ಪುಟ:ರಘುಕುಲ ಚರಿತಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. ರಘುಕುಲ ಚರಿತಂ ೨೩ ರಾಜನಂದನೆಯು ಕಿವಿಯ ಹೆಂಡತಿಯಾದುದರಿಂದ ಬಹು ಪ್ರೀತಿಪಾತ್ರ ೪ಾಗಿದ್ದಳು. ಆದಕಾರಣ ಅವರೀರ್ವರಿಂದಲೂ ಸುಮಿತ್ರೆಯನ್ನು ಸಂಭಾ ವಿತಳನ್ನಾಗಿ ಮಾಡಬೇಕೆಂದು ಭೂಪತಿಯು ಬಯಸಿದ್ದನು. ಆ ಹಿಂದೆ - ಉಚಿತಜ್ಞನಾದ ವಸುಮತೀಶನ ಚಿತ್ತವೃತ್ತಿಯನ್ನ ರುವುದರಲ್ಲಿ ಚತುರರಾದ ಅವರೀರ್ವರೂ - ತಮ್ಮ ಭಾಗಗಳ ಅರ್ಧಾರ್ಧ ಭಾಗಗಳಿಂದ, ಸುಮಿತೆಯನ್ನು ಸಂ ಧಾವಿಸಿದರು, ಆದರೆ - ದ್ವಿರದದ ಕಪೋಲಗಳ ಮದೋದಕ ರೇಖೆಗಳಲ್ಲಿ, ಭಮರಿಯು ಹೇಗೋಹಾಗೆ, ಸುಮಿತ್ರೆಯ ತನ್ನ ಸವತಿಯರಲ್ಲಿ ಸಮಾನ ಪ್ರೀತಿಯುಳ್ಳವಳಾದಳಲ್ಲದೆ ಅಸೂಯಾಪರಳಾಗಲಿಲ್ಲ. ಆಮೇಲೆ - ಮಳೆಗರೆವ ನಾಡಿಗಳೆನಿಸಿದ ರವಿಯ ಅದ್ಭುತಗಳೆಂಬ ದೀಧಿತಿಗಳು - ಜಲಮಯವಾದ ಗರ್ಭವನ್ನು ಹೇಗೋ ಹಾಗೆ, ಆ ಮೂವರೂ - ದೇವಾಂಶ ಕಾರಣವಾದ ಗರ್ಭ ವನ್ನು ಧರಿಸಿದರು. ಸಮಕಾಲದಲ್ಲಿ ಗರ್ಭಧಾರಣೆಮಾಡಿ, ತುಸ ಬಿಳಿಯ ಬಣ್ಣ ವಾಂತ ಆ ರಾಜವಲ್ಲಭೆಯರು - ಒಳಗಡಗಿದ ಹೊಡೆಯನ್ನುಳ ಪೈರು ಗಳ ಬೆಡಗನ್ನಾಂತು ರಾರಾಜಿಸುತಲಿದ್ದರು. ಆ ಮೂವರೂ ಇರುಳು ಹೊತ್ತಿನಲ್ಲಿ ಮಲಗಿ ನಿದ್ರಿಸುವಾಗ, ಬೆಳಗಿನ ಜಾವದೊಳಗೆ - ಶಂಖ, ಚಕ್ರ, ಗದೆ, ಬಡ್ಯ, ಚಾಪ ಇವುಗ ಳನ್ನು ಹಿಡಿದು ವಾಮನಮೂರ್ತಿಗಳಾಗಿರುವ ದಿವ್ಯ ಪುರುಷರು ತಮ್ಮನ್ನು ಕಾವಿಡುತಲಿರುವಂತೆ ಕನಸನ್ನು ಕಾಣುತಲಿದ್ದ ರು, ಚಿನ್ನದ ರೆಕ್ಕೆಯ ಬೆಳಕನ್ನು ಆಗಸದ ಬೈಲಿನಲ್ಲಿ ಬಿಡುತ್ತಾ, ಗಮನದ ವೇಗದಿಂದ ಮೋಡ ಗಳನ್ನು ಸೆಳೆದೊಯ್ಯುತಲೂ ಇರುವ ಗರುತ್ಮಂತನು ತಮಗೆ ವಾಹನವಾಗಿ ತೆರಳುತಲಿರುವಂತೆಯೂ ಕಂಡರು, ಪತಿಯು ಅಲಂಕರಿಸಿದ ಕೌಸ್ತುಭ ವೆಂಬ ರತ್ನವನ್ನು ಎದೆಯಲ್ಲಳವಟ್ಟು, ಅಳಿದ ತಾವರೆಯೆಂಬ ಬೀಸಣಿಗೆ ಯನ್ನು ಕಯ್ಯಲ್ಲಿ ಹಿಡಿದು, ಲಕ್ಷ್ಮಿ ಯು ತಮ್ಮನ್ನು ಸೇವಿಸುತಲಿರುವಂ ತೆಯ ನೋಡಿದರು, ಮತ್ತು - ಕಶ್ಯಪಾದಿ ಸಪ್ತರ್ಷಿಗಳು - ಆಕಾಶ ಗಂಗೆಯಲ್ಲಿ ಮಿಂದು, ವೇದರಹಸ್ಯವೆನಿಸಿದ ಪರಬ್ರಹ್ಮನನ್ನು ಸ್ತುತಿಸುತ ಲಿರುವಹಾಗೂ ಸ್ವಪ್ನದಲ್ಲಿ ಅವಲೋಕಿಸಿದರು. ಬಳಿಕ ಬಲು ಸಡಗರ ದಿಂದ ಸೃಷ್ಟಿಶ್ವರನಿಗಾ ಸ್ಪಷ್ಟದ ಪರಿಯನೆಲ್ಲ ಬಿತ್ತರಿಸಿದರು.