ಪುಟ:ರಘುಕುಲ ಚರಿತಂ ಭಾಗ ೧.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಲಚರಿತಂ ೧೧೧ ಅನುಗ್ರಹಿಸಿದನು. ಅದರಿಂದಲೇ ಕಥಕೈಶಿಕರಾಜರ ಮನೆತನದಲ್ಲಿ ಹುಟ್ಟಿ, ನಿನಗೆ ಪಟ್ಟದರಸಿಯಾಗಿರುತ, ಬಹುಕಾಲದಮೇಲೆ ಮಾರುತನ ಮೂಲಕ ಮುಗಿಲಿನಿಂದ ಜಾರಿಬಿದ್ದು ಶಾಪನಿವೃತ್ತಿ ಕಾರಣವಾಗಿದ್ದ ದೇವಕುಸು ಮವಂ ಕಂಡು, ಕೂಡಲೆ ಮೈಮರತು ಧರೆಯನ್ನು ತೊರೆದಳು. ಆದಕಾ ರಣ ಏಯಳಿಗೆ ಅಪಾಯವು ಸಂಭವಿಸಿತೆಂಬ ಕೊರತೆಯನ್ನು ತೊರೆ, ಮತ್ತು - Ic ಜಾತಸ್ಯ ಹಿ ಧುವೊ ಮೃತ್ಯು , ಹುಟ್ಟಿದವನಿಗೆ ಸಾವು ನಿದ್ದವೆಂಬುದು ದಿಟ ಎಂಬುದನ್ನು ನೀನು ಬಲ್ಲೆ, ಆದರೂ, ಪತ್ನಿಯಿಲ್ಲ ದವನಿಗೆ ಪ್ರಾಣಗಳಿಂದೇನು ಫಲ ? ಎನ್ನಬೇಡ, ಧರೆಯನ್ನು ಧರ ದಿಂದ ಪಾಲಿಸು, ಧರಾನಾಥರು ಧರಿತ್ರಿಯಿಂದಲೇ ಕಳತ್ರವಂತರು, ಅದರಿಂದ ನೀನು ಚಿಂತಿಸಬೇಕಾದುದಿಲ್ಲ. ಐಶ್ಚರ್ಯದ ಏಳಿಗೆಯಲ್ಲಿಯೂ ಹೆಮ್ಮೆ ಗೆಡೆಗುಡದೆ, ನೀನು - ನಿನ್ನ ಆತ್ಮಜ್ಞಾನವನ್ನು ಪ್ರಕಟಿಸಿ ಇದ್ದೀಯ. ಮನಸ್ಸಿಗೆ ಜ್ವರವು ಸಂಭವಿಸಿರುವ ಈ ಸಮಯದಲ್ಲಿ ಭ್ರಾಂತಿಗೆಡೆಗುಡದೆ ಆ ಪ್ರಜ್ಞೆಯನ್ನು ಧೀರತೆಯಿಂದ ಮರಳಿ ಪ್ರಕಾಶಗೊಳಿಸು. ವಿವೇ ಕಿಯು ಸರ್ವಾವಸ್ಥೆಗಳಲ್ಲಿಯೂ ಧೀರನಾಗಿರಬೇಕು. ಕಾರಣಾಂತರ ವನ್ನೂ ಕೇಳು-ಒಂದುವೇಳೆ ನೀನು ಬಲವಾಗಿ ಅಳತೊಡಗಿದರೆ ನಿನ್ನ ಪ್ರಿಯಳು ದೊರೆವಳೆ ? ಅಥವಾ - ಆಕೆಯಸಂಗಡ ನೀನೂ ಮೃತನಾದರೆ ಪತ್ನಿಯನ್ನು ಪಡೆಯಬಲ್ಲೆಯ ? ಲೋಕಾಂತರದಲ್ಲಿ ಏಕೆ ಪಡೆಯಬಾ ರದು ಎಂಬೆಯೋ ? ಪರಲೋಕಗತರಾದ ಪ್ರಾಣಿಗಳಿಗೆ ತಂತಮ್ಮ ಕಾ ನುಸಾರವಾಗಿ ಒದಗುವ ಭಿನ್ನ ದೇಹಗಳಿ೦ದ ಗತಿಯ ಬೇರುಬೇರು ಎಂಬುದೇ ದಿಟ, ಆದಕಾರಣ ಅಶೋಕನಾಗಿ ಕುಟುಂಬಿನಿಯನ್ನು ತರ್ಪಣಾದಿಗಳಿಂದ ತೃಪ್ತಿಗೊಳಿಸು, ಹಾಗಿಲ್ಲದಿದ್ದರೆ - « ಬಂಧುಜನರ ಸಂತತವಾದ ನಯನೋದಕವು ಮೃತರಾದವರನ್ನು ಸಂತಾಪಗೊಳಿಸು ವುದು ,, ಎಂದು ಮನು ಮೊದಲಾದ ಮಹಾತ್ಮರೆಲ್ಲರೂ ಹೇಳುತ್ತಾರೆ. ಮುತ್ತು - ಎಲೈ ಪ್ರಾಜ್ಞನೆ ! ಶರೀರಿಗಳಿಗೆ ಮರಣವೇ ಸ್ವಾಭಾವಿಕವಾ ದುದು, ಪ್ರಾಣಧಾರಣವೆಂಬುದು ಅಕಸ್ಮಾತ್ತಾಗಿ ಸಂಭವಿಸತಕ್ಕುದು. ಎಂದರೆ ವಿಕೃತಿ ಎಂದು ವಿದ್ಯಾವಂತರು ಹೇಳುತ್ತಾರೆ, ಪ್ರಾಣಿಯು ಸ್ವಲ್ಪ ಕಾಲ ಜೀವಿಸಿ ಇದ್ದರೂ ಅದನ್ನೇ ಪರಮಲಾಭವೆಂದು ಸಂತೋ. ಹಿಸಬೇಕು, ಸ್ವಭಾವವೆನಿಸಿದ ಮೃತಿಯಲ್ಲಿ ಸಂತವಿಸಬಾರದು, ಅದರಿಂದ