ಪುಟ:ರಘುಕುಲ ಚರಿತಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ [೧ MM My w+ ಕೈಲಿದ್ದ ಪ್ರಬಲವಾದ ಬಿಲ್ಲು ತಾಯಿಯ ಭಾಗವಾಗಿತ್ತು, ಇದರಿಂದ ಆ ಮಹಾಪುರುಷನು - ಚಂದ್ರನಿಂದೊಡಗೂಡಿರುವ ಸೂರ್ಯನಹಾಗೂ, ಮಹಾಸರ್ಪದಿಂದ ಸಹಿತವಾದ ಚಂದನ ತರುವಿನಹಾಗೂ ಕಂಗೊಳಿಸುತ ಲಿದ್ದನು. ಯಾವ ಧೀರನು - ರೋಷದಿಂದ ಪರುಷವಾದ ಬುದ್ಧಿಯುಳ್ಳ ವನಾಗಿ, ಲೋಕನಾದೆಯನ್ನೂ ಮಾರಿ ಇದ್ದ ತಂದೆಯ ಶಾಸನವನ್ನು ಎಳ್ಳಷ್ಟಾದರೂ ಅತಿಕ್ರಮಿಸಲಿಲ್ಲವೋ, ನಡುಗುತ ನಿಂತಿದ್ದ ಹೆತ್ತತಾ ಯಿಯ ತಲೆಯನ್ನೂ ಕತ್ತರಿಸಿ, ಮೊದಲು ಕರುಣೆಯನ್ನೂ, ಬಳಿಕ ಕೃತಿ ಯರ ಶಿರಗಳನ್ನರಿದು ಧರಣಿಯನ್ನೂ ಜಯಿಸಿದನೋ, ಮತ್ತಾವನ ಬಲಗಿ ವಿಯ ಮೇಲೆ ಬೆಳಗುತಲಿರುವ ಜಪಮಣಿಮಾಲೆಯು - ಇಷ್ಟು ಸಾರಿ ಕ್ಷತ್ರಿಯ ಸಂತತಿಯನ್ನು ಸಂಹಾರಮಾಡಿದುದು, ಎಂಬ ಲೆಕ್ಕವನ್ನು ಮಣಿ ಗಳ ನೆಪದಿಂದ ತಿಳಿಸುತಲಿರುವಂತೆ ಕಾಣಬರುತಲಿದ್ದಿ ತೋ, ಆ ಧೀರ ಪುರುಷನೇ ಭಾರ್ಗವರಾಮನು ತನ್ನ ತಂದೆಯ ಕೊಲೆಯಿಂದುಂಟಾದ ಮಹಾರೋಪದಿಂದ ಗಂಡುಗೊಡಲಿಯನ್ನು ಹಿಡಿದು ರಾಜವಂಶವನ್ನು ನಿರಾಮಮಾಡಲಿಕ್ಕೆ ದೀಕ್ಷೆಯನ್ನು ಕೈಗೊಂಡವನು, ಆ ಪರಶುರಾಮ ನನ್ನು ಕಂಡೇ ಈಗ-ಎಳೆಯ ಮಕ್ಕಳನ್ನೊಳಗೊಂಡಿರುವ ಮುದಿ ದೊರೆ ಯಾದ ದಶರಥನು-ಹೊಟ್ಟೆಯೊಳಗಣ ಕರುಳದಿರುವಂತೆ ಕಳವಳಿಸಿದುದು. ಗುಣಾಭಿರಾಮನಾಗಿ, ಕುಮಾರನಾಗಿರುವ ರಾಮನಲ್ಲಿಯ, ಹಗೆಯಾಗಿ, ಮಹಾಕೂರನೆನಿಸಿರುವ ಪರಶುರಾಮನಲ್ಲಿಯೂ ಸಮಾನವಾಗಿರುವ ರಾಮನಾಮವು - ಹಾರದಲ್ಲಿಯೂ ಸರ್ವದಲ್ಲಿಯೂ ಸಮವಾಗಿರುವ ರತ್ನ ಜಾತಿಯಂತೆ, ದಶರಥನಿಗೆ ಹೃದಯಂಗಮವಾಗಿಯೂ, ಭಯದಾಯಕವಾ ಗಿಯೂ ಇದ್ದಿತು. ಇಂತಹ ಪರಶುರಾಮನನ್ನು ಕಂಡಕೂಡಲೆ, “ ಎಲೆ ಮುನಿ ವರ್ಯನೇ ! ಅರ್ಘವನ್ನು ಪರಿಗ್ರಹಿಸಬೇಕು; ಅಘವನ್ನು ಪರಿಗ್ರಹಿ ಸಬೇಕು ” ಎಂದು ವಿನಯಪೂರ್ವಕವಾಗಿ ವಿಜ್ಞಾವಿಸುತಲಿರುವ ದಶರಥ ನನ್ನು ಭಾರ್ಗವನು ಸಡ್ಡೆ ಮಾಡಲೇ ಇಲ್ಲ. ರಾವನೆಲ್ಲಿದ್ದನೋ ಅತ್ತಕ ಡೆಗೆ ಗಿರನೆ ತಿರುಗಿದನು, ಕೃತಿಯ ಜಾತಿಯ ವಿಷಯದಲ್ಲಿ ತನಗಿರುವ ರೋಪಾಗ್ನಿಯ ಕಿಡಿಗಳಂತೆ ತೀಹ್ಮವಾಗಿರುವ ಕಣ್ಣುಗುಡ್ಡು ಗಳನ್ನು