ಪುಟ:ರಘುಕುಲ ಚರಿತಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , n sh + 2 = = = = = = = = = F - -• • • • • • • • • • • • • • - N ಇದರ ಹತ್ತಿರದಲ್ಲಿಯೇ ಸಚ್ಚರಿತ್ರೆಯಿಂದ ಬಹುಶಾಂತನೆನಿಸಿ ರುವ ಸುತೀ ಕನೆಂಬ ಮಹಾತಪಸಿಯ ಚಲಿಸುತಲಿರುವ ನಾಲ್ಕು ಅಗ್ನಿಗಳ ನಡುವೆ ನಿಂತು, ತೀವ್ರವಾದ ತಪಸ್ಸನ್ನು ಆಚರಿಸುತಲಿರುವನು, ಹಣೆಯನ್ನು ಸುಡುತಲಿರುವ ಸೂರನೇ ಈತನಿಗೆ ಐದನೆಯ ಅಗ್ನಿಯಸಿಸಿ ದಾನೆ. ಈತನ ತಪಸ್ಸನ್ನು ಭಂಗಪಡಿಸಬೇಕೆಂದು ಹಿಂದೆ ಮಹೇಂದ್ರನು ಸುರಸುಂದರಿಯರನ್ನು ಕಳುಹಿದನು, ಅವರಿಲ್ಲಿಗೆ ತಂದು, ಮುಗುಳುನಗೆ ಯಿಂದೊಡಗೂಡಿದ ಕುಡಿಗಣನೋಟವೇ ಮುಂತಾದ ಬಗೆಬಗೆಯ ಬೆಡಗುಗಳನ್ನೆಲ್ಲ ತೋರಿದರು ಆ ಚೇಪೆಗಳೊಂದೂ ಈ ಮಹ ರ್ಮಿಯಮನವನ್ನು ಭೇದಿಸಲು ಸಮರ್ಥವೆನಿಸಲಿಲ್ಲ. ಓ ಜಾನಕಿ ! ಈ ಮಹಾಮುನಿಯು ಜಪಮಣಿಮಾಲೆಯು ಕಂಕಣವುಳ್ಳದ, ಹು ಲೈಗಳನ್ನು ಮೈದಡವಿ ತುರಿಸತಕ್ಕುದೂ, ದರ್ಭೆಯ ಹುಲ್ಲನ್ನು ಕುಯ್ಯುತಕ್ಕುದೂ ಆಗಿ, ಇಂದ್ರಿಯ ಜಯವನ್ನೂ, ಭೂತದಯೆಯು ನ್ಯೂ, ಸತ್ಕರಾಚರಣೆಯನ್ನೂ ಸೂಚಿಸುವ, ತನ್ನ ಬಲದೋಳನ್ನು ಎತ್ತಿ ಇಗೋ ನನ್ನನ್ನು ಪೂಜಿಸುತಲಿರುವನು, ಮತ್ತು -ಮನವ್ರತವನ್ನ ವಲಂಬಿಸಿರುವುದರಿಂದ ನಾನೊಪ್ಪಿಸಿದ ವಂದನೆಯನ್ನು ಸ್ವಲ್ಪವಾಗಿ ಅಲು ಗಿದ ಶಿರದಿಂದ ಪರಿಗ್ರಹಿಸಿ, ಕ್ಷಣಕಾಲ ಮಾತ್ರ ಮರೆಯಾಗಿದ್ದು, ಕೂ ಡಲೆ ನಮ್ಮ ವಿಮಾನವು ಮುಂದರಿಯಲು, ತೆರವಾದ ತನ್ನ ದೃಷ್ಟಿ ಯನ್ನು ಮರಳಿ ಸಹಸ್ರರಶ್ಮಿಯಲ್ಲಿ ನೆಲೆಗೊಳಿಸಿದಾನೆ. ಇದೇ ಬಹುಮಂದಿ ಅತಿಥಿಗಳನ್ನು ಸತ್ಕರಿಸುತಲಿದ್ದ ಮಹಾನು ಭಾವನಾದ ಶರಭಂಗವಹರ್ಷಿಯ ಪಾವನವಾದ ಪುಣ್ಯಾಶ್ರಮವು. ಆಹಿತಾಗ್ನಿಯಾಗಿದ್ದ ಆ ತಪಸ್ಸಿಯೇ ಹಿಂದೆ ನಾವಿಲ್ಲಿಗೆ ಬಂದವೇಳೆಯೊ ಳಗೆ ಸಮಿತ್ತುಗಳಿಂದ ಅಗ್ನಿಯನ್ನು ಪ್ರಜ್ವಲಗೊಳಿಸಿ, ಮಂತ್ರ ಪೂತ ವಾಗಿದ್ದ ತನ್ನ ತನುವನ್ನೂ ತನೂನಗಾತಿನಲ್ಲಿ ಹೋಮಾಡಿದನು ಆ ಮಹಾಮುನಿಯ ತಪೋವನದಲ್ಲಿನ ಫಲವೃಕ್ಷಗಳೇ ಈಗ ದಾರಿನಡೆದು ಬಳಲಿ, ಅತಿಥಿಗಳಾಗಿ ಬಂದವರಿಗೆ ನೆಳಲನ್ನಿತ್ತು ಹಣ್ಣು ಹಂಪಲುಗಳಿಂದ ಉಪಚರಿಸಿ, ಅಭ್ಯಾಗತ ಸತ್ಕಾರವನ್ನು ಸುಖವಾಗಿ ನಡೆಸುತಲಿವೆ. ಅದರಿಂದ ಒಳ್ಳೆಯ ಮನೆತನದ ಸುಪುತ್ರರಲ್ಲಿ ಹೇಗೋ ಹಾಗೆ ಈ ವನ