ಪುಟ:ರಘುಕುಲ ಚರಿತಂ ಭಾಗ ೧.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತ ೧೦೩ ಮೇಖಲೆಯು - ಮರಳ ಎಚ್ಚರವಿಲ್ಲದಂತೆ ಮಲಗಿರುವ ನಿನ್ನನ್ನು ಅನುಸ ರಿಸಿ, ಮಂದಯಾನವಿಲ್ಲದುದರಿಂದ ಮಾತನಾಡದೆ ಶೋಕಭಾರವನ್ನು ತಾಳಲಾರದೆಯೂ, ಸಂಗಡಲೇ ಮಡಿದುಹೋಗಿರುವಂತೆ ಕಾಣಬರುತ ಲಿದೆ. ಹಾ ! ಎಲೆ ದಯಿತೇ ! ದಿವಂಗತಳಾಗಬೇಕೆಂದು ಬಯಸಿದ ನೀನು - ಮುಂದೆ « ನನ್ನಗಲಿಕೆಯನ್ನು ತಾ೪ ಇವನು ಬಾಳಲಾರನು ೨ ಎಂದುಮೊದಲೇ ಚಿಂತಿಸಿ, ಕನಿಕರಗೊಂಡು, ನನ್ನ ಪ್ರಾಣಧಾರಣೆಗೆ ಸಲಕರಣೆಗಳಾಗಿರುವಂತೆ ಹೆಂಗೋಗಿಲೆಗಳಲ್ಲಿ ನಿನ್ನ ಮಧುರ ಭಾಷಣ ವನ್ನೂ, ಕಲಹಂಸಿಗಳಲ್ಲಿ ಮಂದಗಮನವನ್ನ, ಹೆಣ್ಣು ಹುಲ್ಲೆಗಳಲ್ಲಿ ಅಂದವಾದ ನೋಟವನ, ಗಾಳಿಯಿಂದ ಸಿಗುವ ಎಳ ಬಳ್ಳಿಗಳಲ್ಲಿ ಬೇಡ ಗುಗಳನ್ನೂ, ನೆಲೆಗೊಳಿಸಿದುದೇನೋ ನ್ಯಾಯವೇ ಸರಿ. ನಿನ್ನ ವಿರಹ ದಿಂದ ಹೇರಳವಾದ ನೋವನ್ನಾ೦ತಿರುವ ನನ್ನ ಮನವನ್ನು ಅವು ನೆಲೆಗೆ ನಿಲ್ಲಿಸಲಾರವು, ಮತ್ತು - ನಿನ್ನಾ ಮನೋಹರ ಗುಣಗಳಗೆಡೆಗೊಟ್ಟು, ನನ್ನ ಪ್ರಾಣಹರಣಕ್ಕೆ ಸಲಕರಣೆಗಳೆನಿಸುವುವು, ಅಯ್ಯೋ, ಎಲೆ ಪ್ರಿಯೆ ! ಈ ಹೂದೆ 23 ಟದಲ್ಲಿ ಇದಕೋ-ಈ ನಿಹಿಮಾವಿನ ಗಿಡವನ್ನೂ, ಇದರಬ೪ ಹಬ್ಬಿ ಬೆಳೆದಿರುವ ಪ್ರಿಯಂಗುಲತೆಯನ್ನೂ ದಂಪತಿಗಳೆಂದು, ಮಕ್ಕಳಿಗಿನ್ನುಡಿಯಾದ ಮಮತೆಯಿಂದ ಬೆಳೆಯಿಸಿ, ಇವುಗಳಿಗೆ ವಿವಾಹ ಮಂಗಳವಿಧಿಯನ್ನು ನೆರವೇರಿಸದೆಯೇ ಲೋಕಾಂತ ಕ್ಕೆ ತೆರಳಿದುದು ಯುಕ್ತವೆ ? ತಾಯಿಸ ತಬ್ಬಲಿ ಮಕ್ಕಳಿಗೆ ಸುಖವೆಲ್ಲಿಯದು ? ನೀನುಪಾದೆಗಟ್ಟಿ, ಸೆಬ್ಬೆಯರಿತು, ಗೊಬ್ಬರವಿಟ್ಟು, ನೀರೆರೆದು, ಸಾಕಿದ ಈ ಅಶೋಕಲತೆಯು - ಕುಸುಮವನ್ನು ತೋರುತಲಿದೆ. ನಿನ್ನ ಅಂದವಾದ ಮುಂದಲೆಗೆ ಮುಡಿಸಬೇಕಾದ ಈ ಹೂವನ್ನು, ನಿನಗೆ ಕೊಡುವ ತರ್ಪ ಸೋದಕದ ಸಂಗಡ ಅರ್ಘವನ್ನಾಗಿ ಹೇಗೆ ಒಪ್ಪಿಸಲಿ ? ಕಿವಿಗಿಂಪಾಗಿ ದನಿಗೈವ ಕಡಗಗಳ ದನಿಯನ್ನೊಳಗೊಂಡ ನಿನ್ನಡಿಯ ಅಸದಳಮೆನಿಸದ ಅನುಗ್ರಹವನ್ನು ಪಡೆಯುತಲಿದ್ದ ಈ ಅಶೋಕಲತೆಯ ಕುಸುಮಗಳನ್ನು ನೋಡಿದರೆ, ಎಲೆ ಮಂಗಳಾಂಗಿ ! ನಿನ್ನ ಅಗಲಿಕೆಯನ್ನು ತಾಳಲಾರದೆ ಶೋಕದಿಂದ ಕಣ್ಣೀರಿನ ಹನಿಗಳನ್ನು ತೊಟ್ಟಿಡಿಸುವಂತೆ ಕಾಣಬರುತ ಲಿದೆ. ಎಲೆ ಕಿನ್ನರಕಂಠಿ ! ನಿನ್ನುಸಿರಿನ ಸುವಾಸನೆಯನ್ನಾಂತ ಪಗಡೆಯ ಹೂಗಳಿಂದ ಟೊಂಕಕ್ಕೆ ಸುತ್ತುವ ಮಂಗಳಮಾಲೆಯನ್ನು ನನ್ನೊಡನೆ