ಪುಟ:ರಘುಕುಲ ಚರಿತಂ ಭಾಗ ೧.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೯೩ ಕೊಕ್ಕಿನಿಂದ ಕುಕ್ಕುತಲಿರುವುದಂ ಕಂಡು, ಅವುಗಳನ್ನು ಹೆದರಿಸಿ, ಹಾರಿಸಿ, ತಾವುಸೆಳೆದು ತರುವಲ್ಲಿ, ಆ ಬಾಹುಖಂಡದ ಬುಡದಲ್ಲಿದ್ದ ಬಾಪು ರಿಯ ತುದಿಯು ದವಡೆಗೆ ಬಡಿಯಲು, ಮಾಂಸವನ್ನು ತಿನ್ನಬೇಕೆಂಬ ಬಯಕೆಯು ಬಲವಾಗಿದ್ದ ರೂ, ಹೆಣ್ಣು ನರಿಗಳವುಗಳನ್ನು ತೊರೆದು ದೂರ ಸರಿಯುತಲಿದ್ದುವು. - ಆ ಯುದ್ಧಭೂಮಿಯಲ್ಲಿ ಒಬ್ಬ ವೀರನು - ಹಗೆಯ ಕರವಾಳದಿಂದ ತನ್ನ ಕತ್ತು ಕತ್ತರಿಸಲ್ಪಟ್ಟು ಧರೆಗುರುಳಲು, ಸಗ್ಗ ದಿಂದೈತಂದ ವಿಮಾ ನವನ್ನೇರಿ, ದೇವ ಶರೀರವನ್ನಾಂತು, ತನ್ನ ಎಡದ ತೊಡೆಯಮೇಲೆ ಕುಳಿತಿರುವ ದೇವಾಂಗನೆಯೊಡನೆ, ಕಾಳಗದಿಳೆಯೊಳಗೆ ಕುಣಿಯುತ ಲಿರುವ ತನ್ನ ಪೂರ್ವದೇಹದ ಮುಂಡವನ್ನು ನೋಡುತ್ತಾ ತೆರಳುತಲಿ ದ್ದನು. ಕೆಲವುಮಂದಿ ರಥಿಕರಾದ ವೀರರು - ಒಬ್ಬೊಬ್ಬರ ಸಾರಥಿ ಗಳೂ ಮುಡಿದುಹೋಗಲು, ಅವರೇ ಸಾರಥಿಗಳಾಗಿಯೂ, ರಥಿಕರಾ ಗಿಯೂ ಆಗುವರು, ಕುದುರೆಗಳು ಅಳಿಯಲು, ಗದಾಯುದ್ಧದಲ್ಲಿ ತೊಡಗುವರು, ಆಯುಧಗಳು ಮುರಿಯಲು, ಬಾಹುಯುದ್ಧಕ್ಕೆ ತೊಡರಿ ಅಸುಗಳನ್ನು ನೀಗಿಕೊಳ್ಳುತಲಿದ್ದರು, ಮತ್ತೊಂದೆಡೆ ಇಬ್ಬರು ವೀರರುಸಮರಾಂಗಣದಲ್ಲಿ ಬಡಿದಾಡತೊಡಗಿದರು, ಇಬ್ಬರಿಗೂ ಗಾಯಗಳಾಗಿ ಈರ್ವರೂ ಮುಡಿದು ಸಮಕಾಲದಲ್ಲಿಯೇ ಇಬ್ಬರ ಉಸಿರುಗಳೂ ಹಾರಿ ಹೋದುವು. ಇಬ್ಬರೂ ಏಕಕಾಲದಲ್ಲಿ ದೇವಶರೀರವನ್ನು ಪಡೆದರು. ಒಬ್ಬ ದೇವಾಂಗನೆಯನ್ನೇ, ನಾನು ವರಿಸಬೇಕು, ತಾನು ವರಿಸಬೇಕು ಎಂದು ದೇವತ್ಪದಲ್ಲಿಯೂ ಹಗೆತನದ ವಿವಾದವು ತಪ್ಪಲಿಲ್ಲ. ಇಬ್ಬರು ಒಂದೇ ಭೋಗವಸ್ತುವಿನಲ್ಲಿ ಬಯಕೆಗೊಂಡರೆ ವೈರವು ತಪ್ಪದು ರಚನೆಯಿಂದ ನಿಂತಿರುವ ಎರಡು ಸೇನೆಗಳೂ - ಒಂದರಹಿಂದೆ ಒಂದಾಗಿ ಹರಿದುಬರುತಲಿರುವ ಗಾಳಗಳಿಂದ ಬೆಳೆದ ದೊಡ್ಡ ಕಡಲಿನ ಅಲೆಗಳಂತೆ ನೆಲೆಯಿಲ್ಲದ ಸೋಲುಗೆಲುವುಗಳನ್ನು ಪಡೆಯುತಲಿದ್ದು ವು. ಬ೪ಕ ಮಹಾಬಲಶಾಲಿಯಾದ ಅಜನು - ಪರಬಲದಿಂದ ತನ್ನ ದಳವು ಸೋಲನ್ನು ಪಡೆಯುತಲಿದ್ದ ರೂ, ಹಿಂಜರಿಯದೆ, ಅರಿಸೇನೆಯನ್ನೇ ಇದಿರಿಸಿ ತೆರಳಿದನು, ಹುಲ್ಲಿನ ಬಣಬೆಯಿಂದ ಹೊಗೆಯನ್ನು ಗಾಳಿಯು ಎತ್ತ ಸೆಳೆಯುವುದೋ, ಉರಿಯನ್ನೂ ಅತ್ತಲೇ ಸೆಳೆಯುವುದಲ್ಲವೆ ?