ಪುಟ:ರಘುಕುಲ ಚರಿತಂ ಭಾಗ ೧.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಶ್ರೀ ಕಾ ರ ದ . “A # • • • • 2 # / # - 2 * * * / / 2 # # # # # # # # # * / ಹೊಗೆಯಂತೆ ಕಾಣಬರುತ್ತಿದ್ದಿತು, ಬಡಿದಾಟದಲ್ಲಿ ರಥಿಕರಿಗೆ ಪೆಟ್ಟು ಬಿದ್ದು ಮೂರ್ಛಯುಂಟಾದರೆ, ಬೇರೊಂದುಕಡೆಗೆ ಕರೆದೊಯ್ದು ಉಪ ಚರಿಸುವುದು ತಮ್ಮ ಧರವೆಂದು ಸಾರಥಿಗಳು ಹಾಗೆ ಮಾಡಿದಲ್ಲಿ, ಮೂರ್ಛ ತಿಳದೆಷ್ಣ ಕೂಡಲೆ, ಆ ರಥಿಕರು - ಸಾರಥಿಯನ್ನು ಕುರಿತು ಅನುಚಿತ ವನ್ನು ಮಾಡಿದೆ ಎಂದು ಜರೆದು, ಮರಳ ರಣಭೂಮಿಗೈತಂದು, ಮೊದಲು ತಮ್ಮನ್ನು ಅಂಬಿನಿಂದಿಟ್ಟ ರಥಿಕನನ್ನು, ಧಜದಿಂದ ಗುರುತು ಹಿಡಿದು ಹೋರಾಡತೊಡಗುತಿದ್ದರು, ಒಬ್ಬ ರಥಿಕನೆಸೆದ ಬಾಣವು - ಬೇರೊಬ್ಬ ರಥಿಕನ ಬಾಣದಿಂದ ಅರೆದಾರಿಯಲ್ಲಿ ಕತ್ತರಿಸಲ್ಪಟ್ಟ ರೂ, ಅದರಲ್ಲಿ ಉಳಿದ ಅಲಗಿನ ಅರ್ಧಭಾಗನೇ ಪ್ರಯೋಗಕಾರನ ಕರಲಾಘವ ವೇಗದ ಬಲೆಯಿಂದ ಗುರಿಹಿಡಿದು, ಇದಿರಾಳಿಗೆ ಬಂದು ಬಡಿಯುತಲಿದ್ದಿತ ಇದೆ ನಡುವೆ ಬೀಳುತಲಿರಲಿಲ್ಲ. ಆನೆಗಳ ಕಾಳಗದಲ್ಲಿ ಮೇಲೆ ಕುಳಿತಿ ರುವ ಮಾವಟಿಗರೊಳಗೆ ಒಬ್ಬರನ್ನೊಬ್ಬರು ಮೊನೆಯಾದ ಆಯುಧಗಳಿಂದ ಹೊಡೆವಾಗ-ಕತ್ತರಿಸಲ್ಪಟ್ಟು ಮೇಲಕ್ಕೆ ಹಾರಿದ ಶಿರಗಳು - ಆಕಾಶದಲ್ಲಿ ಹಾರುತಲಿರುವ ಡೇಗೆ ಹಕ್ಕಿಗಳ ಕಾಲಿನುಗುರುಗಳಿಗೆ ನಿಲುಕಿ, ಸ್ವಲ್ಪ ಹೊತ್ತಿನಮೇಲೆಯೇ ನೆಲಕ್ಕೆ ಉರುಳುತಲಿದ್ದು ವು, ಒಬ್ಬ ಅಶ್ರಸಾದಿಯುಬೇರೊಬ್ಬ ಅಶ್ವವಾಹನನ್ನು ಹೊಡೆದು, ಕುದುರೆಯ ಬೆನ್ನಿನಮೇಲೆ ಮೂರ್ಛಿಕೆಡಹಿದಬಳಿಕ, ಅವನು ಮತ್ತೊಂದು ಸೆಟ್ಟನ್ನು ತಾಳಲಾರ ನೆಂದರಿತರೆ, ಮೊದಲಿನವನು-ಮರಳಿ ಹೊಡೆಯದಿದ್ದುದು ಮಾತ್ರವಲ್ಲದೆ, ಹಗೆಯನ್ನು ಪಚರಿಸಬಲ್ಲ ಆಳನ್ನು ಬಯಸುತಲಿರುವನು. ದೇಹಾಭಿಮಾ ನವಿಲ್ಲದೆ ಕವಚಧಾರಿಗಳಾದ ವೀರರು - ಕಾಳಗಕ್ಕೆಳಸಿ ಬಂದು, ಒರೆಗ ಳನ್ನು ಹಿರಿದು ಬೀಸಿದ ಖಡ್ಡ ಗಳು - ತೊರವಾದ ಕೊಂಬುಗಳಮೇಲೆ ಬಿದ್ದು, ಬೆಂಕಿಯ ಕಿಡಿಗಳನ್ನೆಬ್ಬಿಸಲು, ಹೆದರಿದ ಆನೆಗಳು - ಸೊಂಡಿ ಲುಗಳ ಫುಾತ್ಕಾರದಿಂದ ಹೊರಟ ಹನಿಗಳಿಂದಲೂ, ಗಾಳಿಯಿಂದಲೂ ಆರಿಸುತಲಿದ್ದು ವು. ಶರಗಳಿಂದ ಇರಿಯಲ್ಪಟ್ಟ ಶಿರಗಳೆಂಬ ಹಣ್ಣು ಗಳ೦ ದಲೂ, ತಲೆಕೆಳಗಾಗಿ ಉರುಳಿದ ತಲೆಪಾಗುಗಳೆಂಬ ಪಾನಪಾತ್ರೆಗಳಿಂ ದಲೂ, ಹರಿಯುತಲಿರುವ ರಕ್ತದ ಕಾಲುವೆಯೆಂಬ ಮದ್ಯರಸದಿಂದಲೂ, ರಣಭೂಮಿಯು ಮೃತ್ಯುವಿಗೆ ಮಾನಭೂಮಿಯಂತಿದ್ದಿತು. ರಣಾಂಗಣ ದಲ್ಲಿ ತುಂಡಾಗಿ ಉರುಳಿರುವ ವೀರರ ತೋಳುಗಳನ್ನು, ಹಕ್ಕಿಗಳು