ಪುಟ:ರಘುಕುಲ ಚರಿತಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ

  • * # # # # # # # # # # * * * * * n P h/22 P ** **# P # P R

ಶ್ರೀ ಶಿ ಶ್ರೀ ರಾಮಚನ್ದಾಯನಮಃ. ಆ ಹನ್ನೊಂದನೆಯ ಅಧ್ಯಾಯ ? ಸೂಚನೆ ೧ ದಶರಥಸುತನಿಂ ಸವವುಂ

  1. ುಶಿಕ ಸುತಂ ಸುಖದಿ ನೆಸಗಿ ವಿಧಿಲೆಗೆ ತರವಲ್ | ಶಶಿಧರ ಧನುವು ಖಂಡಿಸಿ | ದಶರಥ ಸುತನ:೦ತ ನವನಿ ಜಾತ್ರೆಯ ಕರವುಂ|

ರಾಮನು ಇನ್ನೂ ಜುಳುಸೆಯ ಕೂದಲಿನ ಚಿಕ್ಕ ಹುಡುಗನಾ ಗಿಯೇ ಇದ್ದನು. ಅಪ್ಪರಲ್ಲಿ ಒಂದುವೇಳೆ - ಕುಶಿಕ ರಾಜಕುಲದಲ್ಲಿ ಉದಿಸಿದ ವಿಶ್ವಾಮಿತ್ರನೆಂಬ ಮುನಿಯು-ಕ್ಷಿತೀಶರನಬಳಿಗೆ ಅಭ್ಯಾಗತ ನಾಗಿ ಬಂದು, ತಾನೊಂದು ಯಾಗವನ್ನು ಮಾಡುತ್ತಿರುವೆನೆಂದೂ, ಅದಕ್ಕೆ ದೈತ್ಯರು ಅಡ್ಡಿಯಾಗಿರುವರೆಂದೂ, ಅವರನ್ನು ಸಂಹರಿಸಿ ವಿಘ್ನವಿಲ್ಲದಂತೆ ಸಹಾಯ ಮಾಡಲು ರಾಮನನ್ನು ಕಳುಹಿಸಬೇಕೆಂದೂ ಭೂಪಾಲನನ್ನು ಬೇಡಿದನು, ಇದು ನ್ಯಾಯವೇ ಸರಿ, ಏಕೆಂದರೆ ನಿಂಹವು ಶಿಶುವಾ ಗಿದ್ದ ರೂ ಮದವೇರಿದಾನೆಯ ಶಿರವನ್ನು ಬಗೆಯಲು ಅಡರುವುದು, ತೇಜ ಸ್ಪಿನ ಜೊತೆಗೆ ವಯಸ್ತ ಹೆಜ್ಜೆ ಇರಲೇಬೇಕೆಂಬ ನಿಯಮವೇನೂ ಇಲ್ಲ. ಅದರಿಂದಲೇ ತತ್ವಜ್ಞನಾದ ಮುನಿಯು - ರಾಮನನ್ನು ಕಾಕ ಪಕ್ಷಧರನಾದ ಬಾಲನೆಂದು ಬಗೆಯಲಿಲ್ಲ. ವಿದ್ವಜ್ಜನನ್ನು ಸೇವಿಸುವು ದರಲ್ಲಿ ವಿಚಕ್ಷಣನಾಗ ದೊರೆಯು - ಬಹುಕಾಲಕ್ಕೆ ಕಷ್ಟದಿಂದ ಪಡೆದಿ ದೃರೂ, ಲಕವಿಡದೆ ಗುರುಸಮ್ಮತಿಯಿಂದ ಲಕ್ಷ್ಮಣನೊಂದಿಗೆ ರಾಮ ನನ್ನೂ ವಿಶ್ವಾಮಿತ್ರನಿಗೆ ಒಪ್ಪಿಸಿದನು. ಪ್ರಾಣಗಳನ್ನೇ ನೀಡಬೇಕೆಂದು