ಪುಟ:ರಘುಕುಲ ಚರಿತಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ MwwwmMMwwwnMy www ನೀನು ಮಾಡುವ ಪರಿಹಾಸವು, ಹುಲ್ಲೆಯು ಹುಲಿಯನ್ನು ಹೀಯಾಳಿಸು ವಂತಿದೆ, ಒಳ್ಳೆಯದು, ಇದಕ್ಕೆ ತಕ್ಕ ಫಲವನ್ನು ಬೇಗನೆ ಅನುಭವಿಸ ಹೋಗುವೆ ? " ಎಂದು ಹೇಳಿ, ಭಯದಿಂದ ಬಿರುಬಿರನೆ ಓಡಿಬಂದು ಭರ್ತನ ತೊಡೆಯಮೇಲೆ ಕುಳಿತಿರುವ ಸೀತೆಯನ್ನು, ತನ್ನ ಹೆಸರಿಗನುಗು ಣವಾದ ಭಯಂಕರ ರೂಪವನ್ನಾಂತು ಸೆಳೆಯತೊಡಗಿದಳು. ಪೂರ್ಣ ಶಾಲೆಯ ಹೊರಗಿದ್ದ ಲಕ್ಷ್ಮಣನು - ಮೊದಲು ಬಲು ಸೌಮ್ಯವಾದ ಆಕಾರದಿಂದ ಬಂದ ಆ ರಕ್ಕಸಿಯ ಕೋಕಿಲೆಯಂತೆ ಮೃದುವಧುರವಾದ ಮಾತನ್ನೂ ಕೇಳಿದ್ದನು, ಈಗ ಹೆಣ್ಣು ನರಿಯಂತೆ ಊರವಾಗಿ ಅಬ್ಬ ರಿಸುತಲಿರುವುದನ್ನೂ ಕೇಳಿದನು. ಓದೋ ! ಇವಳು ವಿಕಾರದಿಂದ ನಿಜರೂಪವನ್ನು ಪಡೆದಳು ಎಂಬುದನ್ನೂ ಅರಿತನು, ತತ್ ಕ್ಷಣವೇ ಕತ್ತಿ ಯನ ಹಿರಿದನು, ಎಲೆವನೆಯನ್ನು ಹೊಕ್ಕನು, ಅವಳ ಕಿವಿಮ ಗುಗಳನ್ನು ಕಳೆದನು, ಮೊದಲಿಗಿಂತ ಮತ್ತಷ್ಟು ವಿಕಾರವಾಗಿ ಭೀಷಣಳೆ ನಿಸುವಂತೆ ಮಾಡಿದನು, ಒಡನೆ ವಕ್ರನಾಸಿಕೆಯ ರಕ್ಕಸಿಯು ಆಗಸಕ್ಕೆ ಹಾರಿದಳು, ಬಿದಿರಿನಂತೆ ಗೆಣ್ಣುಗಳುಳ್ಳ ತರ್ಜನಿಯನ್ನು ಬಾಗಿಸಿರುವ ಕರವನ್ನು ತೋರಿದಳು, ರಾಮಲಕ್ಷ್ಮಣರನ್ನು ಬೆದರಿಸಿದಳು. ಅಲ್ಲಿ ನಿಲ್ಲದೆ ನಿಮಿಷಮಾತ್ರದಲ್ಲಿ ಜನಸ್ಥಾನವೆಂಬ ಅರಣ್ಯಕ್ಕೆ ಬಂದಳು, ಖರನೇ ಮುಂತಾದ ತನ್ನ ಸೋದರರಾಗಿರುವ ಅಸುರರಿಗೆ ಕಾಣಿಸಿಕೊಂಡಳು, ಪುರುಷಾಶನರಿಗೆ ಪ್ರಾರಂಭದಲ್ಲಿ ರಾವುನಿಂದುಂಟಾಗಿರುವ ಪರಿಭವವನ್ನು ಮುಖದಿಂದ ಅರಿಕೆ ಮಾಡಿದಳು. ಆ ಮಹಾರಾಕ್ಷಸರು - ರೋಸಸರ ವಶರಾಗಿ, ರಾಮನನ್ನಿ ದಿರಿಸಲಾಕೆಯಿಂದ ಬಿರುಬಿರನೆ ಹೊರಹಿತರು, ಇದಿರಿಗೆ ಆ ಮೂಳೆಯನ್ನು ಕಂಡುದೇ ಅವರಿಗೆ ಅಮಂಗಳ ಶಕುನವಾಗಿದ್ದಿತು. ಉದಾಯುಧರಾಗಿ ಆಯೋಧನಕ್ಕೆ ತರುವ ಆ ಅಧಮರಾದ ಯಾತುಧಾನರನ್ನು ವೀರಧನನಾದ ರಾಘವನು ಕಂಡನು, ವಿಜಯದಾಶೆ ಯನ್ನು ಜ್ಞಾಸಹಿತವಾದ ಧನುಸ್ಸಿನಲ್ಲಿಟ್ಟನು, ಸೀತಾರಕ್ಷಣೆಯಲ್ಲಿ ಲಕ್ಷ ಣನನ್ನು ನೇಮಿಸಿ ಹೊರಟನು. ರಾಮನೊಬ್ಬನೇ ಇದ್ದುದು ದಿಟ, ರಕ್ಕ ಸರು ಸಾವಿರಾರುಮಂದಿಯ ಇದ್ದ ರು. ಆಗರೆ- ರಣದಲ್ಲಿ ರಾಕ್ಷಸರೆಷ್ಟು ಮಂದಿಯಿದ್ದ ರೋ, ಅವರೊಳಗೆ ಪ್ರತಿಯೊಬ್ಬನಿಗೂ ಒಬ್ಬೊಬ್ಬ