ಪುಟ:ರಘುಕುಲ ಚರಿತಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳಿ ಶ್ರೀ ಕಾ ರ ದ . [೧೨ ಬಂದು, ರಾಜ್ಯಲಕ್ಷ್ಮಿಯನ್ನು ಬೇಗನೆ ರಾಮನಿಗೊಪ್ಪಿಸು ಎಂದು ಸೂಚಿಸುತಲಿದ್ದಿ ತು, ಆ ಮೇಲೆ ರಾಮನ ಪಟ್ಟಾಭಿಷೇಕದ ಸುದ್ದಿ ಯುತೋಟದಲ್ಲಿನ ನೀರಿನ ಕಾಲುವೆಯು-ಒಂದು ಮರದಬುಡದ ಗಾದೆಯಿಂದ ಮತ್ತೊಂದು ತರುತಲದ ಆಲವಾಲಕ್ಕೆ ಹರಿಯುವಂತೆ, ಕರಾಕರಿಕವಾಗಿ ಪುರಜನರಲ್ಲೆಲ್ಲ ಹರಡಿ ಪ್ರತಿಯೊಬ್ಬರನ್ನೂ ಹರ್ಷಗೊಳಿಸುತಲಿದ್ದಿ ತು; ರಾಮನ ರಾಜ್ಯಾಭಿಷೇಕಕ್ಕೆ ದೊರೆಯು ಅಣಿಮಾಡಿಸುತಲಿರುವ ಸಂಭಾರ ಗಳನ್ನೂ, ಕ್ರೂರವಾದ ಮನೋಗತವುಳ ಕೈಕೇಯಿಯು- ಶೋಕದಿಂದ ಬಿಸಿಯಾದ ದಶರಥನ ಕಣ್ಣೀರುಗಳಿಂದ ಮಲಿನಗಳಾಗುವಂತೆಮಾಡಿದಳು. ಮುಂಗಾರು ಮಳೆಗರೆದು ಒಳಗೆ ಸೆಕೆಹುಟ್ಟಲು ನೆಲವು – ತನ್ನಲ್ಲಿ ಅಡ ಗಿದ್ದ ಹಾವುಗಳನ್ನು ಬಿಲದ ಬಾಯಿಂದ ಹೊರಗೆ ಹೊರಡಿಸುವಹಾಗೆ, ಚಂಡಿಯಾದ ಕೈಕೇಯಿಯು – ಹಿಂದೆ ತನ್ನ ಗಂಡನು ಕೊಟ್ಟಿದ್ದು ಮನ ದೊಳಗವಿತುಕೊಂಡಿದ್ದ ಎರಡು ವರಗಳನ್ನೂ ಕಾರಿದಳು, ಅವುಗಳ ಬ್ಲೊಂದಕ್ಕೆ ಹದಿನಾಲ್ಕು ವರ್ಷಗಳ ಕಾಲ ರಾಮನನ್ನು ಕಾಡಿಗೆ ಕಳುಹಿ ಸುವಂತೆ ಕೇಳಿದಳು, ಮತ್ತೊಂದಕ್ಕೆ ತನಗೆ ವೈಧವ್ಯಪ್ರಾಪ್ತಿ ಮಾತ್ರವೆ ಫಲವಾಗಿರುವ ರಾಜಲಕ್ಷ್ಮಿಯನ್ನು ತನ್ನ ಮಗನಿಗಾಗಬೇಕೆಂದು ಬಯಸಿದಳು. ರಾಮನಾದರೆ ತನ್ನ ತಂದೆಯು- ನೀನು ರಾಜ್ಯವನ್ನು ಪರಿಗ್ರಹಿಸಬೇಕು ” ಎಂದು ಮೊದಲು ತನಗೆ ವಾಗ್ದಾನದಿಂದ ಒಪ್ಪಿಸಿದ ರಾಜ್ಯವನ್ನು ಅಳುತ್ತಾ ಒಪ್ಪಿಕೊಂಡಿದ್ದನು. ಆ ಮೇಲೆ-IC ವನಕ್ಕೆ ಹೊರಡಬೇಕು ,, ಎಂದು ಹೇಳಿದ ಆತನ ಅನುಜ್ಞೆಯನ್ನು ಬಹು ಸಂತೋಷದಿಂದ ಅಂಗೀಕರಿಸಿದನು. ಮೊದಲು ವಿವಾಹಮಂಗಳ ದೀ ಕಾದುಕೂಲಗಳನ್ನು ಉಟ್ಟಿದ್ದು, ಈಗ ಅವುಗಳನ್ನು ಕಳೆದು ನಾರುಬಟ್ಟೆಗಳನ್ನು ಡುತ್ತಿರುವಾಗಲೂ, ರಾಮನ ಮುಖರಾಗವು ಏಕರೂಪವಾಗಿದ್ದು ದನ್ನು ನೋಡಿ ಪುರಜನರೆಲ್ಲ ಬಹಳವಾಗಿ ವಿಸ್ಮಯಪಡುತಲಿದ್ದರು, ದಾಶರಥಿಯು - ಸೀತಾಲಕ್ಷ ಣರಿಂದ ಸಹಿತನಾಗಿ, ತಂದೆಯನ್ನು ಸತ್ಯಭಸ್ಮನನ್ನಾಗಿ ಮಾಡಬಾರ ದೆಂದು, ದಂಡಕಾರಣ್ಯವನ್ನು ಪ್ರವೇಶಿಸಿದನು. ಸಚ್ಚರಿತ್ರೆಯಿಂದ ಸಜ್ಜನರ ಮನಸ್ಸುಗಳನ್ನು ಹೊಕ್ಕನು.