ಪುಟ:ರಘುಕುಲ ಚರಿತಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ ಶ್ರೀ ಶಾ ರ ದ , [೧೧ AM೧೧ ೧• • • • ಧೂಳಿಯು ರವಿಮಂಡಲವನ್ನು ಮುಚ್ಚುತಲಿದಿ ತು, ತರೆಯಾದ ಪ್ರಯಾಣಕಗಳಿಂದ ಮಿಥಿಲಾನಗರದಬಳಿಗೆ ಬಂದು ಸೇರಿದನು, ಊರ ಹತ್ತಿರದಲ್ಲಿರುವ ಮರಗಿಡಬಳ್ಳಿಗಳಿಂದ ತುಂಬಿದ ಉದ್ಯಾನವನ್ನೆಲ್ಲ ತುಳಿಯುತಲಿದ್ದ ಪಡೆಯ ಹಾವಳಿಯನ್ನು ಪ್ರೀತಿ ವಿಶೇಷದಿಂದ ಆ ನಗ ರಿಯು ಸಹಿಸಿತ್ತು ಗರತಿಯಾದ ಸುದತಿಯು ಪ್ರೇಮವಲ್ಲಭನ ಅತಿಕ ಮವನ್ನು ತಾಳುವಂತೆ ಕಂಗೊಳಿಸಿತು. ವರುಣವಾಸವರಿಗೆಣೆಯೆನಿಸಿರುವ ವಸುಮತೀಶರೀರ್ವರೂ ಕಲೆ ತರು, ಇಬ್ಬರೂ ಸದಾಚಾರಸಂಪನ್ನ ರು, ಕನ್ಯಾಕುಮಾರರ ಕರಗ್ರ ಹಣ ಮಂಗಳೋತ್ಸವವನ್ನು ತಂತಮ್ಮ ವಿಭವ ಪ್ರಭಾವಗಳಿಗನುಸಾರ ವಾಗಿ ಹರಡಿ ಈಡೆರಿಸಿದರು, ರಘುನಾಥನು - ಮೈಥಿಲಿಯನ್ನೂ, ಬಳಿಕ ಸೌಮಿತ್ರಿಯು - ನೀತಾನುಜೆಯಾಗಿ ವೈದೇಹನ ಔರಸ ಕನೆ ಯಾಗಿದ್ದ ಊರಿಳೆಯನ್ನೂ, ರಾಮಲಕ್ಷ್ಮಣರ ಅನುಜರಾದ ಭರತ ಶತ ಮೂರು-ಜನಕ ಸೋದರನಾದ ಕುಶಧ್ವಜನ ತನುಜೆಯರಾಗಿರುವ ಮಾಂಡ ವೀ ಶತಕೀರ್ತಿಯರನ್ನೂ, ಕ್ರಮವಾಗಿ ಮದುವೆಯಾದರು. ನವವಧುಗ ಳನ್ನು ಪರಿಗ್ರಹಿಸಿದ ರಾಮಾಗಿ ನಾಲ್ಕು ಮಂದಿ ಕುಮಾರರೂ, ದಶರಥಭ ಪಾಲನ ಫಲಸಿದ್ಧಿ ಗಳಿಂದೊಡಗೂಡಿದ ಸಾಮದಾನ ಭೇದದಂಡೋಪಾಯ ಗಳಂತೆ ಕಂಗೊಳಿಸುತಲಿದ್ದರು ಮತ್ತು-ಆ ರಾಜಕನ್ನಾವರರು - ಕುಲ, ಶೀಲ, ವಯ, ರೂಪ, ಗುಣ, ಲಾವ: ಈ ಮೊದಲಾದವುಗಳ ಆನುರೂ ಹೃದಿಂದ ಪರಸ್ಪರವಾಗಿ ಸಫಲತೆಯನ್ನು ಪಡೆದರು, ಆಗ-ಆ ವಧೂವರರ ಸಮಾಗಮವು - ಪ್ರಕೃತಿ ಪ್ರತ್ಯಯಗಳ ಸಂಬಂಧದಂತೆ ಸಂಶೋಭಿಸು ತಲಿದ್ದಿ ತು. ಈ ಪ್ರಕಾರವಾಗಿ ಕೊಸಲ ನಾಥನು - ತನ್ನ ನಾಲ್ಕು ಮಂದಿ ಮಕ್ಕಳಿಗೂ ಮಿಥಿಲಾ ನಗರದಲ್ಲಿ ವಿವಾಹ ಮಂಗಳ ಮಹೋತ್ಸವವನ್ನು ಬಹು ಪ್ರೀತಿಯಿಂದ ನೆರವೇರಿಸಿದನು. ಬಳಿಕ ಸುಖಪ್ರಯಾಣವನ್ನು ಬೆಳಸಿದನು, ಪ್ರತ್ಯುತ್ಸಾಹಗಳಿಂದ ಹಿಂಬಾಲಿಸಿ ಬಂದ ಜನಕರಾಯ ನನ್ನು ತನ್ನ ರಾಜಧಾನಿಗೆ ಮೂರು ವಸತಿಗಳು ಮಾತ್ರವಿರುವಲ್ಲಿ ಹಿಂದಕ್ಕೆ ಕಳುಹಿಸಿ, ತಾನು ಮುಂದರಿದನು.