ಪುಟ:ರಘುಕುಲ ಚರಿತಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ود ಶ್ರೀ ಶಾ ರ ದಾ ೧೬ ಸಿಲುಕಿರುವುದರಿಂದ, ಸಂಸ್ಕರಿಸಿಕೊಳ್ಳದಿರುವ ಸುರಾಂಗನೆಯರ ತಲೆಗೂ ದಲಿನ ತಿರಿಗಳನ್ನು ಬೇಗನೆ ಬಿಡಿಸುವಿರಿ, ಎಂದೀಪ್ರಕಾರ ಆ ಕೃಷ್ಣ ಮೇಘವು - ವೈಶ್ರವಣನೆಂಬ ಅನಾವೃಷ್ಟಿಯಿಂದ ಬಳಲಿರುವ ಸುರರೆಂಬ ಸಸ್ಯಕ್ಕೆ ನಾಗಮ್ಮತವನ್ನು ನರ್ಮಿಸಿ, ಅದೃಶ್ಯವಾಯಿತು. ಬ೪ಕ - ಅಮರೇಂದ್ರನೇ ಮೊದಲಾದ ನಿರ್ಜರರು - ಪುಪ ಗಳು - ತಮ್ಮ ಭಾಗಗಳಿಂದ ವಾಯುವನ್ನು ಹೇಗೋಹಾಗೆ, ದೇವಕಾ ರ್ಯಾರ್ಥವಾಗಿ ಉದ್ಯುಕ್ತನಾಗಿರುವ ವಿಷ್ಣುವನ್ನು ಅನುಸರಿಸಿ, ತಂತಮ್ಮ ಅಂಶಗಳಿಂದ ವಾನರರಲ್ಲಿ ಸುಗ್ರೀವಾದಿ ರೂಪದಿಂದ ಜನಿಸಿದರು. ಇತ್ತ - ಪ್ರಜಾಪಾಲನಾದ ದಶರಥನು ಆಚರಿಸುತಲಿದ್ದ ಪುತ; ಕಾಮೆಮ್ಮೆಯೆಂಬ ಕಾಮ್ಬಕರದ ಕಡೆಯಲ್ಲಿ - ಅಗ್ನಿ ಮಧ್ಯದಿಂದ ಒಬ್ಬ ದಿವ್ಯಪುರುಷನು - ಋಕ್ಕುಗಳ ವಿಸ್ಮಯದೊಡನೆ ಆವಿರ್ಭವಿ ಸಿದನು. ಆತನ ಕರತಲದಲ್ಲಿ ದಿವ್ಯ ಪಾಯಸಪೂರ್ಣವಾದ ಸುವ ರ್ಇಪಾ ತ್ರೆಯೊಂದು ಕಂಗೊಳಿಸುತಲಿದ್ದಿತು, ಈರೇಳು ಲೋಕಗಳನ್ನೂ ಉದ ರದೊಳು ತಳೆದಿರುವ ಆದಿಪುರುಷನ ಅಂಶವು ಆ ಪರಮಾನ್ನದಲ್ಲಿ ಒಳಹೊ ಕ್ಕಿದ್ದು ದರಿಂದ ಆ ದೇವಪುರುಷನು ಕೈಲಿ ಹಿಡಿದಿರಲು ಅಶಕ್ತನಾಗುತ್ತಿ ದನು. ಕೂಡಲೆ ಆ ಬ್ರಹ್ಮಪುರುಷನು - ಆ ಪಯಸ್ಥರು ಪಾತ್ರವನ್ನು ಪರಮಾದರದಿಂದ ಸ್ಪಧಿಪಾಲನಿಗಿತ್ತನು. ಹೀರಸಾಗರ ಸಾರವಾದ ಅಮೃತವನ್ನು ವಾಸವನು ಹೇಗೋಹಾಗೆ, ಅರಸು ಅದನ್ನು ಪರಿಗ್ರಹಿಸಿ ದನು. ತ್ರಿಭುವನ ಕಾರಣನಾದ ನಾರಾಯಣನೇ ಈತನಲ್ಲಿ ಅವತರಿಸ ಲೆಳಸಿದುದರಿಂದ ಮಹಾರಾಜನ ಗುಣಗಳು ಎಣೆಯಿಲ್ಲದವುಗಳೆಂಬುದೂ ಇತರಾಸಾಧಾರಗಳೆಂಬುದೂ ವ್ಯಕ್ತವಾಯಿತು. ಆ ಬಳಿಕ ವಿಶ್ವಂಭರಾಧಿಪತಿಯು – ಚರುಸಂಜ್ಞೆಯ ಆ ವೈಷ್ಣವ ತೇಜಸ್ಸನ್ನು ತನ್ನ ಪತ್ನಿಯರಾದ, ಕೌಸಲ್ಯಾ ಕೇಕೇಯಿಯರಿಗೆ ಹಂಚಿ ದುದು - ದಿವಾಕರನು - ತನ್ನ ಎಳೆಬಿಸಿಲನ್ನು, ದ್ಯಾವಾಭೂಮಿಗಳಿಗೆ ಹಂಚಿದಂತಿದ್ದಿ ತು, ಮೂರುಮಂದಿ ಹೆಂಡತಿಯರಿರುವಲ್ಲಿ ಇಬ್ಬರಿಗೆ ಮಾತ್ರವೇ ಸಾಲುಮಾಡಿ ಕೊಡಲು ಕಾರಣವೇನೆಂದರೆ-ಕೋಸಲ ರಾಜಪುತ್ರಿಯು ಹಿರಿಯ ಹೆಂಡಿರಾಗಿ ಮಾನ್ಯಳೆನಿಸಿದ್ದಳು ಕೇಕಯ ನದಿ