ಪುಟ:ರಘುಕುಲ ಚರಿತಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JV ಶ್ರೀ ಶಾ ರ ದ . [೧೧ , ಎ. . . . . . . ಬೇಡಿದವರ ಪ್ರಾರ್ಥನೆಯ ರಘುಕುಲದರಸರಲ್ಲಿ ವ್ಯರ್ಥವಾಗಲಿಲ್ಲ. ಹೀಗಿರಲು ದಶರಥನು ಪುತ್ರನನ್ನೊಪ್ಪಿ ನಿದುದೇನೂ ವಿಸ್ಮಯಕಾರಿಯಲ್ಲ. ದಶರಥನು - ರಾಮಲಕ್ಷಣ ಹೊರಡುವಾಗ ಪುರವಾರ್ಗದಲ್ಲಿ ಅಲಂ ಕರಿಸಬೇಕೆಂದು ಪರಿಜನರಿಗೆ ಆಜ್ಞಾಪಿಸಬೇಕೆಂದಿದ್ದನು, ಅಪ್ಪರಲ್ಲಿಯೇವಾಯುಸಹಾಯವನ್ನು ಪಡೆದಿರುವ ಮೇಘಗಳಿಂದ ಧೂಳಿಯನ್ನಡಗಿಸು ವುದು, ಕುಸುಮಗಳಿಂದ ಸಹಿತವಾದ ಮಳೆಯನ್ನು ಕರೆವುದು, ಈ ಮೊದಲಾದ ಮಾರ್ಗಸಂಸ್ಕಾರಗಳನ್ನು ದೇವತೆಗಳು ಮುಂಚಿತವಾಗಿಯೇ ಬೇಗನೆ ಅಣಿಮಾಡಿದರು. ಸ್ವಾರ್ಥಪರರು ಬಲು ಲವಲವಿಕೆಯುಳ್ಳವ ಗಲ್ಲವೆ ? ಪಿತ್ರಾಜ್ಞೆಯನ್ನು ಪಾಲಿಸಲು ಉದ್ಯುಕ್ತರಾಗಿ, ಚಾಪಧಾರಿಗ ೪ಾದ ಆ ಸೋದರರು - ತಂದೆಯ ಚರಣಗಳಲ್ಲಿ ಮಣಿದರು, ದೇಶಾಂತ ರಕ್ಕೆ ತೆರಳಬೇಕೆಂದು ಬಯಸಿ, ಬಾಗಿದ ಕುವರರ ಶಿರಗಳಮೇಲೆ ಭೂಪ ತಿಯ ಬಾಹ್ಮಬಿಂದುಗಳು ಉದಿರಿದುವು. ಆ ಅಣ್ಣ ತಮ್ಮಂದಿರ ಶಿಖಂ ಡಕಗಳು - ತಂದೆಯ ಕಣ್ಣೀರಿನಿಂದ ತುಸ ನನದುವು. ಧನುರ್ಧರಾಗಿ ಮುನಿಯನ್ನು ಹಿಂಬಾಲಿಸಿ ನಡೆಯುತ್ತಿದ್ದರು, ದಾರಿಯ ದ್ದಕ್ಕೂ ಇಕ್ಕೆ ಲದಲ್ಲಿ ನಿಂತ ಪುರಜನರ ದೃಷ್ಟಿಗಳು - ತೋರಣಗಳಂತೆ ಬೆಳಗುತಲಿ ದುವು. ಲಕ್ಷ್ಮಣನಿಂದ ಮಾತ್ರವೇ ಒಡಗೂಡಿರುವ ರಾಮನನ್ನು ಸಂಗಡ ಕರೆದೊಯ್ಯಲು ಮುನಿಯ ಬಯಸಿದುದರಿಂದ ನೃಪತಿಯು - ತನ್ನ ಮಕ್ಕಳ ಜತೆಯಲ್ಲಿ ಆಶೀರ್ವಾದವನ್ನು ಮಾತ) ಕಳುಹಿದನಲ್ಲದೆ ಸೇನೆಯನ್ನು ಕಳುಹಲಿಲ್ಲ. ಆತನ ಮಂಗಳಾಶಾಸನವೇ ಅವರನ್ನು ಚೆನ್ನಾಗಿ ರಕ್ಷಿಸುವುದರಲ್ಲಿ ಸರಿಯಾದ ಬೆಂಬಲವಾಗಿದ್ದಿತು, ಮಾತೃ ವರ್ಗದವರ ಚರಣಗಳಿಗಭಿವಂದಿಸಿ, ಮಹಾ ತೇಜಸ್ವಿಯಾದ ಮುನಿಯ ಮಾರ್ಗವನ್ನು ಅನುಸರಿಸುತಲಿರುವ ರಾಮಲಕ್ಷಣ: J - ಮಹಾ ತೇಜ (ುಳ ರವಿಯ ಗಮನವಕದಿಂದ ಮೇಷಾದಿ ಸಂಕಮಣಗಳನ್ನನುಸರಿಸಿ ಬರುವ ಚೈತ್ರ ವೈಶಾಖ ಮಾಸಗಳಂತೆ ಬೆಳಗುತಲಿದ್ದ ರು. ಬಾಲಭಾವ ದಿಂದ ಅಡಿಗಳನ್ನಿಡುವ ಸಡಗರದಲ್ಲಿ, ಇಕ್ಕೆಲದ ತೋಳುಗಳನ್ನು ಅಲೆಗ ಳಂತೆ ಅಲುಗಿಸುತ ಮುಂದರಿವ ಅವ: ನಡಿಗೆಯ ಬೆಡಗು - ಬಹು ಚಸ ಲವಾಗಿದ್ದ ರೂಮುಂಗಾರು ಮಳೆಯಲ್ಲಿ ನೀರನ್ನು ತಳ್ಳುವ,ದಡವನ್ನೂ ಡೆವ,