ಪುಟ:ರಘುಕುಲ ಚರಿತಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಶ್ರೀ ಶಾ ರ ದಾ

  • * * *

\\ \ \\" * * * * \y v YYYY • •vo wom ಧಾನ್ಯದಿಂದೊಡಗೂಡಿದುದೂ, ವೈಖಾನಸಮುನಿ ಕನ್ನೆಯರಿಗೆ ಸ್ಥಾನ ವೆನಿಸಿದುದೂ, ಎಳೆಯ ದರ್ಭೆಯ ಹುಲ್ಲಿಗೆಡೆಯಾದುದೂ ಆಗಿರುವ ಭಾ ಗಿರಥೀತೀರ ತಪೋವನಗಳಲ್ಲಿ ಮರಳಿಯೊಂದುಬಾರಿ ಸಂಚರಿಸಿ ಬರ ಬೇಕೆಂದು ನನ್ನ ಮನವು ಅಭಿಪ್ರಿಸುತಲಿದೆ, ಎಂದು ತನ್ನ ಮನೊರ ಥವನ್ನು ಪತಿಗೆ ಅರಿಕೆ ಮಾಡಿದಳು. ಪ್ರಿಯಳ ನುಡಿಯನ್ನಾಲಿಸಿ ಮವು ತೆಯಿಂದ ವಲ್ಲಭೆಯೇ ! ನಿನ್ನ ಮನೋರಥವನ್ನು ನೆರವೇರಿಸುವೆನ.೨” ಎಂದು ರಘುವೀರನು ಮಾತುಕೊಟ್ಟನು, ಆಹಿಂದೆ- ತಾನೊಂದುವೇಳೆ ಸಂತೋಷದಿಂದ ಉಕ್ಕುತಲಿರುವ ಅಯೋಧ್ಯೆಯ ಸೊಬಗನ್ನು ನೋಡ ಬೇಕೆಂದು ಬಗೆದು, ವಿತಪರಿಜನರೊಡನೆ ಅರಮನೆಯು ಚಂದ್ರಶಾಲೆಯ ಸ್ನೇರಿದನ್ನು ಬಹುಸಮೃದ್ಧಿಯಿಂದಿರುವ ಅಂಗಡಿ ಬೀದಿಗಳನ್ನುಳ್ಳುದೂ, ವಿ ಚಿತ್ರವಾದ ರಾಜಮಾರ್ಗಗಳುಳ್ಳುದೂ, ತೇಲಿಹೋಗಿಬರುತಲಿರುವ ನಾವೆ ಗಳಿಂದ ರವ-4 ಆಯವೆನಿಸಿದ ಸರಯನದಿಯನ್ನುಳುದೂ, ಸೌಗವಿಲಾ ನಿಜನಭರಿತವಾದ ಪುರೋದ್ಯಾನವುಳ್ಳ ದೂ ಆಗಿರುವ ಆ ಅಯೋಧ್ಯೆಯ ಸೌಭಾಗ್ಯವನ್ನು ಕಣ್ಣಾರೆ ನೋಡಿ, ಆ ರಘುರಾಜೇಂದ ನು-ಹರ್ಷ ಪರವಶನಾದನು, ಆದರೆ-ರಾಮನು-ಮಾತನ್ನು ಬಲ್ಲವರೊಳಗೂ, ಆಡು ವವರೊಳಗೂ ಬಲುಜಾ ಇನು, ನಗರವನ್ನವಲೋಕಿಸಿದಮಾತ್ರದಿಂದ ತೃಪ್ತನಾಗಲಿಲ್ಲ. ಬಹುಜನಸಮ್ಮತಿಯಿಂದ ತನ್ನ ನಡತೆಯ ಏರುಕೆ ರೆಗಳನ್ನು ತಿಳಿಯಬೇಕೆಂದು ನೆನೆದನು ಆದಿಶೇಷನಂತೆಸೆವ ಬಾಹುದಂಡ ವುಳವನೂ, ಹಗೆಗಳ ಹೆಮ್ಮೆಯನ್ನಡಗಿಸಿದವನೂ ಆಗಿರುವ ಆ ರಾಮು ಭದ್ರನು-ತಾನು ಪಾವನಚರಿತ್ರನಾದರೂ, ಪುರಜನರಲ್ಲಿ ತನ್ನ ಚರಿತ್ರೆಯ ವಿಷಯವಾದ ಕಿಂವದಂತಿಯು ಹೇಗಿರುವುದೆಂದು ಸವಿಾಪದಲ್ಲಿದ್ದ ಗೂಢ ಚಾರನಾದ ಭದ್ರನೆಂಬುವನನ್ನು ಕುರಿತು ರ್ಪಶ್ನೆ ಮಾಡಿದನು | ರಾಮನು ತನ್ನನ್ನು ಬಹಳವಾಗಿ ನಿರ್ಬಂಧಿಸಿ ಕೇಳಲು, ಭದ್ರನುಎಲ್ಲವನ್ನೂ ವಿವರಿಸಿ ಹೇಳತೊಡಗಿದನು:-ಎಲೈ ಮಾನವ ದೇವನೆ! ರಾ ಕಸನ ಮನೆಯಲ್ಲಿ ವಾಸಮಾಡತಲಿದ್ದ ಸೀತಾದೇವಿಯನ್ನು ಮರಳಿಕ ಡಿದ ಒಂದು ಅಂಶವನ್ನು ಬಿಟ್ಟು, ಉಳಿದ ನಿನ್ನ ಸಮಸ್ತ ಚರಿತ್ರೆಯನ್ನೂ, ಲೋಕವೆಲ್ಲ ಒಂದೇ ಮಾತಿನಿಂದ ಕೊಂಡಾಡುತಲಿದೆ ಎಂದು ಹೇಳಿಬಿಟ್ಟ ನು, ಅಹಹ ! ! ಅಂತಪ್ಪ ಕಳತ್ರ ನಿಂದೆಯಿಂದ ಗುರುತರವೆನಿಸಿ,