ಪುಟ:ರಘುಕುಲ ಚರಿತಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ). ರಘುಕುಲ ಚರಿತಂ ೪೧ ತೇಜಸ್ಸುಳ್ಳವರಾದರು. ಹುಣ್ಣುಮೆಯ ದಿನದ ಸಂಜೆಯಲ್ಲಿನ ಚಂದ್ರ "ರಂತೆ ಒಬ್ಬರಿಗೊಬ್ಬರು ಇದಿರಾಗಿ ನಿಂತಿರುವ ಆ ರಾಘವ ಭಾರ್ಗವ ರನ್ನು ಜನರು ಬಲು ಸಡಗರದಿಂದ ನೋಡುತಲಿದ್ದ ರು. ಆ ಹಿಂದೆ ಕುಮಾರಸ್ವಾಮಿಗೆಣೆಯಾದ ದಾಶರಥಿಯ - ಕರುಣೆ ಯಿಂದ ಮೃದುವಾಗಿ, ತನ್ನ ವಿಷಯದಲ್ಲಿ ನೀವು ಅಡಗಿ ಇದಿರಿಗೆ ನಿಂತಿರುವ ಭಾರ್ಗವನನ್ನೂ, ತಾನು ಸಂಧಾನ ಮಾಡಿರುವ ಬಾಣವನ್ನೂ ಅವಲೋಕಿಸಿ ಇಂತೆಂದನು - ಎಲೈ ಭೌಗುನಂದನನೇ ! ಯದ್ಧವಿ, ನೀನು-ಇದುವರೆಗೆ ನನ್ನನ್ನು ಬಹಳವಾಗಿ ಹೀಯಾಳಿಸಿದೆ. ಆದರೆ, ಬ್ರಾಹ್ಮಣನೆಂದು ಭಾವಿಸಿ, ಸದ ಯನಾದುದರಿಂದಲೇ ಹೊಡೆಯಲು ಸಮರ್ಥನಾಗದೆ ಇದೇನೆ. ಆದರೆ ನನ್ನ ಬಾಣವು ವ್ಯರ್ಥವಾಗತಕ್ಕುದಲ್ಲ, ಅದರಿಂದ ಈಗ ನೀನು ಇಲ್ಲಿಂದ ತೆರಳದಂತೆ ನಿನ್ನ ಗಮನವನ್ನು ಹೊಡೆಯಲೆ ? ಅಥವಾ ನೀನು ಆರ್ಜಿ ನಿರುವ ಸ್ವರ್ಗಮಾರ್ಗವನ್ನು ಹೊಡೆಯಲೆ ? ಬೇಗನೆ ಹೇಳು ಎಂದನು. ಆಗಲಾ ಭಾರ್ಗವಮುನಿಯು ರಾಮನನ್ನು ನೋಡಿ ಹೀಗೆಂದನುಎಲೈ ದಾಶರಧಿಯೆ ! ನಾನು ತಮ್ಮ ದೃಷ್ಟಿಯಿಂದ ನಿನ್ನನ್ನು ಪುರಾಣ ಪುರುಷನನ್ನಾಗಿ ತಿಳಿಯದೆ ಇಲ್ಲ. ಆದರೆ, ಈ ಕರ್ಮಭೂಮಿಯಲ್ಲಿ ಅವತರಿಸಿರುವ ನಿನ್ನ ವೈಪ್ಪವ ತೇಜಸ್ಸನ್ನು ನೋಡಬೇಕೆಂಬ ಬಯಕೆ ಯಿಂದಲೇ ನಿನಗೆ ಕೋಪವನ್ನುಂಟುಮಾಡಿದೆನು; ಆದಕಾರಣ, ನನ್ನ ತಂದೆಯ ಹಗೆಗಳನ್ನೆಲ್ಲ ಭಸ್ಮ ಮಾಡಿದವನೂ, ಸಾಗರ ಪರ್ಯಂತವಾದ ವಸುಧೆಯನ್ನೆಲ್ಲ ಸತ್ಪಾತ್ರದಲ್ಲಿ ವಿನಿಯೋಗಿಸಿದವನೂ ಆಗಿರುವ ನನಗೆ ನಿನ್ನಿಂದಾದ ಸೋಲೂ ಮೇಲೆನಿಸಿ, ಬಯಸತಕ್ಕುದೇ ಆಗಿದೆ. ಅದರಿಂದ ಮತಿವಂತರೊಳಗೆ ಉತ್ತಮನೆನಿಸಿದ ಎಲೈ ರಾಘವನೇ ! ಪುಣ್ಯಕ್ಷೇತ್ರ ತೀರ್ಥಯಾತ್ರೆಗಾಗಿ ಇಸ್ಮವಾಗಿರುವ ನನ್ನ ಗಮನವನ್ನು ಹೊಡೆದು ತಡೆಯಬೇಡ, ನಾನು ಸಂಪಾದಿಸಿರುವ ಸ್ವರ್ಗವಾರ್ಗವು ನಿನ್ನಿಂದ ಹಿಂಸಿಸಲ್ಪಟ್ಟ ರೂ, ಭೋಗದಲ್ಲಿ ನಿಸ್ಸಹನಾಗಿರುವ ನನ್ನನ್ನು ಪೀಡಿಸ ಲಾರದು, ಅದರಿಂದ ಅದನ್ನೇ ಹೊಡೆ ಎಂದನು.