ಪುಟ:ರಘುಕುಲ ಚರಿತಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ] ರಘುಕುಲಚರಿತಂ. 4 » ತರುಗಳಲ್ಲಿಯೂ ಸತ್ಕಾರ ಸಂಪ್ರದಾಯವು ನೆಲೆಗೊಂಡಿದೆ. ಓ ಸುಂದ ರಾಂಗಿ ! ಎಡಬಿಡದೆ ಹರಿಯುವ ಜಲಧಾರೆಯ ಧ್ವನಿಯಿಂದೊಡಗೂ ಡಿದ ಗವಿಯೆಂಬ ಮುಖವುಳುದೂ, ತುದಿಗೆ ಸಿಲುಕಿರುವ ಮೋಡವೆಂಬ ಗೂಟಿಯಾಟದ ಕೆಸರು ಮಣ್ಣಿನಿಂದೊಡಗೂಡಿದ ಕೊಡುಳ್ಳದೂ ಆಗಿ ರುವ ಈ ಚಿತ್ರಕೂಟವು-ಕೊಬ್ಬಿ ಗುಟರಿಕೆಯನ್ನು ಹಾಕುತಲಿರುವ ಗೂ ೪ಯಂತೆ ನನ್ನ ದೃಷ್ಟಿಯನ್ನು ಸೆಳೆಯುತಲಿದೆ, ಬಹು ನಿರ್ಮಲವೂ, ಗಂಭೀರವೂ ಆಗಿರುವ ಪ್ರವಾಹವನ್ನೊಳಗೊಂಡು, ಪಾತ್ರವು ವಿಸ್ತಾ ರವಾಗಿದ್ದರೂ ಇಲ್ಲಿಗೆ ಬಹು ದೂರವಾಗಿರುವುದರಿಂದ ಬಹು ಸೂಕ್ಷ್ಯ ವಾಗಿಯೂ ನೀಳವಾಗಿಯೂ ಕಾಣಬರುತ, ಚಿತ್ರಕೂಟದ ಬಳಿಯಲ್ಲಿ ಹರಿಯುತಲಿರತಕ್ಕೆ ಈ ಮಂದಾಕಿನಿಯೆಂಬ ನದಿಯು-ಭೂದೇವಿಯ ಕೊರಳಿಗೆ ಇಳಿದು ಹಾಕಿರುವ ಮುತ್ತಿನಹಾರದಂತೆ ಕಂಗೊಳಿಸುತಲಿ ರುವುದು, ಈ ಗಿರಿಯ ಹತ್ತಿರದಲ್ಲಿಯೇ ಒಂದು ಕರಿಯ ಹೊಂಗೆಯ ಗಿಡವು ಕಾಣಬರುತಲಿದೆ ನೋಡು, ತಳತಳಿಸುವ ಇದರ ಚಿಗುರಿನ ಗೊಂಚಲನ್ನು ಒಂದು ಸಾರಿ ನಾನು .. ಯುವಾಂಕುರದಂತೆ ಬೆಳಗುವ ನಿನ್ನ ಕಪೋಲಕ್ಕೆ ಅಲಂಕಾರವಾಗಿರುವಂತೆ ಕಾರ್ಣಾಭರಣವನ್ನಾಗಿ ನಿಂಗರಿಸಲಿಲ್ಲವೆ ? ಇತ್ತ ಮತ್ತೊಂದು ಅಮೋಘವಾದ ವನವು ಕಂಗೊಳಿಸುತ ಲಿದೆ, ಇದನ್ನವಲೋಕಿಸು- ಇಲ್ಲಿ - ದಂಡಿಸುವರೆಂಬ ಭಯವಿಲ್ಲದೆಯೇ ಮೃಗಗಳು ಬಹು ಶಾಂತ ಸ್ವಭಾವದಿಂದಿರುವುವು, ಹೂಬಿಡದೆಯೇ ಯಾವಾಗಲೂ ವೃಕ್ಷಗಳು ಫಲಭರಿತಗಳಾಗಿವೆ. ಈ ಪುಞ್ಞಾ ಶ್ರಮವೇ ಅತಿ ಮಹಾಮುನಿಯ ತಪಸ್ಸಿಗೆ ಸಾಧನವೆನಿಸಿರುವುದು, ತನ್ನ ಸ್ಥಿತಿ ಯಿಂದಲೇ ತಪೋನಿಧಿಯ ಅಪಾರವಾದ ತಸಃ ಪ್ರಭಾವವನ್ನು ಸೂಚಿಸುತಲಿದೆ. ಸರ್ವಲೋಕ ಪ್ರಸಿದ್ಧವಾದ ಮಹಿಮೆಯನ್ನೊಳಗೊಂಡಿರುವ ಆ ಅತ್ತಿಮಹಾ ಮುನಿಯ ಧ'ಕಳತ್ರವಾದ ಅನಸೂಯೆಯು-ಕಶಪಾದಿ ಸಪ್ತರ್ಮಿಗಳು ಪೂಜಾರ್ಥ ವಾಗಿ ಎತ್ತಿಕೊಳ್ಳತಕ್ಕ ಕನಕ ಕಮಲಗಳ ನ್ನೊಳಗೊಂಡು, ಮುಕ್ಕಣ್ಣನ ಮಳಿವಾಲೆಯಂತಿರುವ ತ್ರಿಪಥಗೆಯನ್ನು