ಶ್ರೀ ಶಾ ರ ದ . ಕರಗತಳಾಗಿರುವ ಈ ನಿನ್ನನ್ನು ಪಡೆಯಬೇಕೆಂದು ಬಯಸುತಲಿದಾರೆ, ಎಂದ ಅಜಕುಮಾರನ ಮೃದುಮಧುರವಾದ ನುಡಿಯು - ಕಿವಿಯನ್ನು ಹೊಕ್ಕ ಕೂಡಲೆ - ವೈರಿಗಳಿಂದುಂಟಾಗಿದ್ದ ವ್ಯಥೆಯಿಂದ ದೈನ್ಯವನ್ನು ಪಡೆದಿದ್ದ ಇಂದುಮತಿಯ ವದನಾರವಿಂದವು - ನಿಟ್ಟುಸಿರಿನ ಬಿಸಿಯು ತೊಲಗಲು, ಕನ್ನಡಿಯಂತೆ ತನ್ನ ಸ್ವಾಭಾವಿಕವಾದ ನೈರ್ಮಲ್ಯವನ್ನು ಪಡೆದು ಬೆಳಗಿತು. ಯದ್ಯಪಿ ಇಂದುಮತಿಯು – ಪ್ರಿಯವಲ್ಲಭನ ವಿಜ ಯದಿಂದ ಬಹಳವಾಗಿ ಹರ್ಷಿತಳಾದಳು. ಆದರೂ ನಾಚಿಕೆಗೆ ಒಳಗಾಗಿ ದ್ದು ದರಿಂದ ಪತಿಯ ಪರಾಕ್ರಮವನ್ನು ಇದಿರಿಗೆ ಹೊಗಳಲಾರದೆ ಹೋ ದಳು. ಮುಂಗಾರು ಮಳೆಯ ಹನಿಗಳಿಂದ ನನೆದ ಬೈಲುನೆಲವು - ಮಯೂರಗಳ ಕೇಕಾರವಗಳಿಂದ ಮೇಘಸಮುದಾಯವನ್ನು ಹೇಗೋ ಹಾಗೆ, ತನ್ನ ಗೆಳತಿಯರ ಮುಖದಿಂದ ಅಭಿನಂದಿಸಿದಳು. ದೋಷರಹಿತನಾದ ಆ ಅಜಕುಮಾರನು - ಇಂತು ವೈರಿಗಳ ಶಿರಗ ಇಮೇಲೆ ತನ್ನೆ ಡಗಾಲನೂರಿ, ನಿರ್ದುಸ್ಕೃಳಾದ ಇಂದುಮತಿಯನ್ನು ಸ್ವಾಧೀನಪಡಿಸಿಕೊಂಡನು. ತೇರಿನ ಕುದುರೆಗಳ ಧೂಳಿಯಿಂದ ತುಂಬಿದ ಮುಂಗೂದಲುಳ್ಳ ಆ ಭೋಜಕನೈಯೇ ರಘುರಾಜನಂದನನಿಗೆ ಸಾಕ್ಷಾ ತಾಗಿ ಬಂದ ಸಮರವಿಜಯ ಲಕ್ಷ್ಮಿಯಾದಳು. ಅವನು ವಿವಾಹವಿಜಯ ಲಕ್ಷೆಯಿಂದೊಡಗೂಡಿದನೆಂಬ ಸುದ್ದಿಯು ರಘುರಾಜನಿಗೆ ಮೊದಲೇ ಮುಟ್ಟಿದ್ದಿ ತು, ಅದುವರೆಗೆ ಶ್ಲಾ ಸ್ಥಳಾದ ಜಾಯೆಯಿಂದೊಡಗೂಡಿ ಜಯ ಶಾಲಿಯಾದ ಅಜನೂ ಹಿಂದುರಿಗಿ ಬಂದನು. ರಘುವು – ಆ ಕುಲಕುಮಾ ರನಂ ಕಂಡು ಅಭಿನಂದಿಸಿದನು. ಕುಟುಂಬದ ಭಾರವನ್ನು ಅವನಮೇಲೆ ಹೊರಿಸಿದನು. ತಾನು ಮೋಕ್ಷಮಾರ್ಗದಲ್ಲಿ ಅಡಿಯಿಡಲೆಳಸಿದನು, ಕುಲ ಧರ್ಮವನ್ನು ಹೊತ್ತು ನೆರವೇರಿಸತಕ್ಕ ಕುಮಾರನು ದೊರೆತಮೇಲೆ, ಸೂರ್ಯವಂಶದರಸರಿಗೆ ಗೃಹಸ್ಮಾಶ್ರಮವನ್ನು ದಾಟುವುದರಲ್ಲಿಯೇ ಅಭಿರುಚಿ. -ಇಂತು - ಅಜಪಾಣಿಗ್ರಹಣವೆಂಬ ಏಳನೆಯ ಅಧ್ಯಾಯಂ -
ಪುಟ:ರಘುಕುಲ ಚರಿತಂ ಭಾಗ ೧.djvu/೧೦೭
ಗೋಚರ