ಪುಟ:ರಘುಕುಲ ಚರಿತಂ ಭಾಗ ೧.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] ರಘುಕುಲಚರಿತಂ Vs ಹವನಮಾಡಲು, ಕೂಡಲೆ ಬೆಂಕಿಯಿಂದ ಹೊರಟ ಉರಿಯನ್ನೊಳಗೊಂ ಡಿರುವ ಪಾವನವಾದ ಸುವಾಸನೆಯ ಹೊಗೆಯು-ಇಂದುಮತಿಯ ಕವೋ ಲದವರೆಗೂ ಬಂದು, ಕ್ಷಣಕಾಲಮಾತ್ರ ಆಕೆಯ ಕಿವಿಗಲಂಕಾರವಾ ಗಿರುವ ಕನ್ನೆ ದಿಲೆಯಂತೆ ಕಂಗೊಳಿಸುತಲಿದ್ದಿತು. ಆ ವಧೂವದನವುಅಗ್ನಿಯಿಂದ ಹೊರಡುವ ಆಚಾರಧೂಮವನ್ನು ಪರಿಗ್ರಹಿಸಿ, ಕಾಟಿಕೆಯ ದ್ರವದಿಂದ ಚಂಚಲವಾದ ದೃಷ್ಟಿಯುಳ್ಳುದೂ, ಬಾಡಿದ ಯವೆಯ ಮೊಳಕೆಯ ಕರ್ಣಾಭರಣವುಳ್ಳದ, ಕೆಂಬಣ್ಣದ ಕಪೋಲದ ರೇಖೆಗ ಇುಳ್ಳುದೂ ಆಗಿದ್ದಿತು. ಆಮೇಲೆ - ಆ ಕನ್ಯಾಕುಮಾರರೀರ್ವರೂ - ಚಿನ್ನದ ಮಣೆಯಮೇಲೆ ಕುಳಿತು, ವತಪರರಿಂದಲೂ, ನಂಟರಿಂದೊಡ ಗೂಡಿದ ಅರಸನಿಂದಲೂ, ಮಕ್ಕಳೊಂದಿಗರಾದ ಮುತ್ತೆ ದೆಯರಿಂದಲೂ ಆಚಾರಸಿದ್ದವಾದ ಸೇಸೆಯ ಕ್ರಮವನ್ನು ಅನುಭವಿಸಿದರು. ತರುವಾಯ ಛೋಜಕುಲಚಂದ್ರನೆನಿಸಿ,ಸೌಭಾಗ್ಯಶಾಲಿಯಾಗಿರುವ ಅರಸು - ಇಂತು ಆ ಕನ್ನಾವರರಿಗೆ ಪಾಣಿಗ್ರಹಣ ಮಂಗಳ ಮಹೋ ತ್ಸವವನ್ನು ನೆರವೇರಿಸಿ, ಕಲ್ಯಾಣಮಂಡಪದಲ್ಲಿ ನೆರದಿರುವ ದೊರೆವು ಕಳು ಮುಂತಾದವರಿಗೆ, ಬೇರುಬೇರಾಗಿ ಆದರದಿಂದ ಉಚಿತವನ್ನರಿತು ಗಂಧಪುಪ್ಪಾದಿ ಸತ್ಕಾರವನ್ನು ಸಮರ್ಪಿಸುವಂತೆ ಅಧಿಕಾರಿಗಳಿಗಾಜ್ಞಾ ಪಿಸಿದನು, ಆ ಮಹಾಸಭೆಯೊಳಿದ್ದ ಮಹೀಪಾಲರು - ಮೊಸಳೆ ಮುಂ ತಾದ ಕೂರಜಂತುವನ್ನೊಳಗೆ ಅಡಗಿಸಿಕೊಂಡು, ಮೇಲೆ ತಿಳಿಯಾದ ನೀರಿನಿಂದ ಬೆಳಗುವ ಮಡುವಿನಂತೆ, ಎದೆಯೊಳಗೆ ಅವಿತಿರುವ ಹಗೆತನ ವನ್ನು ಹೊರಪಡಿಸದೆ, ಕಪಟದ ನಗೆಮೊದಲಾದ ಸಂತಸದ ಕುರುಹನ್ನು ತೋರುತ್ತಾ, ಭೋದನೊಪ್ಪಿಸಿದ ಉಡುಗೊರೆಯೇ ಮುಂತಾದ ಉಪತಾ ರಗಳನ್ನು, ಕಾಣಿಕೆಯೇ ಮೊದಲಾಗಿರುವ ಮುಯ್ದ ನೆಪದಿಂದ ಆತನಿಗೇ ಸಲ್ಲಿಸಿ, ಅರಸನನ್ನು ಬೆಸಗೊಂಡು, ತಂತಮ್ಮ ಪುರಗಳನ್ನು ಕುರಿತು ಪಯಣಮಂ ಬೆಳಸಿದರು. ಆದರೆ - ಭೋಜರಾಜಧಾನಿಗೆ ಬಂದಿದ್ದ ಅರಸುಮಕ್ಕಳಿಗೆ ಬರಿಗೂ ಆ ಅರಗುವರಿಯು ದೊರೆಯಲಿಲ್ಲವ ? ಅವರೆಲ್ಲರೂ ಗುಟ್ಟಾಗಿ ಒಟ್ಟುಗೂಡಿ “ ನಾವಿಲ್ಲಿ ಅಜನಮೇಲಣ ಹಗೆತನವನ್ನು ತೀರಿಸಿ ಕೊಳ್ಳಲು ಸಾಧ್ಯವಿಲ್ಲ, ನಮ್ಮ ಕೋರಿಕೆಯೇನೋ ಕೈಗೂಡಲಿಲ್ಲ, ' 12 |