ಪುಟ:ರಘುಕುಲ ಚರಿತಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , [೧೧ MMIMMwwwMMMy MoMMww ಡಿ ಆನೆಯ ಮರಿಯ ಉದ್ಯೋಗವನ್ನು ನಾನು ಸಹಿಸಲಾರೆನು. ಅದು ಏಕೆ ಎಂಬೆಯೋ ? ನಾನು ಏನ ಹೇಳಲಿ ! ಬಿಲ್ಲಾಳುಗಳೊಳಗೆ ಬಲು ಗಟ್ಟಿಗರೆನಿಸಿದ ಬಹುಮಂದಿ ವೀರಭೂಪಾಲರು - ಈ ಬಿಲ್ಲನ್ನೆತ್ತಿ ಬಾಗಿ ಸಲಾರದೆ ನಾಚಿಕೆಗೊಂಡರು, ಮತ್ತು - ಅನೇಕವೇಳೆ ಸರಾಸನಗಳಲ್ಲಿ ಹೆದೆಯನ್ನೇರಿಸಿದ ಅಭ್ಯಾಸದಿಂದ ಜಡ್ಡುಗಟ್ಟಿರುವ ಹೇರಳವಾದ ತಮ್ಮ ತೋಳುಬಲವನ್ನು ಛೇ ಎಂದು ಬಲವಾಗಿ ಹೀಯಾಳಿಸಿಕೊಂಡು ಹೊರ ಟುಹೋಗಿದಾರೆ ಎಂದನು. ಮುನಿಯು ಮಹಾರಾಜನಿಗಿಂತು ಮಾರುತ್ತರವನ್ನಿತ್ತನು - ಎಲೈ ಅರಸೇ ! ರಾಮನ ಬಾಹುಬಲದ ಪರಿಯನ್ನು ಲಾಲಿಸು, ಅಥವಾ ಬರಿಯ ಮಾತನಾಡಿ ಫಲವೇನು? ಗಿರಿಯಲ್ಲೆರಗಿದ ಸಿಡಿಲಿನಂತೆ, ಬಿಲ್ಲನ್ನು ಮುರಿದ ಬಳಿಕಲೇ ರಾಮನ ಶಕ್ತಿಯು ನಿನಗೆ ವ್ಯಕ್ತವಾಗುವುದು, ಎಂದೆನಲು, ಜ್ಞಾನನಿಧಿಯಾದ ಮುನಿಯ ಮಾತನ್ನು ಕೇಳಿದ ಜನಕನು - ಇಂದ್ರಗೋಪವೆಂಬ ಸಣ್ಣ ಹುಳದಷ್ಟಿರುವ ಬೆಂಕಿಯ ಕಿಡಿಯಲ್ಲಿಯೂ ಮಹಾದಾಹಶಕ್ತಿ ಯಿರುವಂತೆ, ಕಕಪಕ್ಷಧರನಾದ ರಾಮನಲ್ಲಿಯೂ ಅಂತಪ್ಪ ಅಪಾರವಾದ ಶಕ್ತಿಯಿರಬಹುದೆಂದು ನಂಬಿದನು, ಮತ್ತು - ಸಾಸರಗಣ್ಣನು - ತನ್ನ ತೇಜೋವುಯವಾದ ಚಾಪವನ್ನು ತೋರ್ಪಡಿ ಸಲು ತೋಯದಗಳಿಗಾ ಸ್ಥಾಪಿಸುವಂತೆ, ಕಾರು ಕವನ್ನು ತರಲು, ತನ್ನ ಪಕ್ಕದಲ್ಲಿದ್ದ ಸಾವಿರಾರುಮಂದಿ ಪರಿಜನರಿಗಾಣತಿಯನ್ನಿತ್ತನು, ಸೇವ ಕರಾಗಲೆ ಬಾಣಾಸನವನ್ನು ಬಹು ಪ್ರಯಾಸದಿಂದ ತಂದಿಳುಹಿದರು. ದಾಶರಥಿಯು - ಮಲಗಿರುವ ಆದಿಶೇಷನಂತೆ ಬಹು ಭೀಷಣವೆನಿಸಿರುವ ಆ ಶರಾಸನವನ್ನವಲೋಕಿಸಿದನು, ಹಾಗೆಯೇ ಕೈಯಿಂದ ಹಿಡಿದೆತ್ತಿ ದನು, ಪೂರ್ವದಲ್ಲಿ ಪರಮೇಶ್ವರನು - ಮೃಗರೂಪವನ್ನಾಂತು ಓಡುತ ಲಿದ್ದ ಕೃತುವಿನಮೇಲೆ ಈ ಬಿಲ್ಲಿನಿಂದಲೇ ಬಾಇವನ್ನೆಸೆದುದು. ಸಭಾಜನರೆಲ್ಲ ಸ್ವಬ್ದ ರಾಗಿ ರೆಪ್ಪೆ ಬಡಿಯದೆ ವಿಸ್ಮಯದಿಂದ ನೋ ಡುತಲಿದ್ದರು, ಕೋಮಲವಾದ ಕುಸುಮುಚಾಪವನ್ನು ಕಾಮನಂತೆ, ರಾಮನೂ ವಿಶೇಷ ಪ್ರಯತ್ನವಿಲ್ಲದೆಯೇ ಶೈಲಸಾರದ ಆ ಬಿಲ್ಲಿನಲ್ಲಿ ನಿಮಿಷ ಮಾತ್ರದೊಳಗೆ ಹೆದೆಯನ್ನೇರಿಸತೊಡಗಿದನು. ರಾಮನ ಹೇರಳವಾದ