ಪುಟ:ರಘುಕುಲ ಚರಿತಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ ಬಳಿಕ ಶರ್ವನಿಗೆ ಸ್ವಲ್ಪ ಕಡಿಮೆಯೆನಿಸಿದ ಆ ದಶರಥ ಭೂಪ ಲನು - ದಾರಿಯಲ್ಲಿ ಅಣಿಯಾಗಿದ್ದ ಗೂಡಾರಗಳಲ್ಲಿ ಮೂರಿರುಳನ್ನು ಕಳೆದು, ತನಗೆ ಸೊಸೆಯಾಗಿ ಬರುತಲಿ ಯುವ ಮೈಥಿಲಿಯನ್ನು ನೋಡ ಬೇಕೆಂದು ತವಕಿಸುತ, ಮುಖಗಳನ್ನು ಒಟ್ಟಿಗೆ ಒತ್ತಾಗಿ ನಿಲ್ಲಿಸಿದುದ ರಿಂದ ಕನ್ನೆ ದಿಲೆಗಳಿಂಗಲಂಕರಿಸಲ್ಪಟ್ಟವುಗಳಂತಿರುವ ಗವಾಕ್ಷಗಳಿಂದ ಬಲು ಅಂದವಾಗಿರುವ ಅಯೋಧ್ಯಾ ನಗರವನ್ನು ಪ್ರವೇಶಿಸಿದನು. -ಇಂತು ಸೀತಾವಿವಾಹ ವರ್ಣನನೆಂಬ ಹನ್ನೊಂದನೆಯ ಅಧ್ಯಾಯಂ ޣަދީހީ ಶ್ರೀ? ಶ್ರೀ ರಾಮಚನ್ದಾಯನಮಃ.

  1. ಹನ್ನೆರಡನೆಯ ಅಧ್ಯಾಯ

ಸಚನೆ | ರಾಮನ ನಟನಿಗೆ ಕಳುಸಿದ | ಭೂಮಿದ ನಳಿದಂ ಗಡತ ಲಖಲುಹರನಂ || ರಾಮಂ ಕಂಬೈ ತಂದಂ || ಕೋಮಲೆಯಿ ಹರಿ ಸುರಾರಿ ಸಮಿತಿಯರಿಂ || ದಶರಥನು-ರೂಪ, ರಸ, ಗಂಧ, ಸ್ಪರ್ಶ, ಶಬ್ದ ಗಳೆಂಬ ವಿಷಯಗಳ ಸವಿಯನ್ನೆಲ್ಲ ಅನುಭವಿಸಿದುದಾಯಿತು, ಕಡೆಯ ಅವಸ್ಥೆಗೆ ಬಂದನು, ಕೊನೆಗಾಣುವುದು ಹತ್ತಿರವಾಯಿತು, ಆಗ - ಹಣತೆಯ ಎಣ್ಣೆಯ ನೆಲ್ಲ ಹೀರಿ, ಬತ್ತಿಯ ತುದಿಗೆ ಬಂದು, ತಣ್ಣಗಾಗಲಿಕ್ಕೆ ಸಿದ್ದ ವಾದ ಬೆಳಗಿನ ದೀವಿಗೆಯ ಬೆಳಕಿನಂತಿದ್ದನು. ಮುಪ್ಪು - ಕೈಕೇಯಿಗೆ ಹೆದರಿರುವುದೆಂಬಂತೆ, ನರೆಯ ನೆಪದಿಂದ ದೊರೆಯ ಕಿವಿಯ ಹತ್ತಿರಕ್ಕೆ