ಪುಟ:ರಘುಕುಲ ಚರಿತಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ ೫೧ 44 ಇತ್ತ ರಾಮಲಕ್ಷ್ಮಣರು - ಸೀತೆಯನ್ನು ಹುಡುಕುತ್ತಾ ಅಲ್ಲಲ್ಲಿ ಅಲೆದು ಬರುತಲಿದ್ದ ರು, ದಾರಿಯಲ್ಲಿ ರೆಕ್ಕೆಗಳರಿದು ಕುಟುಕುಜೀವದಿಂ ದಿದ್ದ ಹಕ್ಕಿಯನ್ನು ಕಂಡರು, ಆ ಪಕ್ಷಿರಾಜನು - ದಶರಥನಲ್ಲಿದ್ದ ಪ್ರೀತಿ ಯಿಂದ ಕಂಠಗತವಾದ ಪ್ರಾಣಗಳಿರುವಾಗಲೇ, ಸೀತೆಯನ್ನು ರಾವಣನು ಅಪಹರಿಸಿದನೆಂದೂ, ತಾನು ಮಾಡಿದ ಸಾಹಸವನ್ನು ತನ್ನ ಮಯ್ಯ ಗಾಯದಿಂದ ತಿಳಿಯತಕ್ಕುದೆಂದೂ, ತೊದಲು ನುಡಿಗಳಿಂದ ತಿಳಿಸಿ, ಮಿತ್ರ ಋಣದಿಂದಲೂ, ಪ್ರಾಣಗಳಿಂದಲೂ ಬಿಡಲ್ಪಟ್ಟನು. ರಾಮಲಕ್ಷ್ಮಣರು ಧರ್ಮದಿಂದ ತಂದೆಯಂತಿರುವ ಜಟಾಯುವಿನ ಮರದಿಂದ ನೂತನ ವಾದ ಪಿತೃ ಶೋಕದಂತೆ ಆ ದುಃಖವನ್ನೂ ಅನುಭವಿಸಿ, ತಂದೆಗೆ ಹೇಗೆ ಹಾಗೆ, ಆ ಗೃಧುರಾಜನಿಗೂ ಅಗ್ನಿ ಸಂಸ್ಕಾರವೇ ಮೊದಲಾದ ಉತ್ತರ ಕ್ರಿಯೆಗಳನ್ನೆಲ್ಲಿ ಕ್ರಮವಾಗಿ ಆಚರಿಸಿದ , ಅಲ್ಲಿಂದ ಮುಂದೆ ಬರುತ್ತಾ, ಇದಿರಿಸಿದ ಕಬಂಧನನ್ನು ವಧಿಸಿದರು, ಶಾಪದಿಂದ ಬಿಡುಗಡೆಯನ್ನು ಹೊಂದಿ ಗಂಧರ್ವ ದೇಹವನ್ನು ಪಡೆದ ಆ ವಿರಾಧನ ಸದುಪದೇಶದಿಂದ ಸಮಾನವ್ಯಸನಿಯಾಗಿರುವ ಕವಿವರನಾದ ಸುಗ್ರೀವನೊಡನೆ ಮಾರುತಿ ಯಿಂದ ರಾಮನಿಗೆಸಖ್ಯವು ಬೆಳೆಯಿತು, ಬಳಿಕ ಮಹಾವೀರನಾದ ರಾಮನು - ಸುಗ್ರೀವನ ಅಣ್ಣನಾದ ವಾಲಿಯನ್ನು ಕೊಂದನು, ಬಹುಕಾಲದಿಂದ ಬಯಸುತಲಿದ್ದ ಅವನ ಸ್ಥಾನದಲ್ಲಿ, ಸುಗ್ರೀವನನ್ನು, ಒಂದು ಧಾತುವಿನೆಡೆಯಲ್ಲಿ ಬೇರೊಂದು ಧಾತುವನ್ನು ಆದೇಶಿಸುವಹಾಗೆ, ವಾಲಿಕಾರ್ಯವನ್ನು ನೆರವೇರಿಸುವ ರೀತಿಯಲ್ಲಿ ನೆಲೆಗೊಳಿಸಿದನು. ಕೂಡಲೆ ಕವಿರಾಜನಾದ ಸುಗ್ರೀವನು - ಸೀತೆಯನ್ನು ಹುಡುಕಿ, ಸುದ್ದಿ ಯನ್ನು ತರುವಂತೆ, ನಾಲ್ಕು ದಿಕ್ಕಿಗೂ ದೂತರನ್ನು ಅಟ್ಟಿದನು, ಜಾನಕಿಯ ಅಗಲಿಕೆಯಿಂದ ಆರ್ತನಾಗಿರುವ ರಾಮನ ಹಂಬಲಿಕೆಗಳಂತೆ, ಹರಿಗಳೆಲ್ಲಎಲ್ಲೆಲ್ಲಿಯೂ ಅಲೆಯತೊಡಗಿದರು. ಅವರೊಳಗೆ ಅಂಗದ, ಹನುವ, ನೀಲ, ನಳ, ಜಾಂಬವಂತನೇ ಮೊದ ಲಾದವರು - ತೆಂಕಣ ಕಡಲತಡಿಗೈತಂದರು, ಜಟಾಯುವಿನ ಅಣ್ಣನಾದ ಸಂಪಾತಿಯಿಂದ ಸೀತೆಯು ರಾವಣನ ಮನೆಯಲ್ಲಿರುವಳೆಂಬ ಸುದ್ದಿ ಯು ತಿಳಿಯಿತು,ಜಾಂಬವನ ಪ್ರೋತ್ಸಾಹದಿಂದ ಮಾರುತಿಯು-ಮಮತೆಯನ್ನು