ಪುಟ:ರಘುಕುಲ ಚರಿತಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಶ್ರೀ ಶಾ ರ ದಾ. [೧೧ ಆ ಬಳಿಕ ರಾಮನು - ಹಾಗೆಯೇ ಆಗಲೆಂದು ಒಪ್ಪಿಕೊಂಡನು. ಮತ್ತು ಪೂರ್ವಾಭಿಮುಖವಾಗಿ ನಿಂತು ಅಮೋಘವಾದ ಪತ್ರಿಯನ್ನೂ ಪ್ರಯೋಗಿಸಿದನು, ಆ ರಾಮಸಾಯಕವು - ಭಾರ್ಗವನಿಂದ ಭದ್ರ ವಾಗಿ ರಚಿಸಲ್ಪಟ್ಟುದಾಗಿದ್ದ ಸ್ವರ್ಗ ಮಾರ್ಗಕ್ಕೆ ಅತಿಕ್ರಮಿಸಲಸಾಧನೆ ನಿಸಿದ ತಡೆಯಾಯಿತು, ಆ ಮೇಲೆ ರಾಘವನು - ಕ್ಷಮಿಸಬೇಕು ಎಂದು ಹೇಳುತ್ತಾ, ತಪೋನಿಧಿಯಾದ ಭಾರ್ಗವನ ಚರಣಗಳಿಗೆ ಅಭಿವಂ ದಿಸಿದನು, ಮಹಾಬಲಶಾಲಿಗಳಾದ ಧೀರರು - ಶೌರ್ಯದಿಂದ ಹಗೆಗ ಳನ್ನು ಸೋಲಿಸಿದಮೇಲೆ, ಆ ಶತ್ರುಗಳ ವಿಷಯದಲ್ಲಿ ತಗೋಣವೆಂ ಬುದು - ಜಯಶಾಲಿಗಳಿಗೆ ಹೇರಳವಾದ ಕೀರ್ತಿಯನ್ನೇ ಉಂಟುಮಾ ಡುವುದಲ್ಲವೆ ? ಮತ್ತೆ ಪರಶುರಾಮನು - ದಾಶರಥಿ ರಾಮನನ್ನು ನೋಡಿ ಎಲೆ: ದಯಾಳುವೆ ! ತಾಯಿಯಿಂದ ಬಂದ ನನ್ನ ರಜೋಗುಣ ಸಂಬಂಧ ವನ್ನು ತೊಲಗಿಸಿ, ತಂದೆಯಿಂದ ಆಗತವಾಗಿರುವ ಸತ್ವಗುಣಪ್ರಧಾನವಾದ ಶಾಂತಿಯನ್ನು ನನಗೆ ಕಲ್ಪಿಸಿ ಇದೀಯೆ, ಅದರಿಂದ ಅನಿಂದಿತಫಲವಾದ ಮೋಕ್ಷದಲ್ಲಿ ಅಭಿಲಾಷೆಯುಈ ನನಗೆ ನೀನು – ನಿಂದಿತಫಲದ ಸ್ವರ್ಗ ಮಾರ್ಗವನ್ನು ಭಂಗಪಡಿಸಿದ ನಿಗ್ರಹವೂ ಅನುಗ್ರಹವಾಗಿಯೇ ಪರಿಣ ಮಿಸಿ ಇದೆ. ಆದಕಾರಣ ನಾನು ಇನ್ನು ಹೊರಡುವೆನು; ದೇವಕಾರ ಸಿದ್ದಿಯನ್ನು ಸಂಪಾದಿಸಬೇಕೆಂಬ ನಿನ್ನ ಬಯಕೆಯು ನಿರ್ವಿ ಷ್ಟವಾಗಿ ನೆರವೇರಲಿ ಎಂದು ಸಮಿತಿ ಸಹಿತನಾದ ಲಕ್ಷಣಾವ್ರಜನನ್ನು ಕುರಿತು ಹೇಳಿ, ಭಾರ್ಗವಮುನಿಯು ಅದೃಶ್ಯನಾದನು. ಪರಶುರಾಮನು ತೆರಳಿದನು, ಜಯಶಾಲಿಯಾದ ರಾಮನನ್ನು ದಶರಥನು ಎರಡು ಕೈಗಳಿಂದಲೂ ಬಾಚಿ ತಬ್ಬಿದನು, ಅಪಾರವಾದ ವಾತ್ಸಲ್ಯವು ಹೆಚ್ಚಿ ಮೈದಡವಿ, ಮುಂದಲೆಯಲ್ಲಿ ಮುತ್ತಿಟ್ಟನು, ಮಗ ನನ್ನು ಮರಳಿ ಹುಟ್ಟಿದವನನ್ನಾಗಿ ನೆನೆದನು, ಅರಸಿಗೆ ಕ್ಷಣಕಾಲಮಾತ್ರ ದುಃಖವುಂಟಾಗಿ, ಒಡನೆ ಸಂತೋಪಲಾಭವಾದುದು - ಕಾಡ್ಡಿಚ್ಚಿನಿಂದ ಆಕ್ರಮಿಸಲ್ಪಟ್ಟು ಬೇಯತೊಡಗಿದ ತರುವಿಗೆ, ಕೂಡಲೆ ಹೇರಳವಾದ ಮಳೆಗರೆದಂತಿದ್ದಿತು.