ಪುಟ:ರಘುಕುಲ ಚರಿತಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಶ್ರೀ ಶಾ ರ ದಾ . [೧ ಆ ಶಿವನ ಬಿಲ್ಲಿನ ಸಾರವನ್ನು ಹಿಂದೆ ವಿಷ್ಣುವಿನ ತೇಜವು ಅಪಹರಿಸಿದೆ ಎಂದು ತಿಳಿ, ಹೊಳೆಯ ಹೊಯಿಲಿನ ವೇಗದಿಂದ ಬೇರುಗಳೆಲ್ಲ ಸಡಲಿ ಶಿಥಿಲವಾದಾಗ, ಮೆಲ್ಲಗೆ ಬೀಸುತಲಿರುವ ಗಾಳಿಯ ಆ ಮರವನ್ನು ಉರುಳಿಸಬಲ್ಲುದಲ್ಲವೆ ? ಆದಕಾರಣ ಜೀರ್ಣ ಧನುರ್ಭಂಗದಿಂದ ಹೆಮ್ಮ ಪಡಬೇಡ, ಆದರೆ - ಈಗ ಈ ನನ್ನ ಚಾಪದಲ್ಲಿ ಮರ್ವಿಯನ್ನು ಯೋಜನೆಮಾಡಿ, ಶರವನ್ನು ಸಂಧಿಸಿ ಸೆಳೆ, ರಣವೆಂಬುದು ಹಾಗಿರಲಿ, ನನ್ನ ಬಿಲ್ಲನ್ನು ಸೆಳೆಯುವುದರಿಂದಲೇ ನನ್ನೊಡನೆ ನೀನು ಸಮಾನ ಬಲವು ಇವನಾಗುವಿಯಾದ ಕಾರಣ ನಿನಗೆ ನಾನು ಸೋತೆನೆಂದೇ ಭಾವಿಸುವೆನು. ಹಾಗಿಲ್ಲದೆ - ಜ್ವಲಿಸುತಲಿರುವ ಈ ನನ್ನ ಗಂಡುಗೊಡಲಿಯ ಮೊನೆ ಯನ್ನು ಕಂಡು ಅಂಜಿದುದಾದರೆ, ಇದುವರಿಗೆ ವ್ಯರ್ಥವಾಗಿ ಶಿಂಜಿನಿ ಯನ್ನು ಸೆಳೆದು ಕಠಿನವಾದ ಬೆರಳುಗಳನ್ನೊಳಗೊಂಡಿರುವ ಕರತಲಗಳರ ಡನ್ನೂ ಜೋಡಿಸಿ ಅಭಯವನ್ನು ಬೇಡಿಕೊಳ್ಳು, ಆ ನಿನ್ನ ಅಭಯಾಂ ಜಲಿಯಿಂದ ಶಾಂತನಾಗುವೆನು ಎಂದನು. ಬಹು ಭಯಂಕರವಾದ ನೋಟವುಳ್ಳ ಭಾರ್ಗವನು ಹಾಗೆ ಹೇಳು ತಿರಲಾಗಿ, ದಾಶರಥಿರಾಮನು - ಹುಸಿನಗೆಯಿಂದ ಕೆಳದುಟಿಯನ್ನು ಅಲುಗಿಸುತ, ಆತನ ಬಿಲ್ಲನ್ನು ಕೈಯ್ಯಲ್ಲಿ ಹಿಡಿಯೋಣವನ್ನೇ ಸಮಥ ವಾದ ಪ್ರತ್ಯುತ್ತರವನ್ನಾಗಿ ಅಂಗೀಕರಿಸಿದನು, ಆಮೇಲೆ-ತನ್ನ ಪೂರ್ವದ ನಾರಾಯಣಾವತಾರದಲ್ಲಿನ ಬಿಲ್ಲನ್ನು ಕೈಯ್ಯಲ್ಲಿ ಹಿಡಿದಕೂಡಲೇ ಮತ್ತ ಷ್ಟು ಪ್ರಿಯದರ್ಶನನಾದನು. ಕೇವಲ ಜಲದಿಂದ ತುಂಬಿರುವ ಮುಂ ಗಾರು ಮೋಡವೇ ನೋಡಲಿಕ್ಕೆ ಬಲು ಅಂದವಾಗಿರುವುದು, ಹೀಗಿರು ನಲ್ಲಿ ಇಂದ್ರಚಾಪದಿಂದಲೂ ಒಡಗೂಡಿದರೆ ಅದರ ಚೆಲುವಿಕೆಯನ್ನು ಹೇಳಬೇಕಾದುದೇನು ಆ ಬಳಿಕ ರಾಮನು - ಆ ಕಾರು ಕದ ಒಂದು ತುದಿಯನ್ನು ನೆಲದಮೇಲಿಟ್ಟು ಹಿಡಿದು ನಿಲ್ಲಿಸಿ, ಅದರಲ್ಲಿ ಮಾರ್ವಿಯನ್ನು ಆರೋಪಿಸಿ ನಿಂತನು. ರಾಜನೃವರ್ಗಕ್ಕೆ ರಿಪುವಾದ ಭಾರ್ಗವನು - ಹೊಗೆಯಮಾ ತ್ರವೇ ಉಳಿದಿರುವ ಅಗ್ನಿಯಂತೆ ಕಳೆಗುಂದಿ ನಿಂತನು. ಆಮೇಲೆ ಆ ಈರ್ವರೂ ಕುಮವಾಗಿ ಏರುತಲಿರುವ ಮತ್ತು ಇಳಿಯುತಲಿರುವ