ಪುಟ:ರಘುಕುಲ ಚರಿತಂ ಭಾಗ ೧.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಶ್ರೀ ಶ ರ ದ , ಪೋಣಿಸುತಲಿದ್ದ ನೀನು - ಈ ಸರವು ಮುಗಿಯದೆ ಅರೆಯಾಗಿರುವಾ ಗಲೇ ತೊರೆದು, ಪರಲೋಕವನ್ನೆದಲು ನಿದ್ದೆ ಗೈವುದು ತರವೆ ? ಎಲೆ ಸಹೃದಯೆ ! ನಿನ್ನ ಸುಖದಿಂದ ಸುಖಕ್ಕೂ, ದುಃಖದಿಂದ ದುಃಖಕ್ಕೂ ಪಾಲುಗಾತಿಯರಾಗಿರುವ ಈ ಗೆಳತಿಯರು, ಶುಕ್ಸ್ ಪಕ್ಷದ ಎಳೆಯ ಚಂದಿರನಂತೆ ಅಂದವಾದ ಈ ಮುದ್ದು ಕಂದನು, ನಿನ್ನ ಅನುರಾಗದೊಡನೆ ಬೇರೆನಿಸದ ಈ ನಾನು, ನಿನಗಿಂತು ಜೀವನಸಾಮಗ್ರಿಯಿದ್ದರೂ, ಇದ ನೆಲ್ಲ ಗಮನಿಸದೆಯೇ ತೊರೆದು, ತೆರಳಲೆಳಸಿದ ನಿನ್ನ ಮನವು ದಿಟವಾ ಗಿಯೂ ಬಲು ಕಠಿನವಾದುದೆಂದು ತಿಳಿಯಬೇಕಾಗಿದೆ. ಎಲೆ ಭಾಮಿನಿ ! ಈಗ ನನ್ನ ಧೀರತೆ ಬು ಹಾರಿತು, ಪ್ರೀತಿಯು ಗತಿಸಿತು, ಆಟವು ಮೋಟಾಯಿತು, ಗೀತವು ಸೋತಿತು, ಹಬ್ಬವು ಮಬ್ಬಾಯಿತು, ಒಡವೆಯು ಕಡೆಗಂಡಿತು, ಶಯನವು ಬಯಲಾಯಿತು, “ಓ ನನ್ನ ಸರಸ್ವವೇ ! ನನ್ನ ಗೃಹಿಣಿಯು ನೀನು, ಬುದ್ದಿ ಸಹಾಯವಾದ ಮಂ ತಿಯು ನೀನು, ರಹಸ್ಯದ ಸಖಿಯು ನೀನು, ” ಎಲೆ ಲಲಿತೆ : ಕಲಾ ಪ್ರಯೋಗದಲ್ಲಿ ಪ್ರಜ್ಞಳಾದ ಶಿವಳು ನೀನು, ಹೀಗೆ ಸರ್ವಭೋಗ ಸಾಧನವೂ, ಸರ್ವಾನಂದವೂ ಆಗಿದ್ದ ನಿನ್ನನ್ನು ಸೂರೆಗೊಂಡು, ಕರುಣಾ ಶೂನ್ಯನಾದ ಮೃತ್ಯುವು - ಮತ್ತಾವ ನನ್ನ ಒಡವೆಯನ್ನು ಅಪಹರಿಸ ಲಿಲ್ಲವೋ ಹೇಳು. ಎಲೆ ಮದಿರಲೋಚನೆ ! ನಾನು ಕುಡಿದುಳಿದ ಮಧುರವಾದ ಮಧುರಸವನ್ನು ಪಾನಮಾಡಿ, ಸವಿಗಂಡ ನೀನು - ಪರ ಲೋಕದಲ್ಲಿರುತ್ತಾ, ಕಣ್ಣೀರಿನಿಂದೊಡಗೂಡುವಂತೆ ನಾನು ಕೊಡುವ ತಿಲೋದಕವನ್ನು ಮುಂದೆ ಕುಡಿವುದು ಹೇಗೆ ? ಎಲೆ ಸುಮಂಗಲಿ ! ಸಕಲೈಶ್ವರ್ಯವಿದ್ದ ರೂ ನೀನಿಲ್ಲದಿರುವುದರಿಂದ ಅಜನಿಗೆ ಸುಖವೆಂಬುದು ಇಲ್ಲಿಯವರಿಗೇ ಮುಗಿಯಿತು ಎಂದು ಎಣಿಸು, ಮುನ್ನು ನಿನ್ನೊಡನೆ ಅನುಭವಿಸದಿರುವುದು ಮತ್ತಾವುದೂ ಮುಂದೆ ನನಗೆ ಇನ್ನೆಂದಿಗೂ ಬದಗಲರಿಯದು, ನಿನ್ನನ್ನು ಉಳಿದ ವಿಷಯಾಂತರಗಳು ಎಂತವುಗಳಾ ವರೂ ಅಜನಿಗೆ ರುಚಿಸವು, ಅಜನ ಭೋಗಸಾಧನಗಳಲ್ಲವೂ ಭೋಜ ನಂದನೆಯೇ ಅಲ್ಲದೆ ಬೇರಿಲ್ಲ. ಕೋಸಲ ರಾಜನಾದ ಅಜನು - ಇಂತು ಬಹು ದೀನಸ್ಸರದಿಂದ ಬಲು ಗಟ್ಟಿಯಾಗಿ ಮನಬಂದಂತೆ ಹಂಬಲಿಸಿ ಅಳುತ್ತಾ,ಉದಿರುತಲಿರುವ