ಪುಟ:ರಘುಕುಲ ಚರಿತಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಶಾ ರ ದಾ [೧೦ ನಿನ್ನ ಮಹಿಮೆಯನ್ನು ಹೊಗಳುವ ಹಳೆಯ ಮಾತುಗಳು ಸುಮ್ಮನಾ ಗುವುದು - ಬಳಲಿಯೋ, ಅಥವಾ ನಿನ್ನ ಗುಣಗಳನ್ನೆಲ್ಲ ಎಣಿಸಿ-ಇಷ್ಟು, ಇಂಥವು, ಎಂದು ಬಣ್ಣಿಸಲಳವಲ್ಲದೆಯೋ ಹೇಳಲಿಕ್ಕಾಗದು. ಇಂತಾ ಅಮರರು-ಅಧೋಕ್ಷಜನನ್ನು ನುತಿಗೈದು ಪ್ರಸನ್ನನನ್ನಾಗಿ ಮಾಡಿಕೊಂಡರು. ಆದರೆ - ಸುರರಾಚರಿಸಿದ ಹರಿಸ್ತುತಿಯು - ಮೊದ ಲಿದ್ದ ಗುಣಗಳನ್ನೆ ಹೇಳತಕ್ಕುದಾಗಿದ್ದಿತಲ್ಲದೆ, ಇಲ್ಲದುದನ್ನು ಬಣ್ಣಿಸು ವುದಾಗಿಯಾಗಲಿ, ಸೂಕ್ಷ್ಮವಾಗಿರುವುದನ್ನು ಹೆಚ್ಚಿಸಿ ಹೇಳತಕ್ಕುದಾ ಗಿಯಾಗಲೀ ಇರಲಿಲ್ಲ. ಕುಶಲಪ್ರಶ್ನೆಯಿಂದ ಪ್ರೀತಿಯನ್ನು ವ್ಯಕ್ತಗೊ ಆಸಿದ ಹರಿಯ ಮುಖರಾಗದಿಂದ ಆ ಮಧುವೈರಿಯ ಪ್ರಸನ್ನತೆಯನ್ನು ಸುರರು ಅರಿತರು. ಪ್ರಳಯಸರಯವೊದಗದೆಯೇ, ಆ ರಕ್ಕಸನೆಂಬ ಕಡಲು-ದಡವನ್ನು ದಾಟಿ, ಉಕ್ಕುಳಿಸಿ ಬರುವುದರಿಂದ ಉಂಟಾಗುತಲಿ ರುವ ಭಯವನ್ನು ಆತನಿಗೆ ಬಿನ್ನವಿಸಿದರು - ತರುವಾಯ - ಪಾರಾವಾರದ ೨ ರದಲ್ಲಿನ ಗಿರಿಗಳ ಗವಿಗಳಲ್ಲಿಯೂ ಪ್ರತಿಧ್ವನಿಯುಂಟಾಗ.ವಂತೆ, ಸಾಗರದ ಶಬ್ದವನ್ನು ವಿಾರಿರುವ ಗಂಭೀ ರವಾದ ಧ ನಿಯಿಂದ ನಾರಾಯಣನವರ ಕುರಿತು ಇಂತೆಂದನು - ಪುರಾಣಪುರುಷನಾದ ಆ ಇಂದಿರಾರಮಣನ ಎದೆ, ಕೊರಳು, ಮೊದಲಾ ದವುಗಳಿಂದ ಸರಿದುಬರುವ ಸರಸ್ವತಿಯು - ಸೃರವ್ಯಂಜನಗಳ ಸಾಧುತೆ ಯಿಂದಲೂ, ಸ್ಪಷ್ಟತೆಯಿಂದಲೂ ಒಡಗೂಡಿ, ಅಸಂಭವವೆನಿಸದೆಯೂ, ಸಂಶಯಾಸ್ಪದವಲ್ಲದೆಯ ಹೃದಯಂಗಮವಾಗಿದ್ದಿತು. ಅಂದವಾದ ಹಲ್ಲುಗಳ ಬೆಳಕಿನಿಂದೊಡಗೂಡಿ, ವಿಷ್ಣುವಿನ ವದನಾರವಿಂದದಿಂದ ಹೊರಗೆ ಬಂತಲಿನ ಭಾರತಿಯು - ಮೊದಲು ಚರಣತಲದಿಂದ ಸರಿದು ಉಳಿದಿದ್ದು, ಊರ್ಧ್ವವಾಹಿನಿಯಾಗಿ ಹರಿಯತೊಡಗಿದ ಭಾಗೀರಥಿಯಂತೆ ಬೆಳಗುತಲಿದ್ದಿತು. ಎಲೈ ದೇವತೆಗಳಿರಾ ! ತಮೋಗುಣದಿಂದ ಆಕ್ರಮಿಸಲ್ಪಟ್ಟ ಶರೀರಿಗಳ ಸರ್ತ್ಪಜೋಗುಣಗಳ ಹಾಗೆ, ನಿಮ್ಮಗಳ ಮಹಿಮ ಪೌರುಷಗ ಳೆರಡೂ ರಾವಣನೆಂಬ ರಕ್ಕಸನಿಂದ ಆಕ್ರಮಿಸಲ್ಪಟ್ಟಿರುವುದೆಂಬುದನ್ನು ನಾನು ಬಲ್ಲೆನು, ಪ್ರಮಾದವಶದಿಂದ ಘಟಿಸಿದ ಪಾಪದಿಂದ ಸತ್ಪುರುಷನ