ಪುಟ:ರಘುಕುಲ ಚರಿತಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶ್ರೀ ಶಾ ರ ದ . [೧೦ ೧೧ -2 •••••••• • • • ••• ಹಾಗೆ, ದಿನದಿನಕ್ಕೂ ಹೆಚ್ಚುತ ಬಂದಿತು. ಅನ್ನೋನ್ಯ ವಿರೋಧವಿಲ್ಲದೆ ಸಭಾತದಿಂದೊಡಗೂಡಿರುವ ಆ ಕುಮಾರರು - ವಸಂತವೇ ಮೊದ ಲಾದ ಋತುಗಳು - ಅಮರರ ನಂದನೋದ್ಯಾನವನ್ನು ಹೇಗೋಹಾಗೆ, ರಘುಕುಲವನ್ನು ವಿಶೇಷವಾಗಿ ಪ್ರಕಾಶಗೊಳಿಸಿದರು. ಸೌಭಾತ್ರದಿಂ ದೊಡಗೂಡಿರುವ ಕುಮಾರರೇ ಕುಲಭೂಷಣರೆನಿಸುವರು, ಆ ಸೋದ ರವ ಒಳ್ಳೆಯ ಗೆಳೆತನವು ಸಮಾನವಾಗಿದ್ದರೂ, ರಾಮಲಕ್ಷ್ಮಣರು ಹೇಗೋಹಾಗೆ, ಭರತಶತ್ರುಘರೂ ಎಡೆಬಿಡದೆ ಒಡನಾಡಿಗಳಾಗಿರುತ್ತಿ ದ್ದರು, ಆ ನಾಲ್ವರೊಳಗೆ - ರಾಮಲಕ್ಷ್ಮಣರಿಗೂ, ಹಾಗೆಯೇ ಭರತ ಶತ್ರುಘರಿಗೂ ವಾಯುವಕ್ಕಿಗಳ ಹಾಗೂ, ಚಂದ್ರಸಮುದ್ರಗಳ ಹಾಗೂ ಊಡಾಗುವುದು, ಹಿಗ್ಗು ವುದು, ತಗ್ಗು ವುದು, ಈ ಮೊದಲಾದವುಗ ಳಲ್ಲಿ ಒಗ್ಗಟ್ಟು - ಎಂದೂ ಬಿಡಿಯಾಗುತಲಿರಲಿಲ್ಲ. ತರುವಾಯ ಆ ದೊರೆಮಕ್ಕಳು - ರಾಜತೇಜಸ್ಸಿನಿಂದಲೂ, ವಿನಯದಿಂದಲೂ, ಬೇಸ ಗೆಯ ಕಡೆಯಲ್ಲಿ - ಮೋಡಗಳನ್ನೊಳಗೊಂಡು, ಅತಿ ಶೀತೋಸ್ಟ್‌ಗಳ ನಿಸದ ದಿವಸಗಳಂತೆ ಪ್ರಜೆಗಳ ಮನಗಳನ್ನು ಸೆಳೆಯುತ ಬಂದರು. ನಾಲ್ಕು ಬಗೆಯಾಗಿ ನೆಲೆಗೊಂಡಿರುವ ದಶರಥನ ಸಂತಾನವು - ನಾಲ್ಕು ಅಂಗಗಳನ್ನೊಳಗೊಂಡಿರುವ ಧರಾರ್ಥ ಕಾಮಮೋಕ್ಷಗಳಂತೆ ರಾರಾಜಿ ಸುತಲಿದ್ದಿ ತು. ನಾಲ್ಕು ದಿಗಂತಗಳಿಗೂ ಪ್ರಭುವಾಗಿರುವ ದಶರಥ ಚಕ್ರವರ್ತಿಯನ್ನು ರತ್ನಗಳಿಂದ ರತ್ನಾಕರ ಗಳು ಹೇಗೋ ಹಾಗೆ, ನಿತ್ಯ ಭಕ್ತರಾದ ಆ ನಾಲ್ವರು ಕುಮಾರರೂ - ವಿನಯಾದಿ ಸುಗುಣಗಳಿಂದ, ತಂದೆಯನ್ನು ಆನಂದಗೊಳಿಸುತಲಿದ್ದ ರು. ಇಂತು - ರೈತರ ಅನಿಧಾ ರೆಗಳನ್ನು ಭಂಗಗೊಳಿಸುವ ದಂತಗಳಿಂದೊಡಗೂಡಿದ ಐರಾವತವೆಂಬ ದಿಗ್ಗಜದಹಾಗೂ, ಫಲಸಿದ್ದಿ ಯಿಂದ ವ್ಯಕ್ತವಾಗುವ ಪ್ರಯೋಗಗಳನ್ನೂ ಳಗೊಂಡಿರುವ ಸಾಮಾದ್ಭುಪಾಯಗಳಿಂದ ಸಹಿತನಾದ ರಾಜನೀತಿಯ ಹಾಗೂ, ನೂಗದಂತೆ ನೀಳವಾದ ತೋಳಗಳಿಂದ ಯುಕ್ತನಾದ ಹರಿಯ ಹಾಗೂ, ನನಾಥ ನಾಥನಾದ ದಶರಥ ಭೂನಾಥನು - ಹರಿಯಂಶಗಳಿಂದ ಅವತರಿಸಿರುವ ನಾಲ್ಕು ಮಂದಿ ಪುತ್ರರಿಂದ ವಿರಾಜಿಸುತಲಿದ್ದನು. - ಇಂತು ರಾಮಾವತಾರವೆಂಬ ಹತ್ತನೆಯ ಅಧ್ಯಾಯ -