ಪುಟ:ರಘುಕುಲ ಚರಿತಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ +++ v ವಶಪಡಿಸಿಕೊಂಡ ಮನಸ್ಸಿನಿಂದ, ಹೃದಯದಲ್ಲಿ ಅಡಗಿರುವ ಜ್ಯೋತಿ ರಯನಾದ ನಿನ್ನನ್ನು ಹುಡುಕಿ, ದುಃಖದ ಬಿಡುಗಡೆಗಾಗಿ ಸೇವಿಸು ತಾರೆ, ಜನ್ನವಿಲ್ಲದವನಾದರೂ ಹುಟ್ಟು ತಲೂ, ಆಶೆಯಿಲ್ಲದವನಾದರೂ ಹಗೆಗಳನ್ನಿರಿಯುತಲೂ, ಎಚ್ಚರದಲ್ಲಿರುವವನಾದರೂ ಮಲಗುತಲೂ ಇರುವ ನಿನ್ನ ತತ್ತ್ವವನ್ನು ಬಲ್ಲವರಾರು ? ಕೃಷ್ಣಾದಿ ರೂಪದಿಂದ ಶಬ್ದಾದಿ ವಿಷಯಗಳನ್ನು ಅನುಭವಿಸಲಿಕ್ಕೂ, ನರನಾರಾಯಣಾದಿ ರೂಪ ದಿಂದ ಅಸದಳವೆನಿಸಿದ ತಪವನ್ನಾಚರಿಸಲಿಕ್ಕೂ, ದೈತ್ಯರನ್ನಿರಿವುದರಿಂದ ಪ್ರಜೆಗಳನ್ನು ಪಾಲಿಸಲಿಕ್ಕೂ, ಒಂದಕ್ಕೂ ನಿಲುಕದೆ ತಟಸ್ಥನಾಗಿರ ಲಿ, ನಿನ್ನನ್ನು ಬಿಟ್ಟರೆ ಮತ್ತಾರು ಸಮರ್ಥರು ? ಪುರುಷಾರ್ಥಗ ಳನ್ನು ಪಡೆಯಲಿಕ್ಕೆ ಉಪಾಯಗಳೆನಿಸಿದ ಶಾಸ್ತ್ರಗಳ ಹಾದಿಗಳು-ಲೋಕ ದಲ್ಲಿ ಬೇರುಬೇರಾಗಿವೆ. ಆದರೂ ಬೇರುಬೇರಾಗಿಯೇ ಹರಿಯುತಲಿ ರುವ ಗಂಗೆಯ ಕಾಲುವೆಗಳಲ್ಲಿ ಈ ಕಡಲಿನಲ್ಲಿಯೇ ಹೋಗಿ ಬೀಳುವ ಹಾಗೆ, ಅವೆಲ್ಲವೂ ಯಾವುದೊ ಒಂದು ರೂಪದಿಂದ ನಿನ್ನಲ್ಲಿಯೇ ಬಂದು ಕಲೆಯುವುವು, ನಿನ್ನಲ್ಲಿಯೇ ಮನವನ್ನಿಟ್ಟು, ಮಾಡುವ ಎಲ್ಲ ಕರ್ಮಗ ಇನ್ನೂ ನಿನಗೇ ಸಮರ್ಪಿಸುತಲೂ ಇರುವ ವಿರಾಗಿಗಳು - ಮರಳಿ ಹಿಂದಿ ರುಗದಿರುವುದಕ್ಕೆ ನೀನೇ ಗತಿಯಲ್ಲದೆ ಬೇರಿಲ್ಲ, ನಿನ್ನಯ ಮಹಿಮೆ ಎನಿಸಿ, ಇದಿರಿಗೂ ಕಾಣಬರುವ ಭೂಮಿ ಮೇಲಾದುದೇ ಅಳೆಯಲಸದ ಳವೆನಿಸಿರುವಲ್ಲಿ, ಆಪ್ತವಚನಗಳೆನಿಸಿದ ವೇದಗಳಿಂದಲೂ, ಅನುಮಾನ ಎಂಬ ಪ್ರಮಾಣದಿಂದಲೂ ಸಾಧಿಸಬೇಕಾಗಿರುವ ನಿನ್ನನ್ನು ಅಳೆಯಲು ದಾರಿಯೆಲ್ಲಿ ? ನೆನೆದ ಮಾತ್ರದಿಂದಲೇ ಸ್ಮರಿಸಿದವನನ್ನು ಪಾವನನನ್ನಾಗಿ ಮಾಡಬಲ್ಲ ನಿನ್ನ ದರ್ಶನ ಸ್ಪರ್ಶನ ಮುಂತಾದವುಗಳಿಂದ ಇನ್ನೆಂತಹ ಫಲಗಳುಂಟಾಗುವುವೋ ಅವುಗಳನ್ನು ವಿವರಿಸಿ ಹೇಳಲು ನನಗೆ ಒಳನೆ? ಕಡಲಿನಲ್ಲಿನ ರತ್ನಗಳಹಾಗೂ, ರವಿಯ ಕಿರಣಗಳಹಾಗೂ, ಎಣಿಸಿ ನುತಿ ಸಲಿಕ್ಕಳವಲ್ಲದೆ ನಿನ್ನಯ ದಿವ್ಯ ಚರಿತ್ರೆಗಳ, ಬೆಳಗುತಲಿವೆ, ಇದುವರೆಗೆ. ಪಡೆಯದೆ, ಹೊಸದಾಗಿ ನೀನು ಪಡೆಯಬೇಕಾದುದೊಂದೂ ಇಲ್ಲ. ನಿನ್ನಯ ಅವತಾರಗಳಿಗೂ, ಆಯಾ ಅವತಾರಗಳಲ್ಲಿನ ನಿನ್ನ ಕಾರ್ಯಗ ಆಗೂ, ಲೋಕವನ್ನು ಅನುಗ್ರಹಿಸುವುದೊಂದೇ ಫಲವಾಗಿರುವುದು.