ಪುಟ:ರಘುಕುಲ ಚರಿತಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{೦ ಶ್ರೀ ಶಾ ರ ದಾ .

  • c 1

ಎwv೧ • + Y HY4 •••••• ಮುನಿಯಿಂದ ಸುಕೇತು ಪುತ್ರಿಯ ಪೂರ್ವ ವೃತ್ತಾಂತವನ್ನು ಕೇಳಿದ ಬಳಿಕ, ಆ ತರುಣರೀರ್ವರೂ - ಬಿಲ್ಲಿನ ತುದಿಗಳನ್ನು ನೆಲದಮೇಲಿಟ್ಟು ಮೋಡಿಯಿಂದ ಹೆದೆಯನ್ನಿರಿಸಿ ಟಲಕಾರಗೈಸಿದರು, ಮರ್ವಿಯ ಶಬ್ದ ವು ಕೇಳಬಂದಿತು. ಕೂಡಲೆ ಕೃಷ್ಣ ಪಕ್ಷದ ರಾತ್ರಿಯಂತೆ ಕಾಣ ಬರುವ ತಾಡಕೆಯು - ಚಲಿಸುತಲಿರುವ ಕಪೋಲಕುಂಡಲಗಳುಳ್ಳವ ೪ಾಗಿ, ಆ ರಾಮಲಕ್ಷ್ಮಣರ ಇದಿರಿಗೆ ಬಂದು ನಿಂತಳು ಒತ್ತಾದ ಕೊಕ್ಕ ರೆಗಳ ಸಾಲುಗಳನ್ನೊಳಗೊಂಡಿರುವ ಮೋಡಗಳ ಸಾಲಿನಂತೆ ಕಾಣಬರು ತಿದ್ದಳು, ಅವಳು ಬರುವ ತೀವ್ರವಾದ ವೇಗದಲ್ಲಿ ಮರಗಳ ಬುಡ ದಿಂದ ತುದಿಯವರೆಗೂ ಚಲಿಸುತಲಿದ್ದು ವು. ಹೆಣಗಳ ಮೇಲಣ ಬಟ್ಟೆಗೆ ಳನ್ನು ಅಳವಟ್ಟಿದ್ದಳು ಸಿಂಹ ಗರ್ಜನೆಯಿಂದ ಬಹು ಕೊರಳಾಗಿದ್ದಳು. ಸುಡುಗಾಡಿನಲ್ಲಿ ಬೀಸುವ ಬಿರುಗಾಳಿಯಿಂದ ಹೇಗೋಹಾಗೆ, ರಾಮನಾರ ಹೈಸಿಯಿಂದ ತುಸ ಹಿಮ್ಮೆಟ್ಟಿದನು. ಬಾಹುವಂಡವನ್ನೆತ್ತಿ ಅಬ್ಬರದಿಂದ ತಾಡಕೆಯು ಹತ್ತಿರಕ್ಕೆ ಬಂದಳು, ಅವಳ ಟೊಂಕದಲ್ಲಿ ಸುತ್ತಿರುವ ಮನುಷ್ಯರ ಕರುಳುಗಳು ಜೋಲಾಡುತಲಿದ್ದು ವು, ರಾಮನವಳನ್ನು ಕಂಡನು, « ಕೊಲ್ಲಲಿಕ್ಕೆ ಬಂದವರನ್ನು ಕೊಲ್ಲಲೇಬೇಕು, ಅಂತಹ ಆತತಾಯಿಯನ್ನು ಕೊಲ್ಲುವವನಿಗೆ ದೋಷವಿಲ್ಲ ,, ಎಂಬ ಮನುವಚನ ವನ್ನು ಬಲ್ಲನು, ಅದರಿ'ದಲೇ ಹೆಂಗಸರನ್ನು ಕೊಲ್ಲಬೇಕೆಂಬ ಜುಗುಪ್ಪೆ ಯನ್ನೂ, ಕರುಣೆಯನ್ನೂ ಶರದೊಂದಿಗೆ ಬಿಟ್ಟನು, 'ರಾಮಸಾಯಕವು " ಕಲ್ಲಿನಂತೆ ಘನವಾಗಿದ್ದ ರಕ್ಕಸಿಯ ಎದೆಯಲ್ಲಿ ಬಿಲವನ್ನು ಮಾಡಿಕೊಂಡು ಹೊರಟೇಹೋಯಿತು. ಅದುವರೆಗೂ ರಕ್ಕಸರ ಪಡೆಯ ದೇಶದೊಳಕ್ಕೆ ಹೋಗದಿದ್ದ ಮೃತ್ಯುವಿಗೆ ಆ ಬಿಲವೇ ದ್ವಾರವಾಯಿತು ಬಾಣದೆ. ಪೆಟ್ಟಿನಿಂದ ಎದೆಯೊಡೆದು ಕೆಳಗೆಬಿದ್ದ ರಕ್ಕಸಿಯು – ನೆಲವನ್ನು ಮಾತ್ರವೆ ನಡುಗಿಸಲಿಲ್ಲ, ಮೂಲೋಕವನ್ನೂ ಗೆದ್ದು, ಚಲಿಸದೆ ನೆಲೆಗೊಂಡಿದ್ದ ರಾವಣ ರಾಜ್ಯಲಕ್ಷ್ಮಿಯನ್ನೂ ಕಂಪಿಸುವಂತೆಸಗಿದಳು. ರಾಮನೆಂಬ ಮನ್ಮಥನ ಅಂಬಿನ ಪೆಟ್ಟು ನಿಚಾರಿಯ ಎದೆಗೆ ಬಡಿಯಿತು. ತಾಳಲಾರದೆ ಹೋದಳು. ವಾಸನೆಯುಳ್ಳ ರಕ್ತಚಂದನದ ಲೇಪನವನ್ನು ಪಡೆದಳು. ಜೀವಿತೇಶನ ವಸತಿಯನ್ನು ಕುರಿತು ತೆರಳಿದಳು, ಬಳಿಕ ತನ್ನ