ಪುಟ:ರಘುಕುಲ ಚರಿತಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪L ಶ್ರೀ ಶಾ ರ ದಾ •v ಅಣ್ಣನನ್ನು ಕೇಳಿಕೊಂಡನು, ಹಾಗೆಯೇ ಆಗಲೆಂದು ಒಪ್ಪಿ ಕೊಂಡ ಅಣ್ಣನಿಂದ ಪಾದುಕೆಗಳನ್ನು ಪಡೆದು ಬಂದ ಭರತನು - ಅಯೋಧ್ಯಾ ನಗರವನ್ನು ಪ್ರವೇಶಿಸಲೇ ಇಲ್ಲ, ನಂದಿ ಗ್ರಾಮದಲ್ಲಿಯೇ ವಾಸಮಾಡಿಕೊಂಡು, ಎರವಲಾಗಿ (ನ್ಯಾಸ) ಪಡೆದಿರುವಂತೆ ರಾಜ್ಯ ಲಕ್ಷ್ಮಿಯನ್ನು ಆಳುತಲಿದ್ದನಲ್ಲದೆ ಅನುಭವಿಸಲಿಲ್ಲ ಅಣ್ಣನಲ್ಲಿ ದೃಢ ಭಕ್ತಿಯುಳ್ಳವನಾಗಿ, ಅಯೋಧ್ಯಾ ನಗರವನ್ನು ಹೊಗದೆ, ರಾಜ್ಯಲಕ್ಷ್ಮಿ ಯಲ್ಲಿ ಆಕೆಯನ್ನು ತೊರೆದು, ನಂದಿ ಗ್ರಾಮದಲ್ಲಿ ವನ್ಯವೃತ್ತಿಯಿಂದ ವಾಸ ಮಾಡುತಲಿದ್ದ ಭರತನು – ತನ್ನ ತಾಯಿ ಮಾಡಿದ ಪಾಪಕ್ಕೆ ಪ್ರಾಯಶ್ಚಿ ತ್ಯವನ್ನು ಆಚರಿಸುವಂತಿದ್ದನು. ಇತ್ತ ಬಹು ಶಾಂತನಾಗಿರುವ ರಾಮನು - ನೀತಾಲಕ್ಷ್ಮಣರಿಂದ ಸಹಿತನಾಗಿ, ಕಾಡಿನಲ್ಲಿ ಬೆಳೆದ ಗೆಡ್ಡೆ ಗೆಣಸುಗಳಿಂದ ಹೊಟ್ಟೆಯನ್ನು ಹೊರೆಯುತ್ತಾ, ತನ್ನ ಪೂರ್ವಿಕರಾದ ಇಕ್ಷಾಕು ಕುಲದರಸರು ಮುಪ್ಪಿ ನಲ್ಲಿ ಆಚರಿಸುವ ವಾಡಿಕೆಯಲ್ಲಿದ್ದ ವನವಾಸ ವ್ರತವನ್ನು ತಾನು ತಾರುಣ್ಯದಲ್ಲಿದ್ದುಕೊಂಡೇ ಆಚರಿಸುತಲಿದ್ದನು. ಒಂದಾನೊಂದು ಸಮಯದಲ್ಲಿ ರಾಮನು - ಕಾಡಿನಲ್ಲಿ ಅಲೆದು ಬಳಲಿದ್ದುದರಿಂದ ಒತ್ತಾದ ನೆಳಲುಳ್ಳ ಒಂದು ಮರದ ಬುಡದಲ್ಲಿ ಸೀತೆಯ ತೊಡೆಯಮೇಲೆ ತಲೆಯನ್ನಿಟ್ಟು ಪವಳಿಸಿದ್ದನು. - ಇಂದ್ರಪುತ್ರನೆನಿಸಿದ ಕಾಕಾಸುರನೆಂಬುವವನು- ಕಾಗೆಯ ರೂಪ ದಿಂದ ಅಲ್ಲಿಗೆ ಬಂದು, ಜಾನಕಿಯ ಹೃದಯದೊಳಗೆ-ಸುಶೀಲ, ಪತಿಭಕ್ತಿ, ಮುಂತಾದ ಸುಗುಣಗಳ ಜತೆಯಲ್ಲಿ ದೋಷವನ್ನು ಹುಡುಕುತಲಿರುವ ನೆಂಬಂತೆ, ಆಕೆಯ ಎದೆಯನ್ನು ಕೊಕ್ಕಿನಿಂದ ಕುಕ್ಕಿದನು, ವೀರ ಪತಿ ವತೆಯಾದ ಸೀತೆಯು - ಗಾಢನಿದ್ರೆಯಲ್ಲಿರುವ ತನ್ನ ಪತಿಗೆ ಎಚ್ಚರವಾ ಗುವುದೆಂದು ಅಂಜಿ, ಆ ಹಿಂಸೆಯನ್ನು ತಾಳಿದಳು, ಆ ಮಾಂಸಾಹಾರಿ ಯಾದ ವಾಯಸವು ಮಾಡಿದ ಗಾಯದಿಂದ ಉದಿರಿದ ಬಿಸಿಯಾದ ರಕ್ಕೆ ಬಿಂದುಗಳು ರಾಮನ ಮುಖದಮೇಲೆ ಬಿದ್ದುವು, ಕೂಡಲೆ ಎಚ ತನು. ಮಹಾಸರ್ಪದಂತೆ ಸಿಟ್ಟುಗೊಂಡನು, ಒಂದುದರ್ಭೆಯ ಹುಲ್ಲಿನಲ್ಲಿ ಬ್ರಹ್ಮಾ ಗ್ರವನ್ನು ಅಭಿಮಂತ್ರಿಸಿ ಆ ಬಲಿಭೋಜನದಮೇಲೆ ಪ್ರಯೋಗಿಸಿದನು.