ಪುಟ:ರಘುಕುಲ ಚರಿತಂ ಭಾಗ ೧.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ wwwv ಆಶೆಯನ್ನು ತೊರೆದನು. ಇದು ಇವನ ಕುಲಧರ್ಮ, ಹೇಗೆಂದರೆ. ದಿಲೀಪನ ವಂಶದಲ್ಲದಿಸಿದ ಅವನಿಪಾಲರೆಲ್ಲರೂ - ಮುಪ್ಪು ಬಂದಾಗ ಐಕ್ಯ ವನ್ನು ಚಿರಸರಿಗೊಪ್ಪಿಸಿ, ನಾರುಬಟ್ಟೆಗಳನ್ನು ಡುವ ಮುನಿಗಳ ಹಾದಿಯನ್ನು ಹಿಡಿಯುವುದೇ ವಾಡಿಕೆ. ಅದರಂತೆ ಕಾಡಿಗೆ ಹೊರಡಲು ಅಣಿಯಾಗುತಲಿರುವ ತಂದೆಯನ್ನು ಕಂಡ ಅಹನು - ಆತನ ಅಡಿದಾವ ರೆಗಳಲ್ಲಿ ಸಾಗಿನಿಂದ ಬೆಳಗುವ ಶಿರದಿಂದ ಅಡ್ಡಬಿದ್ದು, ಈ ನನ್ನನ್ನು ಬೈಲುಮಾಡಿ ಹೋಗಕೂಡದೆಂದು ದೈನ್ಯದಿಂದ ಬೇಡುತ ತಡೆದನು. ಹಾಗೆ ಕಣ್ಣುಗಳಲ್ಲಿ ನೀರುತುಂಬಿ ನಿಂತಿರುವ ಮಗನನ್ನು ನೋಡಿದ ರಘುವು – ಪುತ್ರವಾತ್ಸಲ್ಯದಿಂದ, ಅವನನ್ನು ಬಿಟ್ಟು ಹೋಗಬಾರದೆಂದು ನೆನೆದನು, ಆದರೆ - ಬಿಟ್ಟ ಪರೆಯನ್ನು ಹಾವು ಹೇಗೋ ಹಾಗೆಯೇ, ತಾನು ತೊರೆದ ಸಿರಿಯನ್ನು ಮರಳಿ ಪಡೆಯಲಿಲ್ಲ. ಹೀಗಾದಮೇಲೆ ಆ ರಘುವು-ಜಿತೇಂದ್ರಿಯನಾಗಿ ನಾಲ್ಕನೆಯ ಆಶ್ರಮವನ್ನು ಆಶ್ರಯಿಸಿದನು, ಊರಹೊರಗೆ ದೂರದಲ್ಲಿ ಒಂದು ಗುಡಿಸಿಲಿನಲ್ಲಿ ವಾಸಕ್ಕೆ ನಿಂತನು, ಮಗನ ಅನುಭವಕ್ಕೆ ಒಳಗಾಗಿ - ತನಗೆ ಸೊಸೆಯಂತಿರುವ ಸಿರಿಯಿಂದ, ಹೂವು, ಹಣ್ಣು, ನೀರು ಇವುಗಳನ್ನು ಒದಗಿಸಿಕೊಡುವಷ್ಟು ಮಾತ್ರ ಸೇವೆಯನ್ನು ಹೊಂದುತಲಿದ್ದನು, ಒಂದುಕಡೆ ಶಾಂತಿಯಲ್ಲಿ ನಿಂತ ರಘುವ ನ್ನುಳುದೂ, ಮತ್ತೊಂದುಕಡೆ ಏಳಿಗೆಯಲ್ಲಿ ಬರುತಲಿರುವ ಅಜನನ್ನು ೪ುದೂ ಆಗಿರುವ ಅವರ ಕುಲವು - ಒಂದೆಡೆ ಅಸ್ವಾಭಿಮುಖನಾದ ಚಂದ್ರನನ್ನೊಳಗೊಂಡು, ಮತ್ತೊಂದೆಡೆ ಉದಿಸುತಲಿರುವ ರವಿಯ ನೃಳವಟ್ಟುದೂ ಆಗಿರುವ ಮುಗಿಲಿನೊಡನೆ ಸಾಮ್ಯವನ್ನು ಪಡೆಯಿತು. ಯತಿಭೂಪತಿಗಳ ಲಕ್ಷಣಗಳನ್ನು ತಾಳಿರುವ ಆ ರಘುರಾಘವರನ್ನು ನೋ ಡಿದ ನಾಡಿನ ಜನರೆಲ್ಲರೂ, ಭೂಮಿಯಲ್ಲಿ ಅವತರಿಸಿ ಆರತಕ್ಕ,ಅಪವರ್ಗೋ ಈರಗಳಿಗೆ ಸಾಧಕಗಳಾದ ನಿವೃತ್ತಿ ಪ್ರವೃತ್ತಿ ಧರಗಳ ಅಂಶಗಳನ್ನಾಗಿ ಭಾವಿಸಿದರು, ಅಜನು - ವಿಜಯಪದವಿಯನ್ನು ಪಡೆಯಲು ಉಪಾಯ ಚಿಂತನೆಗಾಗಿ ನೀತಿವಿಶಾರದರಾದ ಮಂತ್ರಿಗಳೊಡನೆ ಕಲೆತನು. ರಘುವುಅಪಾಯವಿಲ್ಲದ ಪರಮಪದವನ್ನು ಹೊಂದಲು ಪದ್ಧತಿಯ ಚಿಂತನೆಗಾಗಿ ಯತಾರ್ಥವಾದಿಗಳಾದ ಯೋಗಿಗಳ ಸಂಗಡ ಸೇರಿದನು. ತರುಣನಾ ಗಿರುವ ಅಜರಾಜನು - ಪುಜಾವ್ಯವಹಾರಗಳ ಗುಣದೋಷಗಳನ್ನು