ಪುಟ:ರಘುಕುಲ ಚರಿತಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಶ್ರೀ ಶ ಕ ದಾ [೧o ಸಲ್ಲಿಸತಕ್ಕವನು, ನಿನ್ನನ್ನು ಗೆಲ್ಲುವವರೇ ಇಲ್ಲ, ನಿನಗೆ ಸೋಲದ ವರೂ ಇಲ್ಲ, ನೀನೊಬ್ಬರಿಗೂ ಕಾಣಬರೆ, ಕಂಡು ಕಾಣಬರದಿರು ವುದೆಲ್ಲಕ್ಕೂ ನೀನೇ ಕಾರಣನು. ಎಲೈ ಸರ್ವವ್ಯಾಪಕನೇ ! ಪ್ರಾಜ್ಞರು - ನಿನ್ನನ್ನು ಎಲ್ಲರ ಹೃದಯದಲ್ಲಿರುವವನನ್ನಾಗಿಯೂ, ಯಾ ರಿಗೂ ಗೋಚರಿಸದಿರುವುದರಿಂದ ದೂರದಲ್ಲಿರತಕ್ಕವನನ್ನಾಗಿಯೂ ಹೇಳು ತಾರೆ, ಯಾವುದೊಂದರಲ್ಲಿಯೂ ಅಭಿಲಾಷೆಯಿಲ್ಲದಿದ್ದರೂ, ನೀನು ತಪವನ್ನಾಚರಿಸುತಲಿರುವೆಯಂತೆ ? ಹೆರರಿಗುಂಟಾಗುವ ತೊಂದರೆಯನ್ನು ಪರಿಹರಿಸುವ ಕನಿಕರವು ನಿನ್ನ ಎದೆಯಲ್ಲಿ ನೆಲೆಗೊಂಡಿರುವುದೆಂತಲೂ, ನಿತ್ಯಾನಂದ ರೂಪನಾದುದರಿಂದ * ದುಃಖಶೂನ್ಯನೆಂತಲೂ, ಬಲು ಹಳ ಬನಾದರೂ ಮುಪ್ಪಿಲ್ಲದವನೆಂತಲೂ ಹೇಳುವರು. ಸ್ಪಟಿಕ ಶಿಲೆಯು - ತನ್ನ ಹತ್ತಿರದಲ್ಲಿರುವ ಬೇರೆ ಬಣ್ಣದ ವಸ್ತುವಿನಿಂದ ತಾನೂ ಬೇರೆ ವರ್ಣವನ್ನು ಪಡೆಯುವಹಾಗೆ- ನೀನು ಒಬ್ಬನೇ ಆದರೂ, ಕಾರಣ ಭೇದ ದಿಂದ ಭಿನ್ನ ಸ್ಥಿತಿಯನ್ನು ಹೊಂದುತ್ತೀಯೆ ಎಂದೆನ್ನುವರು, ಸರ್ವ ವನ್ನೂ ನೀನು ಬಲ್ಲೆ, ಯಾರೂ ನಿನ್ನನ್ನು ಕಾಣರು, ಸರ್ವಕ್ಕೂ ನೀನೇ ಕಾರಣನು, ನೀನೇ ಸರ್ವರೂಪವನ್ನೂ ಪಡೆಯಬಲ್ಲೆ. ಎಲ್ಲಕ್ಕೂ ನೀನೇ ಒಡೆಯ, ನಿನಗೆ ಬೇರೆ ಒಡೆಯರಿಲ್ಲ, ನೀನು ಒಬ್ಬ, ನಿನ್ನ ರೂಪಗಳು ಅನಂತವಾಗಿವೆ. ರಥಂತರ ಮೊದಲಾದ ಏಳು ಬಗೆಯ ಸಾಮಗಳಿಂದ ನಿನ್ನನ್ನು ಹೊಗಳುವರು. ಸಪ್ಪಾರ್ಣವ ಜಲದಲ್ಲಿ ಸವಳ ಸಿದ್ದೀಯೆ, ಆಹಾರಗಳನ್ನೆಲ್ಲ ಪರಿಗಹಿಸಲಿಕ್ಕೆ ನಿನಗೆ ಅಗ್ನಿಯೇ ಬಾಯಿ ಎಂತಲೂ, ಈರೇಳು ಲೋಕಗಳಿಗೂ ನೀನೇ ಆಸರೆ ಎಂತಲೂ ಹೇಳು ವರು, ನಾಲ್ಕು ಪುರುಷಾರ್ಥಗಳ ಜ್ಞಾನ, ನಾಲ್ಕು ಯುಗಗಳ ಕಾಲದ ಪರಿಮಾಣ, ನಾಲ್ಕು ವರ್ಣಗಳಿಂದ ತುಂಬಿದ ಲೋಕ, ಎಂಬಿದೆಲ್ಲವೂ ನಾ ಲೊಗನಾದ ನಿನ್ನಿಂದಲೇ ಉಂಟಾಯಿತಂತೆ. ಯೊಗಿಗಳು-ಅಭ್ಯಾಸದಿಂದ

  • ಹೊಟ್ಟೆ ಕಿಚ್ಚಿನವನು, ಕನಿಕರವಿಲ್ಲದವನು, ಅತೃಪ್ತನು, ಸಿಟ್ಟುಗಾರನ್ನು ಸಂಶಯಾತ್ಮನು, ಹರರ ಸಿರಿಯಿಂದ ಬಾಳುವವನ್ನು, ಈ ಆರುಮಂದಿಯ ನಿತ್ಯ ದುಃಖಿಗಳು ಎಂದು ಭಾರತ,