ಪುಟ:ರಘುಕುಲ ಚರಿತಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ ೨೧ ಹೃದಯವು ಸಂತಪಿಸುವಂತೆ, ಆ ರಾವಣನಿಂದ ಮೂಲೋಕವೂ ತವಿಸು ತಲಿರುವುದನ್ನೂ ನಾನು ಅರಿತಿದೇನೆ. ರಾವಣಹನನನೆಂಬ ಪ್ರಕೃತ ಕಾರವು - ನಿಮಗೂ, ನನಗೂ ಸಮಾನವಾಗಿರುವುದರಿಂದ, ಇಂದ್ರನು - << ಈ ಕೆಲಸವನ್ನು ನೀನು ಮಾಡಬೇಕು ,, ಎಂದು ನನ್ನನ್ನು ಪ್ರಾರ್ಥಿ ಸಬೇಕಾದುದಿಲ್ಲ, ವಾಯುವು – ಅಗ್ನಿಗೆ ಸಾರಥ್ಯವನ್ನೆಸಗಲು ತಾನಾ ಗಿಯೇ ಪ್ರವರ್ತಿಸುವುದಲ್ಲದೆ ಅಗ್ನಿಯ ಪ್ರಾರ್ಥನೆಯಿಂದಲ್ಲ. ಪೂರ್ವ ದಲ್ಲಿ ಆ ಸುರಾರಿಯು - ತನ್ನ ಶಿರಗಳನ್ನು ಖಡ್ಡ ಧಾರೆಯಿಂದರಿದು, ತ್ರಿಪು ರಾರಿಯನ್ನು ಆರಾಧಿಸುತಲಿರುವ ಸಮಯದಲ್ಲಿ - ನನ್ನ ಚಕ್ರಕ್ಕೆ ಕೊಡ ಬೇಕಾದ ಭಾಗವೆಂಬಂತೆ ಹತ್ತನೆಯ ತಲೆಯನ್ನು ಉಳಿಸಿರುವನು. ಹಾಗಾದರೆ, ಇದುವರೆಗೆ ಅಸಡ್ಡೆ ಮಾಡಿರಲು ಕಾರಣವೇನು ಎಂಬು ವಿರೋ ? ಸೃಷ್ಟಿರ್ಕನಾದ ಚತುರುಖನ ವರದಾನದಿಂದ ಮೆರೆ ಯುವ ಆ ರಕ್ಕಸನ ಹೊಮ್ಮಿದ ಹೆಮ್ಮೆಯನ್ನು, ಸರ್ಪದ ಕೊಬ್ಬನ್ನು ಚಂದನ ತರುವು ಹೇಗೋ ಹಾಗೆ, ಸಹಿಸುತಲಿದೇನೆ. ಆ ರಾಕ್ಷಸನು - ಹಿಂದೆ ತೀವ್ರವಾದ ತಪದಿಂದ ಚತುರಾನನನನ್ನು ತೃಪ್ತಿಗೊಳಿಸಿ, ಮನುಜರನ್ನು ಲೆಕ್ಕವಿಡದೆ, ಎಂಟು ಬಗೆಯಾಗಿರುವ ದೈವಸೃಷ್ಟಿಯಿಂದಲೂ ತನಗೆ ಸಾವು ಉಂಟಾಗದಂತೆ ವರವನ್ನು ಬೇಡಿಕೊಂಡಿರುವನು. ಆದರೆ ಮುಂ ದೇನು ಗತಿ ಎನ್ನು ವಿರೋ ? ಈ ನಾನೇ ರಾಮನಾಮದಿಂದ ದಶರಥ ನಂದನನಾಗಿ ಅವತರಿಸಿ, ನನ್ನ ಶರಗಳಿಂದಿರಿದ ಆ ದುರುಳನ ಶಿರಗಳೆಂಬ ಸಾರಸಗಳಿಂದ ರಣಲಕ್ಷ್ಮಿಯನ್ನು ಆರಾಧಿಸುವೆನು. ಎಲೈ ಸುನನಸ ರುಗಳಿರಾ ! ಯಾಜ್ಞೆ ಕರು - ವಿಧಿಪ್ರಕಾರ ನಿಮಗಾಗಿ ಕಲ್ಪಿಸುವ ಹವಿ ರ್ಭಾಗಗಳನ್ನು, ಮಾಯಾವಿಗಳಾದ ರಕ್ಕಸರ ಸ್ಪರ್ಶವಿಲ್ಲದಂತೆ ಸ್ವಲ್ಪ ಕಾಲದಲ್ಲಿಯೇ ನೀವು ಮರಳಿ ಸ್ವೀಕರಿಸತಕ್ಕವರಾಗುವಿರಿ, ಆಕಾಶ ಮಾರ್ಗದಲ್ಲಿ ವಿಮಾನದಿಂದ ಸಂಚರಿಸುವ ಸುಕೃತಶಾಲಿಗಳು - ಮಾರ್ಗ ವಶದಿಂದ ಅಕಸ್ಮಾತ್ತಾಗಿ ರಾವಣನ ಪುಷ್ಪಕವಿಮಾನವನ್ನು ಕಂಡರೆ, ಆ ಕೂಡಲೆ ಮೋಡಗಳ ಮರೆಯಲ್ಲಿ ಅವಿತುಕೊಂಡು, ಅಂಜವುದನ್ನು ಇನ್ನು ಮೇಲೆ ತೊರೆಯಲಿ, ನಲಕಬರನಿಂದ ಶಸ್ಯನಾಗಿ, ಬಲಾತ್ಕರಿ ಸಲು ಯತ್ನವಿಲ್ಲದೆ, ಅಪಹರಿಸಿ ಕೊಂಡೊಯ್ದು, ಸೆರೆಮನೆಯಲ್ಲಿ