ಪುಟ:ರಘುಕುಲ ಚರಿತಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ [೧೨ (M4 www .. • • - wwwಯೂw M Mು ತೊರೆದ ಯೋಗಿಯು ಸಂಸಾರವನ್ನು ದಾಟುವಂತೆ, ಸಾಗರವನ್ನು ದಾಟಿದನು. ಲಂಕೆಯನ್ನು ಹೊಕ್ಕನು. ರಾವಣಾಲಯದ ಅಶೋಕ ವನಕ್ಕೆ ಬಂದನು, ವಿಷದ ಮೂಲಿಕೆಗಳಿಂದ ಆವರಿಸಲ್ಪಟ್ಟಿರುವ ಸಂಜೀ ವಿನೀ ಲತೆಯಂತೆ,-ಕ್ಯಸರಿಂದ ಬಳಸಲ್ಪಟ್ಟಿ ರುವ ಸೀತೆಯನ್ನು ಕಂಡನು' ತಾನು ರಾವದೂತನೆನ್ನಲಿಕ್ಕೂ, ರಾಮನು ಕುಶಲದಿಂದಿರುವನೆನ್ನಲಿಕ್ಕೂ ಜ್ಞಾಪಕವಾಗಿ, ಜಾನಕಿಯ ಆನಂದಬಾಷ್ಯ ಬಿಂದುಗಳಿಂದ ಇದಿರುಗೊಳ ಲ್ಪಡುವಂತೆ <ವ ಗಾಮನಾಮಾಂಕಿತದ ಮುದ್ರಿಕೆಯನ್ನು ಆಕೆಗೆ ಕೋ ಟ್ಟನು. ಪ್ರಿಯವಲ್ಲಭನ ಕುಶಲ ವೃತ್ತಾಂತಗಳಿಂದ ಆಕೆಯನ್ನು ಸುಖ ಗೊಳಿಸಿದನು, ಅಕ್ಷರಮಾನನ್ನು ಕೊಂದು ಕೊಬ್ಬಿದನು, ಹಗೆ ಯಾದ ಇಂದ್ರಾರಿಯ ನಿಗ್ರಹವನ್ನು ಕ್ಷಣಕಾಲಮಾತ್ರ ಸಹಿಸಿದ್ದು, ಲಂಕಾ ನಗರಿಯನ್ನು ಉರಿಸಿದನು, ಅದರಿಂದ ಕೃತಕೃತ್ಯನಾದ ಮಾರುತಿ ಯು ಹಿಂದಿ -ಗಿವನು, ನೀತು: ಕೋಟ್ಟದ ಚೂಡಾ-ತ್ರವನ್ನು ಶ್ರೀರಾ ಮನಿಗೆ ಒಪ್ಪಿಸಿದನು, ಜಾನಕಿಯ ಹೃದಯವೇ ಮೂರ್ತಿವತ್ತಾಗಿ ರಾಮದರ್ಶನ ಕುತೂಹಲದಿಂದ ಇದಿರಿಗೆ ಬಂದಂತಿದ್ದಿ ತು, ರಾಮನಾ ಚೂಡಾರತ್ನವನ್ನು ತನ್ನ ಎದೆಯಮೇಲಿಟ್ಟು ಕೊಂಡನು, ಕೂಡಲೇ ಅರೆಮುಗಿದ ಕಣ್ಣುಗಳುಳ್ಳವನಾದನು, ಪ್ರಿಯಪತ್ನಿಯನ್ನೇ ಪ್ರತ್ಯಕ್ಷ ದಲ್ಲಿ ಕಂಡವನಂತೆ ಆನಂದವನ್ನು ಹೊಂದಿದನು, ಮತ್ತು - ಪ್ರಿಯಳ ಸುದ್ದಿಯನ್ನಲ್ಲಿ ಕವಿವರನಮೂಲಕವೇ ಕೇಳಿದನು, ಜಾನಕಿಯನ್ನು ಪಡೆಯಬೇಕೆಂಬ ಪ್ರಬಲವಾದ ಕುತೂಹಲದಿಂದ ಲಂಕೆಯನ್ನು ಬಳಸಿ ರುವ ಮಹೋದಧಿಯನ್ನು ಕಂದಕದಂತೆ ಅತ್ಯಲ್ಪವಾದುದನ್ನಾಗಿ ಭಾವಿಸಿ ದನು, ಅರಿಯನ್ನು ಇರಿಯಲು ಪ್ರಯಾಣವನ್ನು ಬೆಳಸಿದನು, ರಾಮ ನನ್ನು ಹಿಂಬಾಲಿಸುವ ಕವಿಗಳ ಪಡೆಯು - ನೆಲದಲ್ಲಿ ಮಾತ್ರವಲ್ಲದೆ ಆಗಸದಲ್ಲಿಯ ಎಡೆಸಾಲದೆ ಬಲು ತೊಂದರೆಯಿಂದ ನಡೆಯುತಲಿದ್ದಿತು, ಕಡಲತಡಿಗೈತಂದನು, ಬೀಡುಬಿಟ್ಟಿತು, ರಾವಣ ರಾಜ್ಯಲಕ್ಷ್ಮಿಯು - ವಿಭೀಷಣನ ಬುದ್ದಿಯನ್ನ ಹೊಕ್ಕಳು, ಪ್ರೀತಿಯಿಂದ ಪ್ರೇರಿಸಿದಳು, • ಕೇಡಿಗೆ ದುರ್ಬುದ್ಧಿ ' ಎಂಬಂತೆ ರಾವಣನ ದುರ್ವತಿಯು ವಿಭೀಷ ಇನ ಹಿತೋಕಿಗೆ ಎಡೆಗುಡಲಿಲ್ಲ. ಕಾಮಬಾಣದಿಂದ ಸರಂಧ ವಾಗಿದ್ದ