ಪುಟ:ರಘುಕುಲ ಚರಿತಂ ಭಾಗ ೧.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಶ್ರೀ ಶಾ ರ ದಾ , (ಅ ಅಸಹಾಯಚೂರನೆನಿಸಿ ಕೊಬ್ಬಿರುವ ಅಜಕುಮಾರವೀರನು - ಕವಚ ನನ್ನಳವಟ್ಟು, ಬತ್ತಳಿಕೆಯನ್ನು ಧರಿಸಿ, ಬಿಲ್ಲನ್ನು ಹಿಡಿದು, ರಥಿಕನಾಗಿ ಕುಳಿತು, ಮಹಾ ವರಾಹರೂಪವನ್ನು ಧರಿಸಿದ ನಾರಾಯಣನು-ಪ್ರಳಯ ಸಮಯದೊಳಗೆ ಉಕ್ಕಳಿಸುತಲಿರುವ ಸಾಗರದ ಜಲವನ್ನು ಹೇಗೋ ಹಾಗೆ, ಹಗೆಗಳ ಪಡೆಯನ್ನು ಅಡಗಿಸುತ ಬಂದನು. ಆ ಆಜೆಯಲ್ಲಿ ಅಜನು - ಬಲ್ಕು ಅಂದವಾದ ಬಲಗಯಿಂದ ಬತ್ತಳಿಕೆಯ ಮೂಲಕ ಬಾಣಗಳನ್ನು ಹಿರಿಯುತಲಿದ್ದುದು ಮಾತ್ರವೇ ಗೋಚರಿಸುತಲಿದ್ದಿ ತು. ಶರಸಂಧಾನ ಮುಂತಾದುದೊಂದೂ ಗೊತ್ತಾಗುತಲಿರಲಿಲ್ಲ. ಕಿವಿಯವರೆಗೆ ಒಂದುಬಾರಿ ಸೆಳೆದ ಹೆದೆಯು - ಹಗೆಗಳನ್ನಿರಿಯುವ ಹಲವು ಬಾಣಗ ಳನ್ನು ಹಡೆಯುತಲಿದೆಯೋ ಎಂಬಂತಿದ್ದಿ ತು, ವೀರಾಗ್ರಗಣ್ಯನಾದ ಅಜನು - ಅರಿಗಳ ಕೊರಳುಗಳನ್ನರಿದು, ಶಿರಗಳನ್ನು ಹರಡಿ, ರಣಭೂ ಮಿಯನ್ನು ಹೊದಿಸಿದನು. ಆ ತಲೆಬುರುಡೆಗಳು - ರೋಷದಿಂದ ಔಡುಗಳನ್ನು ಕಡಿದಿದ್ದು ವು, ಕೆಳದುಟಿಗಳಲ್ಲಿ ಕೆಂಪು ಅಡರಿದ್ದಿತು. ಹಣೆಗ ಳಲ್ಲಿ ಕಣ್ಣು ಹುಬ್ಬುಗಳು ಗಂಟಿಟ್ಟ ಗೆರೆಗಳು ಕಾಣಬರುತಲಿದ್ದುವು. ತದನಂತರದಲ್ಲಿ-ಆನೆ, ಕುದುರೆ, ತೇರು, ಕಾಲಾಳುಗಳೆಂಬ ಸರ್ವ ಸಾಧನಗಳನ್ನೂ ಸಿದ್ಧ ಪಡಿಸಿಕೊಂಡು, ಅರಿಯ ಕವಚವನ್ನಿರಿಯುವ ಸರ್ವಾಯುಧಗಳನ್ನೂ ಹಿಡಿದು, ಸಮರಭೂಮಿಯಲ್ಲಿ ಸರ್ವ ಪ್ರಯತ್ನ ದಿಂದಲೂ ಸನ್ನದ್ದರಾಗಿ, ರೋಪ್ರಪರವಶರಾದ ಸರೋರ್ವಿಪಾಲರೂ ಸೇರಿ ಅಜಕುಮಾರನನ್ನು ಹೊಡೆದರು. ಅರಿಗಳ ಶರಪರಂಪರೆಯಿಂದ ತೇರು ಮುಚ್ಚಲ್ಪಟ್ಟಿತು, ರಥದಜದ ತುದಿಯಿಂದ ಮಾತ್ರವೇ ಅಜನು ಕಾಣಬರತಕ್ಕವನಾಗಿದ್ದು ದರಿಂದ, ಮಂಜಿನಿಂದ ಮುಚ್ಚಲ್ಪಟ್ಟಿರುವ ಮುಂಜಾನೆಯು - ತುಸ ಬೆಳಕನ್ನೊಳಗೊಂಡಿರುವ ರವಿಯಿಂದ ಹೇಗೆ ಹಾಗೆ ಕಂಗೊಳಿಸುತಲಿದ್ದನು. ಅಹಹ !! ಅಜಕುಮಾರನಿಗೆ ಬಹಳ ಒಳ್ಳೆಯ ಸಮಯವು ಸಮನಿ ನಿತು, ಕುಸುಮಶರನಂತೆ ಸುಕುಮಾರನಾದ ಮಹಾರಾಜನಂದನನು ಎಚ್ಚ ರಗೊಂಡನು. ಪೂರ್ವದಲ್ಲಿ ಪ್ರಿಯಂವದನೆಂಬ ಗಂಧರ್ವನಿಂದ ಪಡೆದಿದ್ದ ಗಾಂಧರ್ವಾಸ್ತವನ್ನು ನೆನೆದನು, ನಿದ್ರೆಯಲ್ಲಿ ಮುಳುಗಿಸುವ ಆ ಆಸ್ತ್ರವನ್ನು ಪೊಡವಿಯೊಡೆಯರಮೇಲೆ ಪ್ರಯೋಗಿಸಿದನು. ಬಳಕಲಾ ನರಪಾಲ ಬ ಎ W ಎ ಲು