ಪುಟ:ರಘುಕುಲ ಚರಿತಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ st - * - ಇw ಉದ್ದ ಭಿದ್ದಗಳೆಂಬ ನದಗಳ ಹೆಸರುಗಳ ಹಾಗೆ, ಬಲು ಅಂದವಾ ಗಿದ್ದಿ 'ತು, ಅರಮನೆಯಲ್ಲಿ ಮಣಿಮಯವಾದ ನೆಲದಮೇಲೆ ಸುಖವಾಗಿ ಸಂಚರಿಸುತಲಿದ್ದ ಆ ಬಾಲಕರಿಗೆ ಕೌಶಿಕನು - ಬಲಾತಿಬಲಗಳಂಬ ಎರಡು ಮಂತ್ರಗಳನ್ನು ಉಪದೇಶಿಸಿದನು. ಕಲ್ಲುಮುಳ್ಳುಗಳ ದಾರಿ ಯಲ್ಲಿ ನಡೆಯುತಲಿದ್ದರೂ, ಬಿಸಿಲಿನ ಬೇಗೆಗೆ ನಿಲುಕಿದ್ದ ರೂ, ಹೊತ್ತಿಗೆ ಸರಿಯಾಗಿ ಉಚಿತವಾದ ಆಹಾರವಿಲ್ಲದಿದ್ದರೂ ಆ ಮಂತ್ರಗಳ ಮಹಿಮೆ ಯಿಂದ ತಾಯಿಯ ಹತ್ತಿರದಲ್ಲಿರುವ ಹಸುಳೆಗಳಂತೆ, ಆ ತರಳರುಬಳಲಲೇ ಇಲ್ಲ. ಇದಲ್ಲದೆ-ಬಹು ಹಳಬನೂ, ಪೂರ್ವಚರಿತ್ರೆಯನ್ನೆಲ್ಲ ಬಲ್ಲವನೂ, ತನ್ನ ತಂದೆಯ ಮಿತ್ರನೂ ಆಗಿರುವ ಆ ಮುನಿಯು ಹೇಳುವ ಹಳೆಯ ಕಥೆ ಗಳನ್ನು ಕೇಳುತ ಬಂದುದರಿಂದ, ಸೌಮಿತಿ, ಸಹಿತನಾದ ರಾಘವನು - ಆನೆ ಕುದುರೆಗಳಮೇಲೆ ಕುಳಿತು ಪ್ರಯಾಣ ಮಾಡಿದವನಂತೆ ಕಾಲ್ಪಡೆ ಯಿಂದ ಬಂದ ದಾರಿಯನ್ನು ಅರಿಯಲೇ ಇಲ್ಲ. ಮಧುರ ಜಲಗಳಿಂದ ಕೊಳೆಗಳೂ, ಕೇಳಲಿಂಪಾದ ದನಿಗಳಿಂದ ಹಕ್ಕಿಗಳೂ, ಗಮಗಮಿಸುವ ಹೂವಿನ ರಜಗಳಿಂದ ಗಾಳಿಗಳೂ ಬಿಸಿಲಿನ ಜಳವಿಲ್ಲದಂತ ಜಲದಗಳ ಸಾನುಜನಾದ ದಾಶರಥಿಯನ್ನು ದಾರಿಯಲ್ಲಿ ಸೇವಿಸುತಲಿದ್ದುವು, ಮಾರ್ಗ ದೊಳಗೆ ಪುಣ್ಯಾಶ್ರಮಗಳಲ್ಲಿ ವಾಸಮಾಡುತಲಿದ್ದ ತಪಸಿಗಳು - ಅರಳಿದ ತಾವರೆಗಳಿಂದ ಕಂಗೊಳಿಸುವ ಸರೋವರಗಳನ್ನು ನೋಡುವುದ ಕ್ಕಿಂತಲೂ, ಬಳಲಿಕೆಯನ್ನು ಪರಿಹರಿಸುವ ಹಣ್ಣಿನ ಮರಗಳನ್ನು ಅವ ಲೋಕಿಸುವುದಕಿಂತಲೂ ಮಿಗಿಲೆನಿಸಿದ, ಆ ಬಾಲಕರ ಬಹು ಹಿತವಾದ ದರ್ಶನದಿಂದ ಆನಂದಿಸುತಲಿದ್ದರು. ಅಲ್ಲಿಂದ ಮುಂದೆ - ಉರಿಗಣ್ಣಿನಿಂದ ಬೆಂದುಹೋದ ಕಂದರ್ಪನ ತಪೋವನಕ್ಕೆ ತಂದು, ಬಿಲ್ಲನ್ನು ಹಿಡಿದಿರುವ ರಾಮನು-ಮೆದ್ಗಸೊಬಗಿನಿಂದ ಮಾತ್ರವೇ ಎರಡನೆಯ ಮದನನಂತೆ ಬೆಳಗುತಲಿದ್ದನು ಆಗಲಲ್ಲಿ - ಹಿಂದೆ ಅಗಸ್ಯ ಮುನಿಯು - ಸುಕೇ ತುವೆಂಬ ಯಕ್ಷನ ಮಗಳಾದ ತಾಟಕೆಯ ಕೆಟ್ಟ ನಡತೆಯನ್ನು ಕಂಡು, « ನಿನಗೆ ಈ ಅಂದವಾದ ರೂಪವು ತೊಲಗಲಿ” ಘೋರವಾದ ವಿಕಾರ ರೂಪವನ್ನು ತಾಳಿ, ಮಾನುಷ ಮಾಂಸಾಹಾರಿಯಾಗಿ ಸಂಚರಿಸು,, ಎಂದು ಅವಳನ್ನು ಶಪಿಸಿದನು, ಅವಳೀವನವನ್ನು ಹಾಳುಮಾಡುತಲಿದಾಳೆ ಎಂದು