ಪುಟ:ರಘುಕುಲ ಚರಿತಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ) ರಘುಕುಲ ಚರಿತಂ လို႔ ಪರಾಕ್ರಮದಿಂದ ಸಂತುಷ್ಯನಾದ ಮುನಿಯಿಂದ ತಾಟಕಾರಿಯು-ಭಾಸ್ಕ ರನಿಂದ ಕಾವ್ಯವನ್ನು ಸುಡುವ ತೇಜವನ್ನು ಸೂ‌ಕಾಂತ ಶಿಲೆಯ ಹಾಗೆ, ದೈತ್ಯರನ್ನು ಧ್ವಂಸಮಾಡುವ ಅಸ್ತ್ರವಿದ್ಯೆಯನ್ನು ಮಂತ್ರಸಹಿತ ವಾಗಿ ಕಲಿತನು. ಅಲ್ಲಿಂದ ಮುಂದೆ-ತಪಸಿಯಿಂದ ಅಲ್ಲಲ್ಲಿನ ಕಥೆಗಳನ್ನು ಕೇಳುತ್ತಾ, ಪಾವನವೆನಿಸಿದ ವಾಮನಾಶ್ರಮ ಪದವನ್ನು ಹೊಕ್ಕನು. ಆಗ ರಾಘವನು - ತನ್ನ ಪೂರ್ವಾವತಾರದ ನಡತೆಗಳನ್ನೆಲ್ಲ ನೆನೆಯಲಾರದೆ ಹೋದರೂ, ಮನದೊಳೊಂದುಬಗೆಯ ತವಕವನ್ನು ಹೊಂದಿದನು. ತರುವಾಯ ಮುನಿಯ ತಪೋವನವು ಕಾಣಬಂದಿತು. ಶಿಷ್ಯ ವರ್ಗದವರು ಅತಿಥಿಗಳ ಸತ್ಕಾರಕ್ಕೆ ತಕ್ಕ ಸಾಮಗ್ರಿಗಳನ್ನು ಅಣಿಮಾಡು ತಿದ್ದರು. ತರುಗಳೆಲ್ಲ ತಳಿರುಗಳೆಂಬ ಅಂಜಲಿಗಳನ್ನುಳುವಾಗಿದ್ದುವು. ಮೃಗಗಳೆಲ್ಲ ನಿರ್ಭಯಗಳಾಗಿ ತಲೆಯನ್ನೆತ್ತಿ ಮುನಿಯ ಆಗಮನವನ್ನು ನಿರುಕಿಸುತಲಿದ್ದುವು. ಇಂತಪ್ಪ ಪುಣ್ಯಾಶ್ರಮವನ್ನು ಎಲ್ಲರೂ ಹೊಕ್ಕರು. ತಪೋನಿಧಿಯು ಯಜ್ಞದೀಕ್ಷೆಯನ್ನು ಕೈಗೊಂಡನು. ದಶರಥಾತ್ಮ ಜರು - ಯಾಗವನ್ನು ಯಾವುದೊಂದು ಅಡ್ಡಿ ವಿಡೂರಕ್ಕೂ ಎಡೆಯಾಗ ದಂತೆ ಶರಗಳಿಂದ ರಕ್ಷಿಸತೊಡಗಿದರು. ಕಗ್ಗತ್ತಲಿನ ಕೋಟಲೆಗೀಡಾ ಗದಂತೆ ಕಿರಣಗಳಿಂದ ರಕ್ಷಿಸಲು ಕ್ರಮವಾಗಿ ಉದಿಸುವ ಸೂರಚಂದ್ರ ರಂತೆ ಕಂಗೊಳಿಸುತಲಿದ್ದ ರು. ಬಂಧೂಕ ಕುಸುಮಗಳಂತೆ ತೋರ ವಾದ ಕೆನ್ನೀರಿನ ಹನಿಗಳಿಂದ ಯಜ್ಞವೇದಿಯು ನನೆಯುತ ಬಂದಿತ್ತು, ಋತ್ವಿಕ್ಕುಗಳು ಕಂಡರು, ಅಂಜಿದರು, ನಡೆಸುತಲಿದ್ದ ಕರಗಳನ್ನು ಕೈಬಿಟ್ಟರು, ಕೈಗಳಲ್ಲಿದ್ದ ಸುಕ್ಷುJಚಗಳೆಂಬ ಪಾತ್ರಗಳು ಸಡಲಿ ಕೆಳಗೆ ಬಿದ್ದುವು, ಇನ್ನೇನು ಯಜ್ಞವಿಧಿಯು ಕೊನೆಗಾಣುವ ಸಮಯವು ಬಂದಿತು, ಲಕ್ಷಣಾವ್ರಜನು - ತತ್ ಕ್ಷಣದಲ್ಲಿ ಬತ್ತಳಿಕೆಯ ಮುಖ ದಿಂದ ಬಾಣವನ್ನು ಹಿರಿಯುತ ಮೇಲ್ಮುಖನಾಗಿ ನೋಡಿದನು, ರಕ್ಕಸರ ಪಡೆಯನ್ನು ಆಗಸದಲ್ಲಿ ಕಂಡನು, ಹದ್ದು ಗಳ ಹಿಂಡು ಧ್ವಜಪಟಗಳ ಮೇಲೆ ದಟ್ಟವಾಗಿ ಹಾರಾಡುತಲಿದ್ದಿತು. ರಾಮನಾಗಲೆ ಬಾಣವನ್ನು ತೊಟ್ಟನು, ಯಾಗವನ್ನು ದ್ವೇಷಿಸುವ ಆ ರಾಕ್ಷಸರೊಳಗೆ ಮುಂದಾಳು ಗಳಾಗಿರುವ ಮಾರೀಚ ಸುಬಾಹುಗಳಂಬಿಬ್ಬರನ್ನು ಮಾತ್ರವೇ