ಪುಟ:ರಘುಕುಲ ಚರಿತಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ರಘುಕುಲಚರಿತಂ, ೬೩ MMAMM vw < ೧ • • • • • • • • • • • • ••••••••••••• ೧ ರಾಜೇಂದ್ರನು-ಮೆರವಣಿಗೆಯಿಂದ ಹೊರಟು, ವಂಶಾನುಕ್ರಮವಾಗಿ ಬಂ ದಿರುವ ರಾಜಧಾನಿಯನ್ನು ಪ್ರವೇಶಿಸುತಲಿದ್ದನು, ರಥದೊಳಗೆ ಉಭ ಯಪಾರ್ಶ್ವಗಳಲ್ಲಿಯೂ ನಿಂತು ಲಕ್ಷಣ ಶತ್ರುಘ್ನರು-ದಿವ್ಯಚಾಮರಗಳ ನ್ನು ಹಿಡಿದು ಸೇವಿಸುತಲಿದ್ದ ರು. ಭರತನು-ಹಿಂದುಗಡೆಯಲ್ಲಿ ನಿಂತು ಬೆ ಡೆಯನ್ನು ಹಿಡಿದಿದ್ದನು, ಹೀಗೆ ನಾಲ್ಕು ಅವಯವಗಳ ರೂಪವಾಗಿ ರುವ ರಾಮನು-ಸಶರೀರವಾದ ಸಾಮಾದ್ದುಪಾಯಗಳ ರಾಶಿಯಂತೆ ಪುರ ಪ್ರವೇಶಮುಂಗೈದನು. ವುದದೊಳಗಣ ಪ್ರಾಸಾದದ ಮೇಲೆ ವಾಯು ವಶದಿಂದ ಹೊರಡುತಲಿದ್ದ ಅಗುರುಧಮರೇಖೆಯು-ಇಷ್ಟು ದಿವಸವೂ ಸಂಸ್ಕಾರವಿಲ್ಲದೆ ೩ರಿಯಾಗಿದ್ದು, ವನದಿಂದ ಹಿಂದಿರುಗಿ ಬಂದ ರಾಮನಿಂದ ಬಿಡಿಸಲ್ಪಟ್ಟಿರುವ ಅಯೋಧ್ಯಾನಗರೀನಾರಿಯ ಜಡೆಯಂತೆ ಕಂಗೊಳ ಸುತಲಿದ್ದಿತು ಅತ್ತೆಯರಿಂದ ಬಲು ಅಂದವಾಗಿ ಸಿಂಗರಿಸಲ್ಪಟ್ಟು, ಹೆ ಗಸರಿಗೆ ಯೋಗ್ಯವಾಗಿರುವ ಚಿಕ್ಕ ರಥದಲ್ಲಿ ಕುಳಿತು ಬರುತಲಿರುವ ರ ಘುವೀರಪತ್ನಿಯಾದ ಜಾನಕಿಗೆ ಇಕ್ಕೆಲದ ಉಪ್ಪರಿಗೆಗಳ ಮೇಲೆ ಗವಾ ಹ್ನಗಳೊಳಗೆ ನಿಂತು ಅಕ್ಕರೆಯಿಂದ ನೋಡುತಲಿರುವ ಸಾಕೇತಪುರವ ನಿತೆಯರು-ಸ್ಪಸ್ಮವಾಗಿ ತಿಳಿಯುವಂತೆ ಕರಗಳನ್ನು ಜೋಡಿಸಿದ ಅಂಜಲಿ ಗಳಿಂದ ಪ್ರಣಾಮವನ್ನೊಪ್ಪಿಸುತಲಿದ್ದರು, ಪತಿವ್ರತಾ ಶಿರೋಮಣಿಯೆ ನಿಸಿರುವ ವೃದ್ದ ಪು ರಂಧಿಯಾದ ಅನಸೂಯಾದೇವಿಯು ಕೆ ಟ್ಟಿದ್ದ ಶ್ರೀ ಪ್ರತರವೆನಿಸಿದ ಅಂಗರಾಗವನ್ನು ವೈದೇಹಿಯು ತನ್ನ ಮೈಗೆ ಲೇಪಿಸಿ ಕೆಂಡಿದ್ದಳು. ಆಕೆಯ ಸುತ್ತಲೂ ಅದರ ಹೊಳವು ತಳತಳನೆ ಅಖಂ ಡವಾಗಿ ಹೊಳೆಯುತಲಿದ್ದಿ ತು ಇದರಿಂದ ರಾಮನು- ತನ್ನ ಧರ ಪತ್ನಿ ಯನ್ನು ವರಳಿ ಅಗ್ನಿ ಪ್ರವೇಶವನ್ನು ಮಾಡಿಸಿ ಪರಿಶುದ್ಧ ೪ಾಗಿರುವ ಆಂಬುದನ್ನು ಅಯೋಧ್ಯಾನಗರಿಗೆ ತೋರಿಸುತಲಿರುವನೆಂಬಂತೆ ಕಾಣ ಬರುತಲಿದ್ದಿತು. ತರುವಾಯ ಸಹೃದಯನಾದ ರಾಮನು- ಸುಹೃದರಾದ ಸುಗ್ರೀ ವನೇ ಮೊದಲಾದವರಿಗೆ ಸಕಲೋಪಕರಣಗಳಿಂದ ಸಿದ್ಧ ಪಡಿಸಿರುವ ಬಿಡಾ ರಗಳನ್ನು ತೋರಿಸಿ, ಆಮೇಲೆ ತಾನು- ಪೂಜಾರ್ಹಸಾನುಗ್ರೀಸನಾಧ ವಾಗಿ, ಚಿತ್ರಪಟದಲ್ಲಿ ಮಾತ್ರವೇ ಉಳಿದಿರತಕ್ಕ ತನ್ನ ತಂದೆಯ ಮನೆಯನ್ನು ಕಣ್ಣುಗಳಿಂದ ನೀರನ್ನು ತೊಡಿಸುತ ಹೊಕ್ಕನು.