ಪುಟ:ರಘುಕುಲ ಚರಿತಂ ಭಾಗ ೧.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಕತಂ MON ಇತ್ತ ಆಹಿತಾಗ್ನಿಯಾಗಿದ್ದ ರಾಘವನಿಗೆ, ರಘುವು ಶರೀರವನ್ನು ತೊರೆದನೆಂಬ ಸುದ್ದಿಯು ತಿಳಿಯಿತು. ಬಹಳ ಹೊತ್ತು ವ್ಯಥೆಪಟ್ಟು ದುಃಖಿಸಿದನು, « ಸರ್ವಸಂಗ ನಿವೃತ್ತಿಯಿಂದ ಧ್ಯಾನಯೋಗಾಸಕ್ತನಾಗಿ ದೇಹತ್ಯಾಗವನ್ನು ಮಾಡಿದ ಯೋಗಿಗೆ ದಹನಕರ್ಮವೂ, ವಿಂಡೋದಕ ಕ್ರಿಯೆಗಳೂ ಇಲ್ಲ, ಇಂತಹ ಭಿಕ್ಷುವಿನ ಕಳೇಬರವನ್ನು ಬಿಲದಲ್ಲಿ ನಟ್ಟು, ಪ್ರಣವದಿಂದ ಪ್ರೋಕ್ಷಣಾದಿಗಳನ್ನು ನೆರವೇರಿಸಬೇಕು,, ಎಂಬ ವಿಧಿಯನ್ನು ಬಲ್ಲವನಾಗಿದ್ದು ದರಿಂದ, ಹಾಗೆಯೇ ಇದ್ದ ಆತನಿಗೆ, ಅದೇ ವಿಧಿ ಯನ್ನು ಅನುಸರಿಸಿ, ಯತಿಗಳ ಸಹಾಯದಿಂದ ಅಗ್ನಿ ಸಂಸ್ಕಾರವಿಲ್ಲದ ಅಂತ್ಯೇಷ್ಮೆಯನ್ನು ಕ್ರಮವಾಗಿ ನೆರವೇರಿಸಿದನು. ಯದ್ಯಪಿ-ಜನಕನಿಗೆ ಮಾಡಬೇಕಾದ ತಿಲೋದಕ, ಪಾರ್ವಣ, ದಾನ ಮೊದಲಾದ ಪಿತೃಕಾರದ ಕಲ್ಪವನ್ನೆಲ್ಲ ತಿಳಿದಿರುವ ಆ ಅಜನು - ಆಗ ಪಿತೃಭಕ್ತಿಯಿಂದ ರಘುವಿಗೆ ಔರ್ಧ್ವದೈಹಿಕ ಕರ್ಮವನ್ನೆಲ್ಲ ಮಾಡಿ ದನು, ಆದರೆ – ಯೋಗಮಾರ್ಗದಿಂದ ಶರೀರವನ್ನು ತೊರೆದ ಆ ರಘು ವಿನಂತಹ ಮಹಾತ್ಮರು - ಮಕ್ಕಳು ಕೊಡುವ ವಿಂಡದಾನಾದಿಗಳನ್ನು ಅಪೇಕ್ಷಿಸುವುದಿಲ್ಲ. ತಂದೆಯು ದಿವಂಗತನಾದನೆಂಬ ಕೊರತೆಯು ಅಜನನ್ನು ಬಹಳ ವಾಗಿ ಬಾಧಿಸುತಲಿದ್ದಿತು, ಪರಮಾರ್ಥ ತತ್ಯವನ್ನು ತಿಳಿದ ಪ್ರಜ್ಞರು ಅಜನನ್ನು ಕುರಿತು ಎಲೈ ಮತಿಯುತನಾದ ಮಹಾರಾಜನೆ ! ನೀನು ಸಂಸಾರಭೂಮಿಯನ್ನು ಅರಿಯದವನಲ್ಲ, ನಿಮ್ಮ ತಂದೆಯು - ಧರ ದಿಂದ ರಾಜ್ಯವನ್ನಾಳಿ, ಅನೇಕ ಸತ್ತರಗಳನ್ನಾಚರಿಸಿ, ಸತ್ಯವಂತನೆಂದು ಪ್ರಖ್ಯಾತನಾಗಿ, ಸುಪುತ್ರನಾದ ನಿನಗೆ ರಾಜ್ಯಭಾರವನ್ನೊಪ್ಪಿಸಿ, ಮುನಿ ವೃತ್ತಿಯಿಂದ ಮಹಾಯೋಗಿಗಳು ಪಡೆಯತಕ್ಕ ಶ್ರೇಷ್ಠತರವೆನಿಸಿದ ಮುಕ್ತಿಸಾಮ್ರಾಜ್ಯವನ್ನು ಪಡೆದು ಆನಂದಿಸುತಲಿರುವಲ್ಲಿ, ನೀನು ವ್ಯಥೆ ಪಡುವುದು ಧರ್ಮವಲ್ಲ. ಶಾಂತನಾಗಿ ಸಂತೋಷದಿ ದ ಮುಂದಿನ ಕರ್ತವ್ಯಗಳನ್ನು ನಿರ್ವಹಿಸು ,, ಎಂಬಿದೇ ಮೊದಲಾದ ಸಮಾಧಾನ ವಚನಗಳನ್ನು ಹೇಳಿ, ಸಂಸ್ಥನಾಗುವಂತೆ ಮಾಡಿದರು. ದುಃಖಕ್ಕೆ ಹುಟ್ಟ ದಾಗ ಇದ್ದ ಶಕ್ತಿಯೇ ಯಾವಾಗಲೂ ಏಕರೀತಿಯಿಂದಿದ್ದರೆ, ಲೋಕವ್ಯವ ಹಾರವು ನಡೆಯುವುದುಂಟೆ ? ಎಂದಿಗೂ ಆಗಲಿಕ್ಕಿಲ್ಲ. ಬಳಿಕ ದಿನ