷ ಗಳು ಕಳೆದುವು. ಆದರೂ - ಆ ದಶರಥನು - ತನ್ನ ಪಿತೃಗಳ ಋಣದಿಂದ ಬಿಡುಗಡೆಯನ್ನು ಹೊಂದಲಿಕ್ಕೆ ಕಾರಣವಾಗಿ, ತತ್ಕಾಲದಲ್ಲಿ ಶೋಕವೆಂಬ ಅಂಧಕಾರವನ್ನು ತೊಲಗಿಸಲು ತಕ್ಕುದೆನಿಸಿರುವ, ಪುತ್ರನೆಂಬ ಪೆಸರಂ ಪಡೆದ ದೀವಿಗೆ ಯನ್ನು ಪಡೆಯಲೇ ಇಲ್ಲ. ಆಮೇಲೆಯ, ಕಾರಣವನ್ನು ನಿರೀಕ್ಷಿಸು ತಲಿದ್ದ ಆ ಅರಸು - ಮಥನಕ್ಕಿಂತಲೂ ಮೊದಲು ಕಾಣಬರದಿರುವ ರತು ನಗಳನ್ನೊಳಗೊಂಡಿದ್ದ ಕಡಲಿನಂತೆ ಬಹುಕಾಲವನ್ನು ಕಳೆದನು. ಜಿತೇಂದ್ರಿಯರೆನಿಸಿದ ಋಶ್ಯಶೃಂಗನೇ ಮೊದಲಾದ ಯಾಜ್ಞೆ ಕರು - ಪುತ್ರಾರ್ಥಿಯಾದ ಆ ದಶರಥನಿಗೆ ಪುತ್ರನಿಮಿತ್ತವಾಗಿರುವ ಯಾಗವನ್ನು ಪ್ರಾರಂಭಿಸಿದರು, ಆ ಸಮಯದಲ್ಲಿ ದೇವತೆಗಳು - ಪುಲಸ್ಯ ಕುಲದೊ ಳುದಿಸಿದ ರಾವಣನ ಹಾವಳಿಯನ್ನು ತಾಳಲಾರದೆ ತೊಂದರೆಪಟ್ಟು, ಬೇಸಗೆಯನ್ನು ಸಹಿಸಲಾರದೆ ನೊಂದ ದಾರಿಗರು ನೆಳಲಿನ ಮರವನ್ನು