ಪುಟ:ರಘುಕುಲ ಚರಿತಂ ಭಾಗ ೧.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ f೭ ಶ್ರೀ? ಶ್ರೀ ಶಾರದಾಮ್ಯಾಮೈ ನಮಃ ಈ ಅಮಾಧ್ಯಾಯಂ ¥ಟ ಜMಗಿ ಸೂಚನೆ | ಅರಿಗಳ ನಿ೦ದಜ ನೈತರ : ಸಿರಿಯ ನವಂಗಿತ್ತು ಪೊಕ್ಕೆ ನಾರಘು ಬನಮಂ | ಅರಸಿಯು ವಿರಹದೊಳಗನುಂ | ಕರಗಿದನುರೆ ದುಗುಡದಿಂದ ದಶರಥನಸದು | ತರುವಾಯ - ಅಜನ ಕರವಿನ್ನೂ, ಮಂಗಳಕರವೆನಿಸಿದ ವಿವಾಹ ಕಂಕಣಬಂಧದಿಂದ ಕಂಗೊಳಿಸುತಲಿರುವಾಗಲೇ, ಎರಡನೆಯ ಅಂದುವು ತಿಯಂತಿರುವ ರಾಷ್ಟ್ರೀಲಕ್ಷ್ಮಿಯನ್ನೂ, ರಘುಭೂಪಾಲನು-ಆತನ ಕೈಸೇ ರಿಸಿದನು. ಆದರೆ – ಲೋಕದಲ್ಲಿ- ಅರಸುಮಕ್ಕಳು - ವಿಷಪ್ರಯೋಗವೇ ಮೊದಲಾದ ಮಹಾಪಾಪದ ಕೆಲಸಗಳನ್ನು ಮಾಡಿಯಾದರೂ, ಹೆರರ ಕಂದ ರಾಜ್ಯವನ್ನು ಕಸುಗೊಂಡು ವಶಮಾಡಿಕೊಳ್ಳಲು ಪ್ರಯತ್ನಿ ಸುವುದು ದಿಟ. ಈ ಅಜರಾಸನುವತ್ರ ತಾನಾಗಿಬಂದ ಸಾವಾ ಜ್ಯವನ್ನು ತಂದೆಯ ಆಣತಿಗೆ ಅಡಿಯಾಳಾಗಿ ಪರಿಗ್ರಹಿಸಿದನಲ್ಲದೆ ಸುಖ ದಾಶೆಯಿಂದಲ್ಲ. ಕುಲಗುರುವಾದ ವಶಿವ ಮುನಿಯು - ಸಂಪ್ರದಾಯ ವನ್ನನುಸರಿಸಿ ಅಭಿಷೇಕೋತ್ಸವದಲ್ಲಿ ಮಂಗಳಮೀಠದಮೇಲೆ ಕುಳಿತ ಅಜನನ್ನೂ, ಭೂಮಿಯನ್ನೂ ಪಾವನವಾದ ಮಂತ್ರೋದಕದಿಂದ ಪ್ರೊ ಹಿಸಿದನು. ಆಗಲಾ ವಸುಮತಿಯು - ವ್ಯಕ್ತವಾಗಿ ಉಬ್ಬಿ, ಗುಣವಂ ತನಾದ ಪತಿಯು ದೊರೆತದರಿಂದ ತನಗುಂಟಾದ ಆನಂದವನ್ನು ಕೃತಾರ್ಥ ತೆಯೊಂದಿಗೆ ಸೂಚಿಸುವಂತಿದ್ದಿ ತು. ಇದರಿಂದ ತಂದೆಗೊಂದು ಕೊರತೆ ಯಲ್ಲ, ಏಕೆಂದರೆ ಪಿತನು - 44 ಹೆರರಿಂದ ತನಗೆ ಗೆಲುವನ್ನೂ, ಮಗ ನಿಂದ ಸೋಲನ್ನೂ ಬಯಸಬೇಕು” ಎಂದು ಹಿರಿಯರ ಒಪ್ಪಿತವೇ ಉಂಟ ಲ್ಲವೆ ? ಅಥರ್ವವಿದನಾದ ಆ ಗುರುವಶಿಪಮುನಿಯಿಂದ ವಿಧಿಪ್ರಕಾರ 13