ಪುಟ:ರಘುಕುಲ ಚರಿತಂ ಭಾಗ ೧.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಶ್ರೀ ' ಶಾ ರ ದ . wwv ವಿಚಾರಮಾಡಲಿಕ್ಕೆ ಧರ್ಮಾಸನವನ್ನು ಏರುತ ಬಂದನು, ಮುಪ್ಪಿನ ಮುದುಕನಾದ ರಘುವಾದರೋ, ಯಮನಿಯಮಾದಿ ಗುಣಗಳಿಂದೊಡ ಗೂಡಿದ ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸುವ ಧಾರಣಾಯೋಗವನ್ನು ಅಭ್ಯಾಸಮಾಡಲು ದರ್ಭಾಸನವನ್ನು ಸೇವಿಸುತಲಿದ್ದನು, ಅಜನು - ಕೋಶ, ದಂಡ, ಬಲ ಎಂಬ ಪ್ರಭುಶಕ್ತಿಯ ಸಂಪತ್ತಿನಿಂದ ತನ್ನ ನಾಡಿನ ಪಕ್ಕದ ನಾಡೊಡೆಯರನ್ನು ಅಡಗಿಸಿ ವಶಪಡಿಸಿಕೊಳ್ಳುತಲಿದ್ದನು, ರಘು ವಾದರೆ - ಸಮಾಧಿಯ ಅಭ್ಯಾಸದಿಂದ ಶರೀರದೊಳಗಣ ಪ್ರಾಣಗಳನ್ನು ನಿಯಮಿಸತೊಡಗಿದನು. ಹೊಸ ಅರಸಾದ ಅಜನು - ಹಗೆಗಳಾದ ಇಳೆ ಯಾರೆಸಗುವ ಪ್ರಯತ್ನಗಳನ್ನು, ಅವುಗಳ ಫಲಗಳೊಂದಿಗೆ ಧ್ವಂಸ ಮಾಡುತಲಿದ್ದನು. ಹಳಬನಾದ ರಘುವು - ಜನ್ಮಾಂತರಕ್ಕೆ ಬೀಜಗ ೪ಾದ ಕರ್ಮಗಳನ್ನು ಜ್ಞಾನಾಗ್ನಿಯಿಂದ ಭಸ್ಮವನ್ನಾಗಿ ಮಾಡಲು ಸಕ್ರಮಿಸಿದನು. ಆ ಇಬ್ಬರಲ್ಲೊಬ್ಬನಾದ ರಘುವು - ನಲವನ್ನು ಚಿಂತಿಸಿ, ಸಂಧಿ ಮೊದಲಾದ ಗುಣಗಳನ್ನು ಹರಡುತಲಿದ್ದನು. ಇತರನಾದ ರಘುವೂ, ಸತ್ತಾದಿ ಗುಣಗಳನ್ನು, ಮುರಳಿ ವಿಕಾರ ಪಡೆಯದಂತೆ ಮಣ್ಣು ಹೊನ್ನುಗ ಳನ್ನು ಸಮವಾಗಿ ಭಾವಿಸಿ ಜಯಿಸುತ ಬಂದನು, ನವಪ್ರಭುವಾದ ಅಜನು - ಫಲನಿದ್ದಿಯಾಗುವವರೆಗೂ ಸ್ಥಿರಪ್ರಯತ್ನದಲ್ಲಿ ನೆಲೆಗೊಂಡಿ ಧ್ವನಲ್ಲದೆ ಹಿಂಜರಿದು ವಿರಮಿಸುತಲಿರಲಿಲ್ಲ. ನವೇತರನಾದ ರಘುವು - ಪರಮಾತ್ಮದರ್ಶನವಾಗುವವರೆಗೂ ಸ್ಥಿರಚಿತ್ತನಾಗಿರುತ್ತಾ, ಐಕ್ಯಾನು ಸಂಧಾನವೆಂಬ ಯೋಗವಿಧಿಯಿಂದ ಹಿಂದಿರುಗಲಿಲ್ಲ. ಇಂತು ಆ ಉಳ ಯರೂ-ಜಾಗರೂಕರಾಗಿದ್ದು ಕೊಂಡು, ಹಗೆಗಳ, ಮತ್ತು ಇಂದ್ರಿಯಗಳ ಪ್ರಸರಣೆಯನ್ನು ಅಡಗಿಸಿ, ಪ್ರಿಯಶ್ರೇಯಗಳಲ್ಲಿ ಆಸಕ್ತರಾಗಿ, ಈರುರೂ ಉದಯಾಸವರ್ಗಗಳೆಂಬ ಉಭಯ ನಿದ್ದಿ ಯನ್ನೂ ಕ್ರಮವಾಗಿ ಪಡೆದರು. ಅನಂತರದಲ್ಲಿ ರಘುವು - ಸರ್ವಭೂತಗಳಲ್ಲಿಯೂ ಸಮದೃಷ್ಟಿ ಯುಳ್ಳವನಾಗಿ, ಅಜನ ಅಭಿಲಾಷೆಯನ್ನು ಅನುಸರಿಸಿ - ಕೆಲವುವರ್ಷ ಗಳನ್ನು ಕಳೆದು, ಐಕ್ಯಾನುಸಂಧಾನವೆಂಬ ಯೋಗಸಮಾಧಿಯಿಂದ, ನಾಶವಿಲ್ಲದೆ - ಅವಿದ್ಯೆಗೆ ಪಾರವೆನಿಸಿರುವ ಪರಮಾತ್ಮ ಸಾಯುಚ್ಛವನ್ನು ಪಡೆದನು.