ಪುಟ:ರಘುಕುಲ ಚರಿತಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ ೯೬. ಹೀಗೆ ಸಕಲ ಪರಿವಾರದಿಂದ ಪರಿವೃತನಾಗಿ ಬರುತ್ತಿರುವಲ್ಲಿ ಒಂದುವೇಳೆ - ಪಡೆಯೊಳಗ-೧ ಧಜಗಳ ತುದಿಗಳೆಲ್ಲ ಮುರಿದು ಬೀಳು ವಂತೆ ಬಿರುಗಾಳಿಯು ಬೀಸಿತು; ದಡವನ್ನು ವಿಾರಿ ಉಕ್ಕಿ ಹರಿಯುವ ಹೊಳೆಯ ವೇಗವು - ಬೈಲು ನೆಲವನ್ನು ಹೇಗೋಹಾಗೆ, ಸೇನೆಯನ್ನೆಲ್ಲ ಕೋಶಗೊಳಿಸಿತು. ಆಮೇಲೆ-ಆಕಾಶದಲ್ಲಿ ಗೂಡುಕಟ್ಟಿರುವ ಸೂರನು - ಬಡಿದು ಅಪ್ಪಳಿಸಿದ ಹಾವನ್ನು ಗರುಡನು ಹಿಡಿದು ಮೇಲಕ್ಕೊಯ್ಯುತ ಲಿರುವಲ್ಲಿ, ಅದರ ತಲೆಯಿಂದ ಜಾರಿಉದಿರುವ ಮಣಿಯಂತೆ ಕಳಾಹೀ ನನಾಗಿ ಕಾಣಬಂದನು. ಡೇಗೆ ಹಕ್ಕಿಗಳು ಗರಿಗಳನ್ನು ಕೆದರಿ ಹರಡಿ ಎಲ್ಲೆಲ್ಲಿಯೂ ಹಾರಾಡುತಲಿದ್ದುವು, ಮಣ್ಣಿನ ರಜವು ಆವರಿಸಿಕೊಂಡಿ ಡಿದ್ದಿ ತು, ಕೆಂಪಾದ ಮೋಡಗಳು ಬಾಂದಳದಲ್ಲಿ ತುಂಬಿದ್ದು ವು. ಇದ ರಿಂದ ಮಲಿನಗಳಾದ ದಿಕ್ಕುಗಳು ಭಯಂಕಗಳೆನಿಸಿ, ನೋಡಲಿಕ್ಕೆ ಅಸ ಹೃಗಳಾಗಿದ್ದುವು. ಮುತ್ತು - ಕ್ಷತ್ರಿಯರನ್ನೆಲ್ಲ ಇರಿದು, ರಕ್ತದಹೊ ಳೆಯಲ್ಲಿ ಮಿಂದು, ಪಿತೃತರ್ಪಣವನ್ನು ನೆರವೇರಿಸಿದ ಭಾರ್ಗವರಾಮನನ್ನು ಮರಳ ಪ್ರೇರಿಸುವವೆಂಬಂತೆ, ಹೆಣ್ಣು ನರಿಗಳು - ಸೂರ್ಯನಿಗಿದಿರಾಗಿ ನಿಂತು, ತಲೆಗಳನ್ನೆತ್ತಿ, ಭಯಂಕರವಾಗಿ ಕೂಗುತಲಿದ್ದುವು. ಆ ಇದಿರುಗಾಳಿಯೇ ಮುಂತಾದ ವಿಕಾರಗಳನ್ನೆಲ್ಲ ಅವಲೋ ಕಿಸಿ, ಕಾರ್ಯಜ್ಞನಾದ ಓತಿಸತಿಯು - ಕುಲಗುರುವಾದ ವತಿಪ್ಪ ಮುನಿಯನ್ನು ಕುರಿತು, ಸಮಯೋಚಿತವಾದ ಶಾಂತಿಕರ್ಮವನ್ನು ಆಚರಿ ಸುವಂತೆ ಅರಿಕೆ ಮಾಡಿದನು, ತಪೋನಿಧಿಯ - ವಿಧಿಯನ್ನನುಸರಿಸಿ ಶಾಂತಿಯನೆಸಗಿ, ಶುಭಪರಿಣಾಮವಾಗುವುದೆಂದು ಅವನಿಪಾಲನನ್ನು ಸಂತೈಸಿದನು. ಅಹಹ ! ಅಷ್ಟು ಹೊತ್ತಿಗೆ ಸರಿಯಾಗಿ ಪಡೆಯಮುಂದೆ ಒಂದಾ ಮೊಂದು ತೇಜೋರಾಶಿಯು ಅಕಸ್ಮಾತ್ತಾಗಿ ಕಾಣಿಸಿಕೊಂಡಿತು, ಸೈನಿ ಕರು ಮಿಂಚು ಹೊಳೆದಾಗ ಮಂಕಾದವುಗಳಂತಿರುವ ಕಣ್ಣುಗಳನ್ನು ಉಜ್ಜಿಕೊಂಡು ಮರಳಿ ನೋಡಲು, ಅದು ಅವಯವಗಳಿಂದೊಡಗೂಡಿ, ಸುಲಕ್ಷಣದ ಒಂದು ಮನುಷ್ಯ ವ್ಯಕ್ತಿಯಾಗಿದ್ದಿತು. ಆ ಪುರುಷ ಸಿಂಹನ ಹೆಗಲಿಗೆ ಲಕ್ಷಣವಾಗಿದ್ದ ಉಪವೀತವು ತಂದೆಯ ಅಂಶವಾಗಿದ್ದಿತು,