ಪುಟ:ರಘುಕುಲ ಚರಿತಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀ ಶಾ ರ ದಾ , [೧೦ ಎwwmM M ೧ • ೪ Any wwwywwwy vvvvvvvvvv ಅದಂಕೆಳ ಅರಸು - ಜಗದ್ದು ರುವಿಗೂ ಗುರುವೆನಿಸಿದ ತನ್ನನ್ನು ಬಹು ಶ್ರೇಷ್ಟನನ್ನಾಗಿ ಭಾವಿಸಿದನು. ಪ್ರತಿಬಿಂಬ ಚಂದ್ರನು - ನಿಮ್ಮಲಗ ೪ಾದ ಜಲಾಶಯಗಳಲ್ಲಿ ಹೇಗೋಹಾಗೆ, ಸರ್ವಾತ್ಮನೆನಿಸಿದ ಮಹಾವಿಷ್ಣು ವೊಬ್ಬನಾದರೂ, ರಾಜಪತ್ನಿಯರ ಉದರಗಳಲ್ಲಿ ವಿ ನಕಾತ್ಮನಾಗಿ ವ ಸಮಾಡುತಲಿದ್ದನು. ಆ ಬಳಿಕ : ದಶರಥನಿಗೆ ಅಗ್ರ,ಮಹಿಷಿಯೆನಿಸಿರುವ, ಸತೀ ಶಿರೋಮಣಿಯಾದ ಕೌಸಲ್ವೇಯು - ಆರಳು ಹೊತ್ತಿನಲ್ಲಿ ಜ್ಯೋತಿರ್ಲಿ ತೆಯು - ಕತ್ತಲನ್ನು ಕತ್ತರಿಸಲು ತಕ್ಕುದೆನಿಸಿದ ಬೆಳಕನ್ನು ಹೇಗೋ ಹಾಗೆ, ಪ್ರಸವ ಕಾಲವು ಸಮನಿಸಲ), ತಮೋನಾಶಕನಾದ ತನಯನನ್ನು ಹಡದಳು, ಅಭಿರಾಮವೆನಿಸಿದ ಮಗುವಿನ ರೂಪವು ತಂದೆಯನ್ನು ಪ್ರೇರಿ ಸಿತು, ಅದರಿಂದಲೇ ಅರಸು - ಪುತ್ರನಿಗೆ ಜಗತ್ಸ ಥವು ಮಂಗಳವೆನಿ ಸಿದ ರಾಮ ಎಂಬ ಹೆಸರನ್ನು ಇಟ್ಟನು. ರಘುವಂಶಕ್ಕೆ ಪ್ರಕಾಶಕನೆನಿಸಿದ ಆ ರಾಮನ ಎಣೆಯಿಲ್ಲದ ದೇಹಪ್ರಭೆಯಿಂದ ಸೂತಿಕಾಗೃಹದ ದೀವಿಗೆ ಗಳು - ಮಿಂಚಿನದೀಪದ ಬಳಿಯಲ್ಲಿಟ್ಟ, ಎಣ್ಣೆಯ ಸಂಣ ದೀಪಳಂತಿ ದ್ದುವು. ಶರದೃತುವಿನಲ್ಲಿ ಸಣ್ಣದಾಗಿ ಹರಿಯುತಲಿರುವ ಜಾಹ್ನವಿಯ ಹೊಳೆಯು-ಪಕ್ಕದಲ್ಲಿನ ನಿರ್ಮಲವಾದ ಮಳಲಿನಮೇಲೆ ಪೂಜಾರ್ಥವಾಗಿ ಬಪ್ಪಿಸಿರುವ ಅಳಿದ ತಾವರೆಯಿಂದ ಹೇಗೋಹಾಗೆ, ಕೃಶೋದರಿ ಯಾದ ಕೌಸಲೈಯು - ಪಾರ್ಶ್ವದಲ್ಲಿ ಹೊಳೆಯುವ ಹಾಸಿನಮೇಲೆ ಸವ ೪ನಿರುವ ರಾಮನಿಂದ ಬೆಳಗುತಲಿದ್ದಳು. ಬಳಿಕ ಕೇಕಯು ರಾಜನಂದ ನೆಯಾದ ಕೈಕೇಯಿಯು - ಸುಶೀಲನಾದ ಭರತನೆಂಬ ಕುವರನನ್ನು ಹೆತ್ತಳು. ಆ ವರಕುಮಾರನು - ವಿನಯವು ಸಿರಿಯನ್ನು ಹೇಗೋ ಹಾಗೆ, ತನ್ನ ತಾಯನ್ನು ಅಲಂಕರಿಸುತ್ತಿದ್ದನು. ಚೆನ್ನಾಗಿ ಅಭ್ಯಾಸ ಮಾಡಿದರೆ ವಿದ್ಯೆಯು - ತತ್ವಜ್ಞಾನೇಂದ್ರಿಯ ಜಯಗಳನ್ನು ಹೇಗೋ ಹಾಗೆ, ಯಮಳರಾದ ಲಕ್ಷಣ ಶತ್ರುಘ್ನರೆಂಬ ಸುತರನ್ನು ಸುಮಿತ್ರೆಯು ಪಡೆದಳು. ಆಗ - ಲೋಕವೆಲ್ಲವೂ - ದುರ್ಭಿಕ್ಷ ಮೊದಲಾದ ಯಾವುದೊಂದು ದೋಪವೂ ಇಲ್ಲದೆ, ಆರೋಗ್ಯವೇ ಮುಂತಾದ ಸುಗುಣಗಳಿಂದ