ಪುಟ:ರಘುಕುಲ ಚರಿತಂ ಭಾಗ ೧.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತ ೧೦೫ ಮೃತ್ಯುವು - ಮೃದುವಾದ ಪದಾರ್ಥವನ್ನು ಕೋಮಲವಾದ ವಸ್ತುವಿ ನಿಂದಲೇ ಕೊಲ್ಲಬೇಕೆಂದು ಗೊತ್ತು ಮಾಡಿರುವನೋ ಹೇಗೋ ? ಅದರಿಂ ದಲೇ - ಹಿಮವು ಸುರಿಯುವುದರಿಂದ ತಾವರೆಯ ಬಳ್ಳಿಯು ಬಳಲು ವುದು ಮೊದಲನೆಯ ಉದಾಹರಣೆಯಾಗಿಯೂ, ಕುಸುಮ ಸಂಪರ್ಕ ದಿಂದ ಇಂದುಮತಿಯ ಸಾವು ಎರಡನೆಯ ದೃಷ್ಟಾಂತವಾಗಿಯೂ ನನಗೆ ಕಾಣಬರುತಲಿದೆ. ಅಹಹಾ ! ಹೂವಿನ ಹಾರವೇ ಪ್ರಾಣಾಪಹಾರಿ ಯಾದರೆ, ಎದೆಯಮೇಲಿಟ್ಟರೂ ಅದೇ ನನ್ನ ಉಸಿರನ್ನೇಕೆ ಹಾರಿಸದೆ ಇದೆ ? ದೇವರ ಸಂಕಲ್ಪದಿಂದ ಕೆಲವೆಡೆಗಳಲ್ಲಿ ಅಮೃತವುವಿಷವಾಗಿಯೂ, ವಿಷವು ಅಮೃತವಾಗಿಯೂ ಪರಿಣಮಿಸಬಹುದಲ್ಲವೆ ? ಅಥವಾ ವಿಧಿಯು - ನನ್ನ ದುರದೃಷ್ಟ್ಯದಿಂದ ಸಿಡಿಲನ್ನು ಹೂವಿನ ಹಾರವನ್ನಾಗಿ ಕಲ್ಪಿಸಿರಬ ಹುದು, ಹಾಗಾದರೂ ಆ ಸಿಡಿಲಿನ ಬಡತವು – ಆಸರೆಯಾದ ಮರದಂ ತಿರುವ ನನ್ನನ್ನು ಕೆಡಹದೆ, ಹಬ್ಬಿದ ಬಳ್ಳಿಯಂತಿರುವ ಈ ಇಂದುಮತಿ ಯನ್ನೇ ಉರುಳಿಸಲು ಕಾರಣವೇನು ? ಓ ಪ್ರಿಯವಲ್ಲಭೆಯೇ ! ನಾನು ಎಷ್ಟೋ ದೊಡ್ಡ ತಪ್ಪುಗಳನ್ನು ಮಾಡಿದಾಗಲೂ, ಒಂದು ವೇಳೆಯ ಲ್ಲಿಯೂ ನನ್ನನ್ನು ಅಸಡ್ಡೆ ಮಾಡಿ ಮಾತನಾಡಿಸದೆ ಸಿಟ್ಟುಗೊಂಡಿದ್ದವಳ ಲ್ಲವಲ್ಲಾ ? ಅಂಥವಳಗ - ಯಾವುದೊಂದು ಅಪರಾಧವೂ ಇಲ್ಲದಿರುವ ಈ ನನ್ನನ್ನು ಮಾತನಾಡಿಸಲು ಅಯೋಗ್ಯನನ್ನಾಗಿ ತಿಳಿದಿರುವುದೇಕೆ ? ಎಲೆ ಬೆಳ್ಳಗೆಯ ಹೆಣ್ಣೆ ! ಕೇಳಿ ಒಡಂಬಡಿಸದೆಯೇ, ಈ ಲೋಕವನ್ನು ಬಿಟ್ಟು ಪರಲೋಕವನ್ನು ಕುರಿತು ಹಿಂದುರುಗದಿರುವಂತೆ ತೆರಳಿದುದರಿಂದ ನೀನು ನನ್ನನ್ನು ಕಪಟಪ್ರಿಯನನ್ನಾಗಿಯೇ ತಿಳದಿದ್ದುದು ದಿಟ. ಸಂಶ ಯವೇ ಇಲ್ಲ. ಆಹಾ ! ನಾನು ಕಳ್ಳನಾದೆನು ನೋಡಿದೆಯ ? ಅಯ್ಯೋ ! ಈ ನನ್ನ ಹಾಳುಪ್ರಾಣವು - ಪ್ರಿಯವಲ್ಲಭೆಯನ್ನು ಹಿಂಬಾಲಿಸಿಯೇ ಹೊರಟುಹೋಗಿದ್ದಿ ತಲ್ಲಾ ? ಮರಳಿ ಅವಳನ್ನುಳಿದು ಹಿಂದಿರುಗಿ ಬರಲು ಕಾರಣವೇನು ? ಯಾರು ಬರಹೇಳಿದರು ? - ಮಾಡಿದುದನುನ್ನೋ ಮಾರಾಯ ೨ ಎಂಬಂತೆ, ಈಗ ತಾನಾಗಿ ಮಾಡಿಕೊಂಡ ಪ್ರಬಲವಾದ ಯಾತನೆಯನ್ನು ತಾನೇ ಅನುಭವಿಸಲಿ, ಸ್ವಯಂಕೃತಾಪರಾಧಕ್ಕೆ ಸೈರ ಹೆಯೇ ಶರಣಲ್ಲವೆ ? ವನವಿಹಾರದ ಬಳಲಿಕೆಯಿಂದುಂಟಾದ ಬೆವರಿನ ಹನಿಯು ನಿನ್ನ ಮುಖದಲ್ಲಿ ಆರದೆ ಕಂಗೊಳಿಸುತಲಿದೆ, ಮತ್ತು - 14