ಪುಟ:ರಘುಕುಲ ಚರಿತಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ತಿರುಗಿಸತೊಡಗಿದನು, ಮತ್ತು - ಒಂದು ಹಿಡಿಯಿಂದ ಬಿಲ್ಲಿನ ನಡುವೆ ಹಿಡಿದು, ಬೇರೊಂದು ಕೈ ಬೆರಳುಗಳ ನಡುವೆ ಅಂಬನ್ನು ನಿಲುಕಿಸಿ, ಹೊಡಿಯಲಿಕ್ಕೆ ಸರಿಪಡಿಸುತ್ತಾ, ಹತ್ತಿರದಲ್ಲಿ ನಿರ್ಭಯವಾಗಿ ನಿಂತಿರುವ ರಾಮನಿದಿರಿಗೆ ಬಂದು ನಿಂತು ಇಂತೆಂದನು .- ಎಲ ಹುಡುಗ ! ತಂದೆಯನ್ನು ಕೊಂದುದರಿಂದ ಕತ್ರಜಾತಿಯ ನನ್ನ ವೈರಕ್ಕೆ ಗುರಿಯಾಯಿತು, ಅದರಿಂದಲೇ ಬಾಹುಜರ ಪಡೆಯನ್ನೇ ಅನೇಕಸಾರಿ ಸದೆಬಡಿದು, ತಲೆಯನ್ನೆತ್ತದಂತೆ ಸುಳಿವನೆ ಅಡಗಿಸಿ, ಶಾಂತನಾಗಿದ್ದೆನು, ಮರಳಿ ಈಗ - ತೆಪ್ಪಗೆ ಮಲಗಿರುವ ಹಾವನ್ನು ಕೋಲಿನಿಂದ ತಿವಿದರೆ ಹೇಗೋ ಹಾಗೆ, ನಿನ್ನ ವಿಕ್ರಮವನ್ನು ಕೇಳಿ ರೋಷಗೊಳಿಸಲ್ಪಟ್ಟಿದೇನೆ, ಇದುವರೆಗೆ ಯಾವನೊಬ್ಬ ದೊರೆಯ ಹಿಡಿದೆತ್ತಿ ಹೆದೆಯನ್ನೇರಿಸಲಳವಲ್ಲದಿದ್ದ ಮೈಥಿಲನ ಮನೆಯೊಳಗಣ ಬಿಲ್ಲನ್ನು ನೀನು ಮುರಿದೆಯಂತೆ, ಆ ಸುದ್ದಿಯನ್ನು ಕೇಳಿದಮೇಲೆ ನಿನ್ನ ಧನುರ್ಭಂಗದಿಂದ ನನ್ನ ವೀರವೆಂಬ ಶಿಖರವು ಮುರಿದುಹೋದಂತಾ ಗಿದೆ. ಇದಲ್ಲದೆ – ಹಿಂದೆ - ರಾಮ ಎಂದರೆ, ಆ ಶಬ್ದಕ್ಕೆ ಅರ್ಹನಾಗಿ ಲೋಕದಲ್ಲಿ ನಾನೊಬ್ಬನೇ ಗುರಿಯಾಗುತ್ತಿದ್ದೆನು. ನೀನು ತಲೆಯೆತ್ತುತ ಬಂದಮೇಲೆ, ಆ ಶಬ್ದವು ನನ್ನನ್ನು ಬಿಟ್ಟು, ತಲೆಕೆಳಗಾಗಿ, ನಿನ್ನನ್ನು ಗೋಚರಿಸಿಕೊಳ್ಳುತ್ತಾ, ನನಗೆ ಬಲು ನಾಚಿಕೆಯನ್ನುಂಟುಮಾಡುತ್ತಲಿದೆ ಮತ್ತು - ಈ ಪ್ರಪಂಚದೊಳಗೆ ಕೌಂಟಪರ್ವತದಲ್ಲಿಯೂ ಅಡ್ಡಿಯಿಲ್ಲದೆ ತೂರತಕ್ಕ ಅಸ್ತ್ರವನ್ನು ಧರಿಸಿರುವ ಈ ನನಗೆ, ನನ್ನ ತಂದೆಯ ಹೋಮ ಧೇನುವಿನ ಕರುವನ್ನು ಅಪಹರಿಸಿದ ಹ್ಹಯ ದೇಶಾಧಿಪತಿಯಾದ ಕಾರವೀರಾರ್ಜ್‌ನನೊಬ್ಬ, ನನ್ನ ಕೀರ್ತಿಯನ್ನು ಅಪಹರಿಸಲಿಕ್ಕೆ ಪ್ರಯತ್ನಿಸಿದ ನೀನೊಬ್ಬ, ಈ ಇಬ್ಬರೂ ಸಮವಾದ ತಪ್ಪು ಮಾಡಿ, ನನಗೆ ಹಗೆಗಳಾಗಿದ್ದೀರಿ. ಆದಕಾರಣ ಕ್ಷತ್ರಿಯರನ್ನೆಲ್ಲ ಕೊನೆಗಾಣಿಸಿದುದಾ ದರೂ ನನ್ನ ವಿಕ್ರಮವು - ನಿನ್ನನ್ನು ಮುಗಿಸಿಕೊಳ್ಳದಿದ್ದರೆ, ನನ್ನನ್ನು ತೃಪ್ತಿಗೊಳಿಸುವುದಿಲ್ಲ. ಅಗ್ನಿಯ ಮಹಿಮೆಯು - ಹುಲ್ಲಿನ ಬಣಬೆ ಯನ್ನು ಸುಡುವಂತೆ, ಕಡಲಿನಲ್ಲಿಯೂ ಸುಡುತಲಿರುವುದರಿಂದಲೇ ಅಲ್ಲವೆ ಗಣನೆಗೆ ಬಂದಿದೆ ? ಇದಲ್ಲದೆ, ನೀನು ಯಾವ ಬಿಲ್ಲನ್ನು ಮುರಿದೆಯೋ